ಉಚಿತ ಕುರಿ-ಮೇಕೆ, ಕೋಳಿ ಸಾಕಣೆ ತರಬೇತಿ | 10 ದಿನ ವಸತಿ, ಉಟೋಪಚಾರ ಸಂಪೂರ್ಣ ಉಚಿತ

ಉಚಿತ ಕುರಿ-ಮೇಕೆ, ಕೋಳಿ ಸಾಕಣೆ ತರಬೇತಿ | 10 ದಿನ ವಸತಿ, ಉಟೋಪಚಾರ ಸಂಪೂರ್ಣ ಉಚಿತ

ಉಚಿತ ವಸತಿ, ಉಟೋಪಚಾರದ ಸಮೇತ ರೈತರು ಮತ್ತು ಗ್ರಾಮೀಣ ಪ್ರದೇಶದ ಯುವಕ, ಯುವತಿಯರಿಗೆ ಕುರಿ, ಮೇಕೆ ಮತ್ತು ಕೋಳಿ ಸಾಕಣೆ ತರಬೇತಿ ಆಯೋಜಿಸಲಾಗಿದೆ. ಆಸಕ್ತರಿಗೆ ನೋಂದಣಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…



Free Sheep-Goat, Poultry Training : 

ಕುರಿ, ಮೇಕೆ ಹಾಗೂ ಕೋಳಿ ಸಾಕಣೆ ಸ್ವಯಂ ಉದ್ಯೋಗದಲ್ಲಿ ಆಸಕ್ತಿಯುಳ್ಳ ರೈತರು ಮತ್ತು ಗ್ರಾಮೀಣ ಭಾಗದ ಯುವಕ, ಯುವತಿಯರಿಗೆ ಸುಸ್ಥಿರ ಬದುಕು ಕಲ್ಪಿಸಿ ಕೊಡುತ್ತಿದೆ. ಸಣ್ಣ ಬಂಡವಾಳದೊ೦ದಿಗೆ, ಸಾಂಪ್ರದಾಯಿಕ ಪದ್ಧತಿಯಲ್ಲಿ ಕುರಿ, ಮೇಕೆ, ಕೋಳಿ ಸಾಕಣೆ ಮಾಡಿ ಸುಭದ್ರ ಬದುಕು ಕಟ್ಟುಕೊಳ್ಳಬಹುದು. ಇದಕ್ಕಾಗಿ ಸರಕಾರ ಮತ್ತು ವಿವಿಧ ಸಂಘ-ಸ೦ಸ್ಥೆಗಳು ಸಾಲ, ಸಹಾಯಧನ ಸೌಲಭ್ಯ ನೀಡುತ್ತವೆ.

ಸಾಲ ಮತ್ತು ಸಹಾಯಧನ ಸೌಲಭ್ಯಕ್ಕೆ ತರಬೇತಿ ಬೇಕು

ಸುಲಭ ಬಡ್ಡಿದರದ ಸಾಲ ಹಾಗೂ ಸಹಾಯಧನದ ಸೌಲಭ್ಯವನ್ನು ಸುಲಭದಲ್ಲಿ ಸಿಗಬೇಕೆಂದರೆ ಕುರಿ, ಮೇಕೆ ಮತ್ತು ಕೊಳಿ ಸಾಕಣೆ ಕುರಿತ ತರಬೇತಿ ಪಡೆದಿರಬೇಕು. ತರಬೇತಿ ಪಡೆದ ಅನುಭವ ಮತ್ತು ಸರ್ಟಿಫಿಕೇಟ್ ಹೊಂದಿದ್ದು; ಇತರ ದಾಖಲಾತಿಗಳನ್ನು ಸಲ್ಲಿಸಿದರೆ ಸಾಲ ಮತ್ತು ಸಹಾಯಧನ ಸೌಲಭ್ಯ ಸುಲಭದಲ್ಲಿ ಸಿಗಲಿದೆ.


ಈ ದಿಸೆಯಲ್ಲಿ ಸರಕಾರ ಹಾಗೂ ವಿವಿಧ ಸಂಘ-ಸ೦ಸ್ಥೆಗಳು ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ. ಹೀಗೆ ಉಚಿತ ವಸತಿ, ಊಟೋಪಚಾರದೊಂದಿಗೆ ಆಯೋಜಿಸಲ್ಪಡುವ ತರಬೇತಿಗೆ ಹಾಜರಾಗಿ ತರಬೇತಿ ಪಡೆದು ಕುರಿ-ಮೇಕೆ, ಕೋಳಿ ಸಾಕಣೆ ಉದ್ಯಮ ಆರಂಭಿಸಬಹುದು.


ಯಾದಗಿರಿಯಲ್ಲಿ 10 ದಿನಗಳ ಕುರಿ-ಮೇಕೆ ತರಬೇತಿ

ಯಾದಗಿರಿಯ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದೊಂದಿಗೆ ಒಟ್ಟು 10 ದಿನ ಕುರಿ ಸಾಕಾಣಿಕೆ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.


ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಆಸಕ್ತರು ಅಗತ್ಯ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಸರು ನೋಂದಣಿ ಹಾಗೂ ಮೊಬೈಲ್: 7019184107, 8296867139, 9483236840, 9008423316 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ದಾವಣಗೆರೆಯಲ್ಲಿ ಕುರಿ-ಮೇಕೆ, ಕೋಳಿ ಸಾಕಣೆ ತರಬೇತಿ

ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಕುರಿ-ಮೇಕೆ ಹಾಗೂ ಕೋಳಿ ಸಾಕಾಣಿಕೆ ತರಬೇತಿಯನ್ನು ಆಯೋಜಿಸಿದೆ. ದಾವಣಗೆರೆ ನಗರದ ಪಶು ಆಸ್ಪತ್ರೆ ಆವರಣದ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ತರಬೇತಿ ನಡೆಯಲಿದೆ.

ಇದೇ ಸೆಪ್ಟೆಂಬರ್ 5 ಮತ್ತು 6ರಂದು ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ನಡೆದರೆ, ಸೆಪ್ಟೆಂಬರ್ 7 ಮತ್ತು 8ರಂದು ಕೋಳಿ ಸಾಕಾಣಿಕೆ ತರಬೇತಿ ಆಯೋಜಿಸಲಾಗಿದೆ. ತರಬೇತಿಗೆ ಹಾಜರಾಗುವ ರೈತರು ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆ ತರಬೇಕು.


ಹೆಚ್ಚಿನ ಮಾಹಿತಿಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ (08192-233787) ಸಂಪರ್ಕಿಸಬಹುದು ಎಂದು ಮುಖ್ಯ ಪಶು ವೈದ್ಯಾಧಿಕಾರಿ ತಿಳಿಸಿದ್ದಾರೆ.

Post a Comment

Previous Post Next Post
CLOSE ADS
CLOSE ADS
×