ಶೀಘ್ರವೇ ಎಪಿಎಲ್, ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಆಹ್ವಾನ

ಶೀಘ್ರವೇ ಎಪಿಎಲ್, ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಆಹ್ವಾನ

 ಕೆಲವು ದಿನಗಳ ಹಿಂದೆ ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಕಾರ್ಡುಗಳಿಗಾಗಿ ಅರ್ಜಿ ಆಹ್ವಾನವನ್ನು ನಿಲ್ಲಿಸಲಾಗಿತ್ತು. 




ಕೆಲವು ದಿನಗಳಿಂದ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಕಾರ್ಡುಗಳಿಗಾಗಿ ಅರ್ಜಿ ಸ್ವೀಕಾರವನ್ನು ನಿಲ್ಲಿಸಲಾಗಿದೆ. ಈಗಾಗಲೇ ಈ ಕಾರ್ಡುಗಳಿಗೆ ಅರ್ಜಿ ಹಾಕಿರುವವರಿಗೆ ಕಾರ್ಡುಗಳು ಸಿಗದೇ, ಹೊಸದಾಗಿ ಅರ್ಜಿ ಹಾಕಲೂ ಆಗದೇ ಜನರು ಪರದಾಡುವಂತಾಗಿದೆ. ಇದರ ನಡುವೆಯೇ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಈ ಬಗ್ಗೆ ಒಂದು ಮಾಹಿತಿ ಹೊರಬಿದ್ದಿದೆ. ಅದೇನೆಂದರೆ, ಅತಿ ಶೀಘ್ರದಲ್ಲೇ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುಗಳಿಗಾಗಿ ಹೊಸದಾಗಿ ಅರ್ಜಿ ಸ್ವೀಕಾರ ಆರಂಭಿಸುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಇರಲೇಬೇಕು ಎಂಬ ನಿಯಮವಿದೆ. ಹಲವಾರು ಮಂದಿ ರೇಷನ್ ಕಾರ್ಡ್ ಅನ್ನು ಮಾಡಿಸಿಯೇ ಇಲ್ಲ. ಇನ್ನೂ ಕೆಲವರ ರೇಷನ್ ಕಾರ್ಡ್ ನಲ್ಲಿ ಮೃತರ ಹೆಸರುಗಳೇ ಮನೆ ಯಜಮಾನತಿ ಹೆಸರಿನಲ್ಲಿದೆ. ಇವರ ಹೆಸರುಗಳನ್ನು ಪರಿಷ್ಕರಿಸಬೇಕಿದೆ. ಗೃಹ ಲಕ್ಷ್ಮಿಯೇ ಅಲ್ಲದಿದ್ದರೂ ವಿಳಾಸ ದೃಢೀಕರಣ ಸೇರಿದಂತೆ ನಾನಾ ಕಾರಣಗಳಿಗಾಗಿ ರೇಷನ್ ಕಾರ್ಡ್ ಬೇಕೇಬೇಕು. ಕೆಲವು ಕಡೆಗಳಲ್ಲಿ ಆಧಾರ್ ಕಾರ್ಡ್ ಇದ್ದರೂ ರೇಷನ್ ಕಾರ್ಡ್ ಬೇಕು ಅಂತ ಕೇಳುವುದುಂಟು. ಹಾಗಾಗಿ, ರೇಷನ್ ಕಾರ್ಡ್ ಮಾಡಿಸಲು ಜನರು ಕಾತುರರಾಗಿದ್ದಾರೆ. ಹಾಗಾಗಿ, ಅವರಿಗೂ ಸದ್ಯದಲ್ಲೇ ರೇಷನ್ ಕಾರ್ಡ್ ಗಾಗಿ ಅರ್ಜಿಗಳನ್ನು ಸ್ವೀಕಾರ ಮಾಡಲಾಗುತ್ತದೆ ಎಂದು ಹೇಳಿರುವುದು ಖುಷಿ ತಂದಿದೆ.

ಅಧಿಕಾರಿಗಳು ಹೇಳೋದೇನು?

ಈಗಾಗಲೇ ಎಪಿಎಲ್, ಬಿಪಿಎಲ್ ಕಾರ್ಡುಗಳಿಗಾಗಿ ಬಂದಿರುವ ಅರ್ಜಿಗಳಲ್ಲಿ ಈಗಾಗಲೇ ಶೇ. 75ರಷ್ಟು ಅರ್ಜಿಗಳನ್ನು ಪರಿಶೀಲಿಸಿ ಓಕೆ ಮಾಡಲಾಗಿದೆ. ಇನ್ನುಳಿದ ಅರ್ಜಿಗಳ ಪರಿಷ್ಕರಣೆಯೂ ಸದ್ಯದಲ್ಲೇ ಮುಗಿಯಲಿದ್ದು ಶೀಘ್ರದಲ್ಲೇ ಈ ಅರ್ಜಿಗಳಿಗೆ ಸಂಬಂಧಿಸಿದಂತೆ ಹೊಸ ಕಾರ್ಡ್ ಗಳನ್ನು ವಿತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ, ಮೃತಪಟ್ಟಿದ್ದರೂ ಅವರ ಹೆಸರುಗಳು ಇನ್ನೂ ಪಡಿತರ ಕಾರ್ಡುಗಳಲ್ಲಿ ಇರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಲಾಗಿದೆ. ಜೊತೆಗೆ, ನಿಯಮಗಳನ್ನು ಮೀರಿ ಪಡಿತರ ಚೀಟಿಗಳನ್ನು ಬಳಸುತ್ತಿರುವುದನ್ನೂ ಪತ್ತೆ ಹಚ್ಚಲಾಗಿದೆ. ಅಂಥ ಎಲ್ಲವುಗಳನ್ನು ಸರಿಪಡಿಸಲಾಗಿದ್ದು, ಈಗ ಬಂದಿರುವ ಅರ್ಜಿಗಳಿಗೆ ಪ್ರತಿಯಾಗಿ ಪಡಿತರ ಚೀಟಿಗಳನ್ನು ನೀಡಿ ಆನಂತರ ಹೊಸ ಚೀಟಿಗಳಿಗಾಗಿ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.




Post a Comment

Previous Post Next Post
CLOSE ADS
CLOSE ADS
×