ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅನ್ನೋ ಹಾಗೆ, ಕೊಂಚ ಕಲಾ ತಣ್ಣಗಾಗಿದ್ದ ಕೋವಿಡ್ ಹೆಮ್ಮಾರಿ ಅಬ್ಬರ ಮತ್ತೆ ಶುರುವಾಗಿದೆ. ಈಗ ಹೊಸ ವೇಷ ಧರಿಸಿ ಬಂದಿರುವ BA.2.86 ರೂಪಾಂತರ ತಳಿ ಹಲವು ದೇಶಗಳಲ್ಲಿ ತಲ್ಲಣ ಮೂಡಿಸಿದೆ.

ಹೊಸ ಕೋವಿಡ್-19 ತಳಿಗಳು ಜಗತ್ತಿನಾದ್ಯಂತ ನಿರಂತರವಾಗಿ ಕಂಡು ಬರುತ್ತಲೇ ಇದೆ. ಎರಿಸ್ ಎಂಬ ತಳಿ ಬ್ರಿಟನ್ ಮತ್ತು ಕೆಲವು ಯುರೋಪಿಯನ್ ದೇಶಗಳಲ್ಲಿ ಹೆಚ್ಚಾಗಿ ಕಂಡು ಬಂದಿದ್ದವು. ಇದೀಗ ಜುಲೈ ಅಂತ್ಯದಿಂದ ಮತ್ತೊಂದು ಹೊಸ ಪ್ರಬೇಧವನ್ನು ಪತ್ತೆಹಚ್ಚಲಾಗಿದೆ.

ಅದಕ್ಕೆ BA.2.86 ಎಂದು ಹೆಸರಿಸಲಾಗಿದೆ. ಇದು ಓಮಿಕ್ರಾನ್ನ ಉಪತಳಿಯಾಗಿದೆ. ಈ ಹೊಸ ತಳಿಗೆ 'ಪಿರೋಲಾ' ಎಂಬ ಅಡ್ಡಹೆಸರನ್ನು ಇಡಲಾಗಿದೆ. ಈ BA.2.86 ಹೊಸ ವೈರಸ್ ಅಮೆರಿಕ, ಇಸ್ರೇಲ್, ಡೆನ್ಮಾರ್ಕ್, ಬ್ರಿಟನ್ ಮುಂತಾದ ದೇಶಗಳಲ್ಲಿ ಕಂಡುಬಂದಿದೆ.
ಈ BA.2.86 ರೂಪಾಂತರವು ಸುಮಾರು ಎರಡು ವರ್ಷಗಳ ಹಿಂದೆ ಹೊರಹೊಮ್ಮಿದ ಕೆಲವು ಓಮಿಕ್ರಾನ್ ರೂಪಾಂತರಗಳಿಗೆ ಹೋಲಿಸಿದರೆ ಸಂಪೂರ್ಣ ರೂಪಾಂತರಗಳನ್ನು ಹೊಂದಿದೆ.
BA.2.86 36 ಹೆಚ್ಚುವರಿ ರೂಪಾಂತರಗಳನ್ನು ಹೊಂದಿದೆ, ಇದು ಹೊಸ ಬೂಸ್ಟರ್ಗಳಿಂದ ಗುರಿಪಡಿಸಲಾದ ಓಮಿಕ್ರಾನ್ XBB.1.5 ಸಬ್ವೇರಿಯಂಟ್ನಿಂದ ಪ್ರತ್ಯೇಕಿಸುತ್ತದೆ.
ಇವುಗಳೂ ಕೂಡ ಸಾಮಾನ್ಯವಾಗಿ ಕೋವಿಡ್ನ ಗುಣಲಕ್ಷಣಗಳನ್ನೇ ಹೊಂದಿದೆ. ಸಾಮಾನ್ಯವಾಗಿ ಕೆಮ್ಮು, ಗಂಟಲು ಕೆರೆತ, ಸ್ರವಿಸುವ ಮೂಗು, ಸೀನುವುದು, ಆಯಾಸ, ತಲೆನೋವು, ಸ್ನಾಯು ನೋವುಗಳು ಹಾಗೂ ವಾಸನೆ ಬರದಿರುವ ಲಕ್ಷಣಗಳನ್ನು ಹೊಂದಿವೆ.
ನಾವು ಇಲ್ಲಿಯವರೆಗೆ ಪತ್ತೆಹಚ್ಚಿದ್ದಕ್ಕಿಂತ ಈ ರೂಪಾಂತರವು ಬಹುಶಃ ಹೆಚ್ಚು ವ್ಯಾಪಕವಾಗಿ ಹರಡುತ್ತಿದೆ ಅಂತ ತಜ್ಞರು ಎಚ್ಚರಿಸಿದ್ದಾರೆ. ವರದಿಗಳ ಪ್ರಕಾರ ಸರಾಸರಿ ದೈನಂದಿನ COVID-19 ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ 24% ಹೆಚ್ಚಳವಾಗಿದೆ ಎನ್ನಲಾಗಿದೆ.
ಹಿಂದಿನ ರೂಪಾಂತರಗಳಂತೆ, BA.2.86 ಸಹ ಗಾಳಿಯಿಂದ ಹರಡುವ ವೈರಸ್ ಆಗಿದೆ. ಇದು ಉಸಿರಾಟ, , ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಮತ್ತು ಮೇಲ್ಮೈ ಮಾಲಿನ್ಯದ ಮೂಲಕ ಹರಡಬಹುದು ಎಂದು ತಜ್ಞರು ಹೇಳಿದ್ದಾರೆ.