ಜನರನ್ನು ಮೋಸಗೊಳಿಸಲು ಹೊಸ ಮಾರ್ಗ ಮತ್ತೆ ಸೃಷ್ಟಿಯಾಗಿದೆ. ಆಧಾರ್ ಕಾರ್ಡ್(Aadhar Card) ನವೀಕರಣ ನಿಮ್ಮ ದಾಖಲೆಗಳ ನವೀಕರಣವೆಂದು ಮೆಸೇಜ್ ಬರುತ್ತಿದ್ದರೆ ದಯವಿಟ್ಟು ಅದನ್ನು ಕಡೆಗಣಿಸಿ. ಇದು ಹ್ಯಾಕರ್ಗಳ ಹೊಸ ತಂತ್ರ. ಆಧಾರ್ ಕಾರ್ಡ್ ನವೀಕರಿಸುವ ಉದ್ದೇಶಕ್ಕಾಗಿ ತಮ್ಮ ಗುರುತು ಅಥವಾ ವಿಳಾಸ ಪುರಾವೆಯನ್ನು ಎಂದಿಗೂ ಕೇಳಲಾಗುವುದಿಲ್ಲವೆಂದು UIDAI ಸ್ಪಷ್ಟಗೊಳಿಸಿದೆ. ಜನರು ಜಾಗರೂಕರಾಗಿ ವಿಶಿಷ್ಟ ಗುರುತಿನ ಪ್ರಾಧಿಕಾರವನ್ನು ಕಾಪಾಡಿಕೊಳ್ಳಬೇಕಾಗಿದೆ.
ಆಧಾರ್ ನಲ್ಲಿ ಏನೇ ನವೀಕರಣ ಮಾಡಬೇಕಿದ್ದರೂ ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ ಸ್ವತಃ ಆನ್ಲೈನ್ ನಲ್ಲಿ ನೀವೇ ಮಾಡಿಕೊಳ್ಳಿ. UIDAI ಸಂಸ್ಥೆಯು ಜನಸಂಖ್ಯಾ ವಿವರಗಳನ್ನು ಮರುಪರಿಶೀಲಿಸಲು ಗುರುತಿನ ಪುರಾವೆ ಹಾಗೂ ವಿಳಾಸದ ಪುರಾವೆ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದೆ. ಆಧಾರ್ ಅನ್ನು 10 ವರ್ಷಗಳ ಹಿಂದೆ ನೀಡಿದ್ದು ಹಾಗೂ ಇದನ್ನು ಇಂದಿನವರೆಗೂ ನವೀಕರಿಸದೆ ಇದ್ದಲ್ಲಿ ಮಾತ್ರ ಕೆಲಸ ಹೆಚ್ಚುತ್ತದೆ.
UIDAI ಉಚಿತ ಆಧಾರ್ ನವೀಕರಣವನ್ನು 14 ಜೂನ್ ಇಂದ 14 ಸೆಪ್ಟೆಂಬರ್ 23ರ ವರೆಗೆ ವಿಸ್ತರಿಸಿದೆ.
ಆಧಾರ್ ಕಾರ್ಡ್ ನವೀಕರಣ ಸೇವೆಯನ್ನು ಪಡೆಯುವುದು ಹೇಗೆ? ಬನ್ನಿ ನೋಡೋಣ:
1. https://myaadhaar.uidai.gov.in/ ವೆಬ್ಸೈಟಿನಲ್ಲಿ ತಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಆಗಬೇಕು.
2. ವಿಳಾಸ ನವೀಕರಣ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ ಮುಂದುವರಿಯಿರಿ.
3. ನೊಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ.
4. ಡಾಕುಮೆಂಟ್ ಅಪ್ಡೇಟ್ ಕ್ಲಿಕ್ ಮಾಡಿ ಮತ್ತು ಅಸ್ತಿತ್ವದಲ್ಲಿರುವ ವಿವರಗಳನ್ನು ಪರಿಗಣಿಸಿ.
5. ವಿವರಗಳು ಸರಿ ಇದ್ದರೆ ಮುಂದೆ ಬರುವ ಹೈಪರ್ ಲಿಂಕ್ ಅನ್ನು ಕ್ಲಿಕ್ ಮಾಡಿ.
6. ಮುಂದಿರುವ ಡ್ರಾಪ್ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಹಾಗೂ ವಿಳಾಸದ ಪುರಾವೆ ದಾಖಲೆಗಳನ್ನು ಆಯ್ಕೆ ಮಾಡಿ.
7. ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ.
8. ನಿಮ್ಮ ವಿನಂತಿಯನ್ನು ಸ್ವೀಕರಿಸಲಾಗುತ್ತದೆ ಹಾಗೂ 14 ಅಂಕಿಯ ನವೀಕರಣ ಸಂಖ್ಯೆಯನ್ನು ರಚಿಸಲಾಗುತ್ತದೆ (URN).
ಈ ಯು ಆರ್ ಎನ್ ಬಳಸುತ್ತಾ ಮುಂದೆ ನಿಮ್ಮ ಅಡ್ರೆಸ್ ನವೀಕರಣವಾಗಿ ಆಧಾರ್ ಕಾರ್ಡ್ ನಿಮ್ಮ ಮನೆಗೆ ಕೊರಿಯರ್ ಬರುತ್ತದೆ ಹಾಗೂ ಒಂದು ವಾರದ ನಂತರ ನೀವು ಹೊಸ ಪ್ರಿಂಟ್ ಔಟ್ ತೆಗ್ದುಕೊಳ್ಳಬಹುದು.