Gruha Jyoti ಯೋಜನೆಯ ಶೂನ್ಯ ದರದ ಬಿಲ್ ಹೇಗಿರಲಿದೆ? ಹಿಂಬದಿಯಲ್ಲಿ ವಿಶೇಷ ಬರಹ

Gruha Jyoti ಯೋಜನೆಯ ಶೂನ್ಯ ದರದ ಬಿಲ್ ಹೇಗಿರಲಿದೆ? ಹಿಂಬದಿಯಲ್ಲಿ ವಿಶೇಷ ಬರಹ

 Gruha Jyoti Electricity bill: ಹಿಂಬದಿಯ ವಿದ್ಯುತ್ ರಶೀದಿಯಲ್ಲಿ ಸೂಚನೆಗಳು ಹಾಗೂ ‌ಬಿಲ್ ಕುರಿತು ಗ್ರಾಹಕರಿಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.



ವಿದ್ಯುತ್ ಬಿಲ್ ಮಾದರಿ

ಬೆಂಗಳೂರು: ಗೃಹ ಜ್ಯೋತಿ ಯೋಜನೆಯ (Gruha Jyoti Scheme) ಲಾಭ ಫಲಾನುಭವಿಗಳಿಗೆ ಸಿಗಲಿದೆ. ನಾಳೆಯಿಂದಲೇ ಮೀಟರ್ ರೀಡಿಂಗ್ ಕಾರ್ಯ ಆರಂಭವಾಗಲಿದ್ದು, ನೋಂದಣಿ ಮಾಡಿಕೊಂಡ ಅರ್ಹ ಫಲಾನುಭವಿಗಳಿಗೆ ಶೂನ್ಯ ದರದ ಬಿಲ್ (Zero Bill) ಸಿಗಲಿದೆ. ಗೃಹಜ್ಯೋತಿ ಕರೆಂಟ್ ಬಿಲ್ ಮಾದರಿ ನ್ಯೂಸ್ 18ಗೆ ಲಭ್ಯವಾಗಿದೆ. ಬಿಲ್ ಮುಂಭಾಗ ಹಾಗೂ ಹಿಂಭಾಗ ಮುದ್ರಣದಲ್ಲಿ ಬದಲಾವಣೆ ಮಾಡಲಾಗಿದೆ. ವಿದ್ಯುತ್​ ಬಿಲ್​ನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar), ಇಂಧನ ಸಚಿವರ ಕೆಜೆ ಜಾರ್ಜ್ (KJ George) ಫೋಟೋ ಹಾಗೂ ಗೃಹಜ್ಯೋತಿ ಲಾಂಛನ ಮುದ್ರಣ ಮಾಡಲಾಗಿದೆ.

ಹಿಂಬದಿಯ ವಿದ್ಯುತ್ ರಶೀದಿಯಲ್ಲಿ ಸೂಚನೆಗಳು ಹಾಗೂ ‌ಬಿಲ್ ಕುರಿತು ಗ್ರಾಹಕರಿಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.


ಜೂನ್ ತಿಂಗಳ ಹಾಗೂ ಜುಲೈ ತಿಂಗಳ ಬಿಲ್ ಭಾರೀ ವ್ಯತ್ಯಾಸ ಉಂಟಾಗಿತ್ತು. ಈಗ ಗೃಹಜ್ಯೋತಿ ಅನುಷ್ಠಾನ ಹಿನ್ನೆಲೆ ಕರೆಂಟ್ ಬಿಲ್​ನಲ್ಲಿ ಮತ್ತೆ ವ್ಯತ್ಯಾಸ ಇರಲಿದೆ. ಎಲ್ಲಾ ಎಸ್ಕಾಂನಲ್ಲಿ ಏಕರೂಪದ ಬಿಲ್ ನೀಡಲು ಇಂಧನ ಇಲಾಖೆ ನಿರ್ಧರಿಸಿದ್ದು, ಆದ್ರೆ ಆಯಾ ಎಸ್ಕಾಂನ ಯೂನಿಟ್ ಬೆಲೆ, ಹೊಂದಾಣಿಕೆ ವೆಚ್ಚದಲ್ಲಿ ಬದಲಾವಣೆ ಇರಲಿದೆ.

ಬಿಲ್​ನಲ್ಲಿ ಏನಿರುತ್ತೆ?


ಮುಂಬದಿಯಲ್ಲಿ ಕರೆಂಟ್ ಬಿಲ್ ಗೃಹಜ್ಯೋತಿ ಯೂನಿಟ್ ಮಾಹಿತಿ, ಪ್ರತಿ ಕಾಲಂ ಸ್ಪಷ್ಟವಾಗಿರಲಿದೆ. ಹೆಚ್ಚುವರಿ ಸರಾಸರಿ ವಿದ್ಯುತ್ ಬಳಕೆ ಮತ್ತು ಗೃಹಜ್ಯೋತಿ ಪರಿಗಣಿಸಿದ ಯೂನಿಟ್ ಅಂಶ ಕಾಲಂ ಸೇರ್ಪಡೆ ಮಾಡಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಬಿಲ್​ಗಳಲ್ಲಿಯೂ ವ್ಯತ್ಯಾಸ ಇರಲಿದೆ.


ಮೂರು ತಿಂಗಳ ಬಿಲ್ ಮನ್ನಾ


ಇದೀಗ ಇಂಧನ ಇಲಾಖೆ ಗೃಹಜ್ಯೋತಿ ಯೋಜನೆ ಫಲಾನುಭವಿಗೆ ಮತ್ತಷ್ಟು ಅನುಕೂಲ ಘೋಷಣೆ ಮಾಡಿದೆ. ಒಂದಲ್ಲ ಕಳೆದ ಮೂರು ತಿಂಗಳು ಬಿಲ್ ಬಾಕಿ ಇದ್ರೂ ಅದನ್ನ ಮನ್ನಾ ಮಾಡಲು ಇಂಧನ ಇಲಾಖೆ ಮುಂದಾಗಿದೆ. ಗೃಹಜ್ಯೋತಿ ಯೋಜನೆ ಫಲಾನುಭವಿ ಆಗಲು ಬಾಕಿ ಬಿಲ್ ಇರಬಾರದಿತ್ತು. ಜೂನ್ ತಿಂಗಳವರೆಗೆ ವಿದ್ಯುತ್ ಬಿಲ್ ಪಾವತಿಸಬೇಕಿತ್ತು.

ಬಿಲ್ ಮಾದರಿ

ಇದೀಗ ಮೂರು ತಿಂಗಳು ಬಿಲ್ ಬಾಕಿ ಇದ್ರೂ ಯೋಜನೆ ಉಚಿತ ವಿದ್ಯುತ್ ನೀಡುವದಾಗಿ ಇಂಧನ ಇಲಾಖೆ ಸ್ಪಷ್ಟಪಡಿಸಿದೆ.


ಆಗಸ್ಟ್ 5ರಂದು ಯೋಜನೆಗೆ ಚಾಲನೆ

Post a Comment

Previous Post Next Post
CLOSE ADS
CLOSE ADS
×