ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2023 | Karnataka Gram Panchayat Recruitment 2023, RDPR Notification 2023

ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2023 | Karnataka Gram Panchayat Recruitment 2023, RDPR Notification 2023

 ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಯಲ್ಲಿ ಖಾಲಿ ಇರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO), ಪಂಚಾಯತಿ ಕಾರ್ಯದರ್ಶಿ ಗ್ರೇಡ್‌-1, ಪಂಚಾಯತಿ ಕಾರ್ಯದರ್ಶಿ ಗ್ರೇಡ್‌-2, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳ ನೇಮಕಾತಿ (Karnataka Gram Panchayat Recruitment 2023) ಗಾಗಿ ಸರ್ಕಾರ ಪ್ರಕ್ರೀಯೆ ಆರಂಭಿಸಿದೆ. ಅದಕ್ಕಾಗಿ ಹೊಸ ಆದೇಶವನ್ನು ಪ್ರಕಟಿಸಲಾಗಿದೆ.



ಗ್ರಾಮ ಪಂಚಾಯತಿ ಹುದ್ದೆಗಳ ನೇಮಕಾತಿಗಾಗಿ ಹಲವು ವರ್ಷಗಳಿಂದ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸಿಹಿ ಸುದ್ದಿಯಾಗಿದ್ದು, ಸರ್ಕಾರಿ ನೌಕರಿ ಆಕಾಂಕ್ಷಿಗಳ ಕನಸು ನನಸಾಗಲಿದೆ.


ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಈ ಹುದ್ದೆಗಳು ಖಾಲಿ ಇರುವುದರಿಂದ ಗ್ರಾಮಗಳ ಅಭಿವೃದ್ದಿ ಕಾರ್ಯಗಳಿಗೆ ಹೊಡೆತ ಬೀಳುತ್ತಿದ್ದು, ಅಧಿಕಾರಿಗಳ ಕೊರತೆ ನಿಗಿಸಲು ಸರ್ಕಾರ ಮುಂದಾಗಿದ್ದು ಒಳ್ಳೆಯ ನಿರ್ಧಾರವಾಗಿದೆ.

Karnataka Gram Panchayat Recruitment 2023 ಮಾಹಿತಿ

ಜುಲೈ 15 ರಂದು ಹೊರಡಿಸಿರುವ ಸರ್ಕಾರದ ಹೊಸ ಆದೇಶವು ಹೀಗಿದೆ ‘ 2020 ರಂದು ಹೊರಡಿಸಿರುವ ಸರ್ಕಾರದ ಅಧಿಸೂಚನೆ – ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ), ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್‌ 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನೇಮಕಾತಿ (ವಿಶೇಷ) ನಿಯಮಗಳು 2019 ಅನ್ನು ಹಿಂಪಡೆಯಲಾಗಿದೆ.


“ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್‌-1, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್‌-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದದ ನೇರ ನೇಮಕಾತಿ ಕೋಟಾದ ಖಾಲಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಮೂಲಕ ಪರೀಕ್ಷೆ ನಡೆಸಿ ನೇಮಕಾತಿ ಮಾಡಲು ಆದೇಶಿಸಿದೆ,” ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.


ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು

ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) – 660

ಪಂಚಾಯತಿ ಕಾರ್ಯದರ್ಶಿ ಗ್ರೇಡ್‌-1 – 604

ಪಂಚಾಯತಿ ಕಾರ್ಯದರ್ಶಿ ಗ್ರೇಡ್‌-2 – 719

ದ್ವಿತೀಯ ದರ್ಜೆ ಲೆಕ್ಕ ಸಹಾಯಕ (SDAA) – 345

ರಾಜ್ಯದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO Recruitment 2023) ವೃಂದದ ನೇರ ನೇಮಕಾತಿ ಕೋಟಾದಲ್ಲಿ ಪಸ್ತುತ 385 ಹುದ್ದೆಗಳು ಖಾಲಿ ಇದ್ದು, ಈ ಪೈಕಿ 150 ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಪ್ರಕ್ರಿಯೆ ಚಾಲ್ತಿಯಿದೆ. ಅಧಿಕೃತ ಅಧಿಸೂಚನೆ (RDPR Notification 2023) ಪ್ರಕಟವಾದ ನಂತರ ಎಷ್ಟು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂಬುದು ತಿಳಿಯಲಿದೆ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.


Karnataka Gram Panchayat Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR)

PDO ವೇತನ ಶ್ರೇಣಿ: 37,900 ರಿಂದ 70,850 ರೂ.

PDO ಹುದ್ದೆಗಳ ಸಂಖ್ಯೆ: 150

ಉದ್ಯೋಗ ಸ್ಥಳ: ಕರ್ನಾಟಕ


PDO Qualification:

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಹೊಂದಿರಬೇಕು.


PDO Salary:

ಪಂಚಾಯತಿ ಅಭಿವೃದ್ಧಿ ಅಧಿಕಾರಿ – 37,900 ರಿಂದ 70,850 ರೂ.


PDO Age Limit:

ಸಾಮಾನ್ಯ ವರ್ಷದ ಅಭ್ಯರ್ಥಿಗಳಿಗೆ: 35 ವರ್ಷ

ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: 38 ವರ್ಷ

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-I ಅಭ್ಯರ್ಥಿಗಳಿಗೆ: 40 ವರ್ಷ

ಅರ್ಜಿ ಶುಲ್ಕ:

SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ: Update Soon

UR/EWS/OBC ಅಭ್ಯರ್ಥಿಗಳಿಗೆ: Update Soon

ಪಾವತಿಸುವ ವಿಧಾನ: ಆನ್‌ಲೈನ್


Karnataka Gram Panchayat Recruitment 2023 ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: Update Soon

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: Update Soon


ಪ್ರಮುಖ ಲಿಂಕ್’ಗಳು:

ಅಧಿಸೂಚನೆ ಮಾಹಿತಿ: ಡೌನ್’ಲೋಡ್

ಆನ್‌ಲೈನ್ ಅರ್ಜಿ: Apply ಮಾಡಿ (Update Soon)

ಅಧಿಕೃತ ವೆಬ್ʼಸೈಟ್: rdpr.karnataka.gov.in


ಹೊಸ ಸರ್ಕಾರವು ಗ್ರಾಮ ಪಂಚಾಯಿತಿ ನೇಮಕಾತಿ 2023 ಯನ್ನು ಆಗಸ್ಟ್‌ ತಿಂಗಳ ಮೂರನೇ ವಾರದ ನಂತರ ಪ್ರಾರಂಭಿಸುವ ಸಾಧ್ಯತೆ ಇದೆ ಹಾಗಾಗಿ ಸ್ಪರ್ಧಾರ್ಥಿಗಳು PDO ಹಾಗೂ ಇತರೆ ಹುದ್ದೆಗಳ ಅಧ್ಯಯನ ಮಾಡುವುದು ಒಳಿತು. ಅಧಿಕೃತ ಅಧಿಸೂಚನೆ ಪ್ರಕಟವಾದ ತಕ್ಷಣ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರುಪ್‌ಗೆ Join ಆಗಿರಿ. ಅಲ್ಲಿ PDO ಹುದ್ದೆಗಳು ಸೇರಿದಂತೆ ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರದ ಉದ್ಯೋಗ ಮಾಹಿತಿಗಳನ್ನು ಶೇರ್‌ ಮಾಡುತ್ತೆವೆ.



Post a Comment

Previous Post Next Post
CLOSE ADS
CLOSE ADS
×