ರಾಜ್ಯದ ಎಲ್ಲ ಪದವಿ ಕಾಲೇಜು ವಿವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್: ಸಿಎಂ

ರಾಜ್ಯದ ಎಲ್ಲ ಪದವಿ ಕಾಲೇಜು ವಿವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್: ಸಿಎಂ

 ಕರ್ನಾಟಕ ರಾಜ್ಯ ಸರ್ಕಾರದ ಅಧೀನದೊಳಗಿರುವ ಎಲ್ಲ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್ ವಿತರಣೆ ಮಾಡಲು ಚಿಂತನೆ ನಡೆದಿದೆ. ಇದರೊಂದಿಗೆ ಸ್ಥಗಿತಗೊಂಡಿರುವ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಪನರ್ ಆರಂಭಕ್ಕೆ ಸರ್ಕಾರ ಸೂಚನೆ ನೀಡಿದೆ.



ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ಧಾರ ಕೈಗಂಡಿದ್ದಾರೆ. ಸುಮಾರು 230 ಕೋಟಿ ರೂ. ನೀಡುವಂತೆ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ (SCSP) ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ ಬುಡಕಟ್ಟು ಉಪ ಯೋಜನೆ (TSP) ಅಡಿಯಲ್ಲಿ ಪರಿಶಿಷ್ಟ ಜಾತಿ ಸಮುದಾಯದವರಿಗೆ ಲ್ಯಾಪ್‌ಟಾಪ್ ವಿತರಿಸುವಂತೆ ಸಿಎಂ ಸೂಚಿಸಿದರು.

ಎಲ್ಲ ಜಾತಿ, ಧರ್ಮದವರಿಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಲಿದ್ದೇವೆ. ಇನ್ನೂ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇದ್ದ ಶೇಕಡಾ 50ರಷ್ಟು ಹುದ್ದೆಗಳ ಪೈಕಿ 1800ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದರು.

ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿ

ವಿಶ್ವವಿದ್ಯಾಲಯಗಳು ಮೀಸಲಿಟ್ಟ ಹಣದಿಂದಲೇ ಸಾವಿವಾರು ಅತಿಥಿ ಉಪನ್ಯಾಸಕರಿಗೆ ವೇತನ ಮತ್ತು ನಿವೃತ್ತ ನೌಕರರಿಗೆ ಪಿಂಚಣಿ ನೀಡಬೇಕಿದೆ. ಕಾಂಗ್ರೆಸ್ ಸರ್ಕಾರ ಸದರಿ ಆಯವ್ಯಯದಲ್ಲಿ ವಿಶ್ವವಿದ್ಯಾಲಯಗಳಿಗೆಂದು 5,470 ಕೋಟಿ ರೂ.ಅನುದಾನ ಮೀಡಲಿಡಾಗಿದೆ. ಅಂದರೆ 2,474 ಕೋಟಿ ಹಣ ಹೆಚ್ಚುವರಿ ಹಣ ಅಗತ್ಯವಿದೆ ಎಂದು ಹೇಳಿದ್ದಾರೆ.

ನಿಗದಿ ಮಾಡಲಾದ ಹಣದಲ್ಲಿ ಶೇಕಡಾ 88 ಕ್ಕಿಂತ ಹೆಚ್ಚು ಹಣವನ್ನು ಭರಿಸಲಾಗಿದೆ. ಇದೆಲ್ಲ ನೋಡಿದರೆ ವಿಶ್ವವಿದ್ಯಾಲಯಗಳು ಹೊಸ ಯೋಜನೆ ಅಳವಡಿಸಿಕೊಳ್ಳುವುದನ್ನು ನಿರೀಕ್ಷಿಸಬಹುದು ಎಂದು ಸಿಎಂ ಪ್ರಶ್ನಿಸಿದರು. ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಒದಗಿಸುವಲ್ಲಿ ವಿವಿಗಳು ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.


Post a Comment

Previous Post Next Post
CLOSE ADS
CLOSE ADS
×