ತನ್ನ ಗ್ರಾಹಕರಿಗೆ ಟಾಕ್ ಟೈಮ್, ಎಸ್ಎಂಎಸ್, ಡಾಟಾ ಹೀಗೆ ಎಲ್ಲಾ ಪ್ರಯೋಜನಗಳನ್ನು ನೀಡಲು ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್, ವಿ ಐ ಮೊದಲಾದವು ಶತಾಯಗತಾಯ ಶ್ರಮಿಸುತ್ತವೆ.
ಆದರೆ ಸರ್ಕಾರದ ಸ್ವಾಮ್ಯದಲ್ಲಿರುವ BSNL ಈ ಎಲ್ಲಾ ವಿಷಯಗಳಲ್ಲಿಯೂ ಸಾಕಷ್ಟು ಹಿಂದೆ ಬಿದ್ದಿತ್ತು. ಈಗ ಕಾಲ ಬದಲಾಗಿದೆ ನೋಡಿ ಈ ಉಳಿದ ಎಲ್ಲಾ ಟೆಲಿಕಾಂ ಕಂಪನಿಗಳಿಗೂ ಕೂಡ ಪೈಪೋಟಿ ನೀಡುವ ಮಟ್ಟಕ್ಕೆ ಬಿಎಸ್ಎನ್ಎಲ್ ಹೊಸ ಪ್ಲಾನ್ ಗಳನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸುತ್ತಿದೆ. ಸದ್ಯ ಬಿಎಸ್ಎನ್ಎಲ್ ಪರಿಚಯಿಸಿರುವ ಪ್ರಿಪೇಯ್ಡ್ ಪ್ಲಾನ್ ಗ್ರಾಹಕರಿಗೆ ಹೆಚ್ಚು ಸೌಲಭ್ಯವನ್ನು ಒದಗಿಸಿಕೊಡುತ್ತದೆ ಜೊತೆಗೆ ಅತಿ ಹೆಚ್ಚು ಸಮಯದವರೆಗೆ ವ್ಯಾಲಿಡಿಟಿ ಕೂಡ ಹೊಂದಿರುತ್ತದೆ.
500 ರೂಪಾಯಿಗಳ ಒಳಗೆ ರಿಚಾರ್ಜ್ ಪ್ಲಾನ್:
ಸಾಮಾನ್ಯವಾಗಿ ದೀರ್ಘಾವಧಿಯ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ತೆಗೆದುಕೊಳ್ಳುವುದಾದರೆ ಐದುನೂರು ರೂಪಾಯಿಗಳಿಗಿಂತ ಹೆಚ್ಚು ಹಣ ಪಾವತಿ ಮಾಡಬೇಕು. ಆದರೆ ಈಗ BSNL ಸ್ಪರ್ಧಾತ್ಮಕ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಕೈಕೆಟ್ಟುವ ದರದಲ್ಲಿ ಗ್ರಾಹಕರಿಗೆ ಉತ್ತಮ ಸೌಲಭ್ಯವನ್ನು ಈ ಪ್ಲಾನ್ ಮೂಲಕ ನೀಡುತ್ತಿದೆ. ಬಿಎಸ್ಎನ್ಎಲ್ ನ ಅತಿ ಸಸ್ತಾ ರಿಚಾರ್ಜ್ ಪ್ಲಾನ್ ಯಾವುದು ನೋಡೋಣ.
498 ರೂಪಾಯಿಗಳು ರಿಚಾರ್ಜ್ ಪ್ಲಾನ್:
ಅತಿ ಅಗ್ಗದ ದರದಲ್ಲಿ ರಿಚಾರ್ಜ್ ಪ್ಲಾನ್ BSNL ಘೋಷಿಸಿದ್ದು ಇದು ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಆಗಿದೆ. ಜಿಯೋ ಹಾಗೂ ಏರ್ಟೆಲ್ ಗಿಂತಲೂ ಕಡಿಮೆ ಬೆಲೆಯಲ್ಲಿ ಈ ರಿಚಾರ್ಜ್ ಪ್ಲಾನ್ ಲಭ್ಯವಿದೆ. ನೀವು 498 ರೂಪಾಯಿಗಳ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿದರೆ 180 ದಿನಗಳ ಅಂದರೆ ಆರು ತಿಂಗಳ ವ್ಯಾಲಿಡಿಟಿ ಸಿಗುತ್ತದೆ. ವರ್ಷದವರೆಗೆ ನೀವು ರಿಚಾರ್ಜ್ ಮಾಡಿಸುವ ಅಗತ್ಯವೂ ಇರುವುದಿಲ್ಲ ಮತ್ತೆ ಮತ್ತೆ ರಿಚಾರ್ಜ್ ಮಾಡಿಸುವ ಅಗತ್ಯವೇ ಇಲ್ಲ. ಒಮ್ಮೆ ರಿಚಾರ್ಜ್ ಮಾಡಿಸಿದರೆ ಆರು ತಿಂಗಳ ವರೆಗೆ ಯಾವ ತಲೆ ಬಿಸಿಯೂ ಇಲ್ಲ.
BSNL ನ 498 ರೂಪಾಯಿಗಳ ರಿಚಾರ್ಜ್ ಪ್ಲಾನ್ ನಲ್ಲಿ ಇರುವ ಸೌಲಭ್ಯಗಳನ್ನು ನೋಡುವುದಾದರೆ ಬಿಎಸ್ಎನ್ಎಲ್ ನೆಟ್ವರ್ಕ್ ಗೆ ಕೇವಲ 10 ಪೈಸೆಯಲ್ಲಿ ನೀವು ಕರೆ ಮಾಡಬಹುದು. ಇತರ ಕರೆಗಳಿಗೆ ಪ್ರತಿ ನಿಮಿಷಕ್ಕೆ 30 ಪೈಸೆ ಚಾರ್ಜ್ ಆಗುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ ನೂರು ರೂಪಾಯಿಗಳ ಟಾಕ್ ಟೈಮ್ ಆಯ್ಕೆಯ ಕೂಡ ಸಿಗುತ್ತದೆ. ಉಚಿತಕರ ಸೌಲಭ್ಯ ಇರುವುದಿಲ್ಲ. ಏನಿದ್ದರೂ ದೀರ್ಘಾವಧಿಯವರೆಗೆ ಬಳಕೆಯಾಗುವಂತಹ ಪ್ಲಾನ್ ಆಗಿದೆ. ಮೊಬೈಲ್ ನಲ್ಲಿ ಎರಡು ಸಿಮ್ ಇದ್ದು ಎರಡನೇ ಸಿಮ್ ಆಗಿ ಬಿಎಸ್ಎನ್ಎಲ್ ಬಳಸುತ್ತಿದ್ದರೆ ಈ ಪ್ಲಾನ್ ಅತ್ಯಂತ ಉಪಯುಕ್ತ ಎನಿಸುತ್ತದೆ.
ಇನ್ನು BSNL ನ ಉಚಿತ ಕರೆ ಹಾಗೂ ಟಾಟಾ ಸೌಲಭ್ಯಗಳು ಕೂಡ ಬೇಕು ಎನ್ನುವವರು, 84 ದಿನಗಳವರೆಗೆ ಮಾನ್ಯತೆ ಹೊಂದಿರುವ 599 ರೂಪಾಯಿ ಹಾಗೂ 799 ರೂ.ಗಳ ರಿಚಾರ್ಜ್ ಮಾಡಿಸಿಕೊಳ್ಳಬಹುದು. ಇದು 84 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ ಹಾಗೂ ಈ ಪ್ಲಾನ್ ಗಳಲ್ಲಿ ದೈನಂದಿನ ಡಾಟಾ ಅನಿಯಮಿತ ಕರೆ ಹಾಗೂ ಎಸ್ಎಂಎಸ್ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಅದೇ ರೀತಿ ಬಿಎಸ್ಎನ್ಎಲ್ 769 ರೂಪಾಯಿಗಳ ಪ್ಲಾನ್ ಕೂಡ ಪರಿಚಯ ಮಾಡಿದೆ. ಇದು 84 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ ಅನಿಯಮಿತ ಧ್ವನಿ ಕರೆ ಹಾಗೂ ದಿನಕ್ಕೆ 100 ಎಸ್ ಎಂ ಎಸ್ ಗಳು ಉಚಿತವಾಗಿ ಸಿಗುತ್ತವೆ. ಎರಡು ಜಿಬಿ ಡಾಟಾವನ್ನು ಪ್ರತಿದಿನ ಪಡೆದುಕೊಳ್ಳಬಹುದು. ಇದರ ಜೊತೆಗೆ ಬಿಎಸ್ಎನ್ಎಲ್ ಹಲೋ ಟ್ಯೂನ್ಸ್, ಏರೋಸ್ ನೌ, ಹಾರ್ಡಿ ಮೊಬೈಲ್ ಗೇಮಿಂಗ್, ಮ್ಯೂಸಿಕ್ ಹೀಗೆ ಇನ್ನೊಂದಿಷ್ಟು ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ