Tractor Subsidy: 5 ಗ್ಯಾರಂಟಿ ಬಳಿಕ ಮತ್ತೆ ರೈತರ ಕೈ ಹಿಡಿದ ಕಾಂಗ್ರೆಸ್! ಎಲ್ಲಾ ರೈತರಿಗೆ ಇನ್ನೊಂದು ಹೊಸ ಭಾಗ್ಯ ಘೋಷಣೆ

Tractor Subsidy: 5 ಗ್ಯಾರಂಟಿ ಬಳಿಕ ಮತ್ತೆ ರೈತರ ಕೈ ಹಿಡಿದ ಕಾಂಗ್ರೆಸ್! ಎಲ್ಲಾ ರೈತರಿಗೆ ಇನ್ನೊಂದು ಹೊಸ ಭಾಗ್ಯ ಘೋಷಣೆ

ರೈತರ ಏಳಿಗೆಗಾಗಿ ಸರಕಾರ ಹಲವಾರು ಯೋಜನೆ ಗಳನ್ನು ಘೋಷಣೆ ಮಾಡುತ್ತಿದೆ, ರೈತರ ಆದಾಯವನ್ನು ಹೆಚ್ಚು ಮಾಡಲು ಆರ್ಥಿಕವಾಗಿ ಅವರನ್ನು ಸದೃಡ ಮಾಡಲು ಸರ್ಕಾರ ಅನೇಕ ಯೋಜನೆಗಳನ್ನು ನೀಡುತ್ತಿದೆ. ಅದರಲ್ಲಿ ಮುಖ್ಯವಾಗಿ ಕೃಷಿಗೆ (Agriculture) ಬೇಕಾದ ಸಲಕರಣೆಗಳನ್ನು ನೀಡುವುದು, ಇತ್ತೀಚಿನ ದಿನಗಳಲ್ಲಿ ಕೃಷಿಯ ಹೆಚ್ಚಿನ ಕೆಲಸಗಳಿಗೆ ಯಂತ್ರಗಳನ್ನು ಬಳಕೆ ಮಾಡುತ್ತೇವೆ, ಯಾಂತ್ರೀಕರಣವನ್ನು ಸರಕಾರ ಕೂಡ ಉತ್ತೇಜಿಸುತ್ತಿದೆ. ಇದೀಗ ರಾಜ್ಯ ಸರಕಾರವು ರೈತರಿಗೆ ಗುಡ್ ನ್ಯೂಸ್ (Good News) ನೀಡಿದೆ, ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ನೀಡಲು ಮುಂದಾಗಿದೆ



ಸಬ್ಸಿಡಿ ದರದಲ್ಲಿ ಲಭ್ಯ:

ಟ್ರ್ಯಾಕ್ಟರ್ ಖರೀದಿ ಮಾಡಲು ರೈತರಿಗೆ 50 ರಿಂದ 90% ರಷ್ಟು ಸಹಾಯಧನವನ್ನು ಒದಗಿಸಲು ಮುಂದಾಗಿದೆ, ಶೇಕಡಾ 50 ರಷ್ಟು ಸಬ್ಸಿಡಿ ಇದ್ದು, ರೈತರು ಅರ್ಧದಷ್ಟು ಹಣ ನೀಡಿದರೆ ಟ್ರಾಕ್ಟರ್ ದೊರೆಯಲಿದೆ, ಅದರಲ್ಲು ಸಣ್ಣ ಉದ್ಯಮಿ ರೈತರಿಗೆ ಈ ಯೋಜನೆ ಬಹಳಷ್ಟು ಸಹಾಯ ವಾಗಲಿದೆ,

ಯಾರಿಗೆ ಈ ಯೋಜನೆ:

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ದ ರೈತರಿಗೆ ಈ ಸೌಲಭ್ಯ ನೀಡಲಾಗಿದೆ. ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆದ್ಯತೆ ನೀಡಲಾಗಿದೆ. ಈ ಸಬ್ಸಿಡಿ ದರ ವನ್ನು ರೈತರಿಗೆ ಟ್ರ್ಯಾಕ್ಟರ್ ಬೆಲೆಯ ಮೇಲೆ ಕೊಡಲಾಗುತ್ತದೆ.


ಅರ್ಜಿ ಸಲ್ಲಿಕೆ ಮಾಡಲು ಈ ದಾಖಲೆಗಳು ಬೇಕಾಗುತ್ತವೆ:

ಆಧಾರ್ ಕಾರ್ಡ್

ಪಡಿತರ ಚೀಟಿ

ನಿವಾಸ ಪ್ರಮಾಣಪತ್ರ

ಆದಾಯ ಪ್ರಮಾಣಪತ್ರ

ಕೃಷಿ ಭೂಮಿ ದಾಖಲೆಯ ಪ್ರತಿ

ಬ್ಯಾಂಕ್ ಪುಸ್ತಕ

ಮೊಬೈಲ್ ಸಂಖ್ಯೆ

ರೈತರ ಪೊಟೋ

ಟ್ರ್ಯಾಕ್ಟರ್ ಆರ್‌ಸಿ ದಾಖಲೆ ಇತ್ಯಾದಿಗಳು ಬೇಕು.

ಎಲ್ಲಿ ಅರ್ಜಿ ಸಲ್ಲಿಸಬೇಕು:

ಈ ಟ್ರ್ಯಾಕ್ಟರ್ ಸಬ್ಸಿಡಿ (Tractor Subsidy) ಅರ್ಜಿ ಸಲ್ಲಿಸಲು ಆನ್ ಲೈನ್ ಮೂಲಕವು ಅರ್ಜಿ ಸಲ್ಲಿಕೆ ಮಾಡಬಹುದು, ಈ ಕುರಿತು ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸುವ ಮೂಲಕ ಅರ್ಜಿ ಸಲ್ಲಿಕೆ ಕುರಿತಾಗಿ ತಿಳಿದು ಕೊಳ್ಳಬಹುದಾಗಿದೆ , ಒಟ್ಟಿನಲ್ಲಿ ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸುವ‌ ರೈತರಿಗೆ ಟ್ರ್ಯಾಕ್ಟರ್ ಖರೀದಿಸಲು 50% ಸಬ್ಸಿಡಿ ಪಡೆಯಬಹುದು,

Post a Comment

Previous Post Next Post
CLOSE ADS
CLOSE ADS
×