Redmi: ರಾತ್ರೋರಾತ್ರಿ Redmi ಕಂಪನಿಯ ಈ ಫೋನಿನ ಬೆಲೆ ಒಮ್ಮೆಲೇ ಇಳಿಕೆ! ಮುಗಿಬಿದ್ದ ಜನ

Redmi: ರಾತ್ರೋರಾತ್ರಿ Redmi ಕಂಪನಿಯ ಈ ಫೋನಿನ ಬೆಲೆ ಒಮ್ಮೆಲೇ ಇಳಿಕೆ! ಮುಗಿಬಿದ್ದ ಜನ

 ಭಾರತೀಯ ಮಾರುಕಟ್ಟೆಯಲ್ಲಿ ಜಿಯೋಮಿ ಹಲವಾರು ಸ್ಮಾರ್ಟ್ ಟಿವಿ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಅದರಲ್ಲೂ ರೆಡ್ಮಿ ಸ್ಮಾರ್ಟ್ ಪೋನ್ ಗಳು (Redmi Smartphones) ಗ್ರಾಹಕರಿಗೆ ಹೆಚ್ಚು ಇಷ್ಟವಾಗಿವೆ ಎನ್ನಬಹುದು. ಇದೀಗ ರೆಡ್ಮಿ 12 ಸ್ಮಾರ್ಟ್ ಫೋನ್ ಭಾರತದಲ್ಲಿಯೂ ಬಿಡುಗಡೆ ಆಗಲಿದ್ದು ಲಾಂಚಿಂಗ್ ಗು ಮುನ್ನ ರೆಡ್ಮಿ ನೋಟ್ 12 ಫೋನಿನಲ್ಲಿ ಏನೆಲ್ಲಾ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ ಎಂಬುದು ರಿವೀಲ್ ಆಗಿದೆ. ಅತ್ಯುತ್ತಮ ಫೀಚರ್ಸ್ ಹಾಗೂ ವೈಶಿಷ್ಟತೆಗಳನ್ನು ಹೊಂದಿರುವ ರೆಡ್ಮಿ ನೋಟ್ 12 (Redmi Note 12) ಮೂರು ರೂಪಾಂತರಗಳಲ್ಲಿ ಲಭ್ಯವಿದ್ದು ಇದರ ಬೆಲೆ ಕೂಡ ಕೈಗೆಟುಕುವ ದರದಲ್ಲಿಯೇ ಇದೆ.



ರೆಡ್ಮಿ ನೋಟ್ 12 ಖರೀದಿ ಮಾಡಿದ್ರೆ ಸಿಗುತ್ತೆ ಸಾಕಷ್ಟು ರಿಯಾಯಿತಿ:

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿರುವ ರೆಡ್ಮಿ ನೋಟ್ 12 (Redmi Note 12) ಫೋನಿಗೆ ನೀವು ರಿಯಾಯಿತಿಯನ್ನು ಪಡೆಯುವುದರ ಜೊತೆಗೆ ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಹಾಗೂ ಹೆಚ್ ಡಿ ಎಫ್ ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಸಿದರೆ ಎರಡು ಸಾವಿರ ರೂಪಾಯಿಗಳ ಫ್ಲಾಟ್ ಆಫರ್ ಪಡೆಯಬಹುದು. ಅದೇ ರೀತಿ ವಿನಿಮಯ ಬೋನಸ್ ಆಗಿ ಹೆಚ್ಚುವರಿ 2000 ರೂಪಾಯಿಗಳನ್ನು ಕೂಡ ಪಡೆಯಬಹುದು.

Redmi Note 12 Features:

ಈ ಫೋನ್ 6.67 ಇಂಚಿನ ಪೂರ್ಣ ಎಚ್ ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. 1080*2400 ಪಿಕ್ಸೆಲ್ ರೆಸುಲ್ಯೂಷನ್ ಅನ್ನು ಹೊಂದಿದ್ದು, ಕ್ವಾಲ್ ಕಾಮ್ ಸ್ನಾಪ್ ಡ್ರ್ಯಾಗನ್ 4 ಜೆನ್ 1 ಪ್ರೊಸೆಸರ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಫೋನ್ 8 ಜಿಬಿ ರಾಮ್ ಹಾಗೂ 256 ಜಿಬಿ ಆಂತರಿಕ ಸ್ಟೋರೇಜ್ ಹೊಂದಿದೆ.

ಇನ್ನು ಬ್ಯಾಟರಿ ಬ್ಯಾಕ್ ಅಪ್ ಕೂಡ ಉತ್ತಮವಾಗಿದ್ದು 5000 ಎಂ ಎ ಎಚ್ ಬ್ಯಾಟರಿ ಅಳವಡಿಸಲಾಗಿದ್ದು ಇದಕ್ಕೆ 33 ಡಬ್ಲ್ಯು ವೇಗದ ಚಾರ್ಜಿಂಗ್ ಬೆಂಬಲ ನೀಡಲಾಗಿದೆ. ಹಾಗಾಗಿ ಅತಿ ಕಡಿಮೆ ಸಮಯದಲ್ಲಿ ನೀವು ಸಂಪೂರ್ಣ ಚಾರ್ಜ್ ಮಾಡಿಕೊಳ್ಳಬಹುದು. ಹಾಗೆಯ್ ಕ್ಯಾಮೆರಾ ಸೆಟ್ ಅಪ್ ಬಗ್ಗೆ ನೋಡುವುದಾದರೆ 48 ಎಂ ಪಿ ಪ್ರಾಥಮಿಕ ಕ್ಯಾಮೆರಾ, 8 ಎಂ ಪಿ ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ ಹಾಗೂ ಎರಡು ಎಂಪಿ ಮೈಕ್ರೊ ಶೂಟರ್ ಕೂಡ ನೀಡಲಾಗಿದೆ. ವಿಡಿಯೋ ಕರೆ ಹಾಗೂ ಸೆಲ್ಫಿಗಾಗಿ ಎಂಟು ಎಂಪಿ ಮುಂಭಾಗದ ಕ್ಯಾಮೆರಾವನ್ನು ಕೊಡಲಾಗಿದೆ.

3 ರೂಪಾಂತರಗಳಲ್ಲಿ Redmi Note 12 ಲಭ್ಯವಿದೆ. ಇವುಗಳ ಬೆಲೆ ನೋಡುವುದಾದರೆ


4 ಜಿಬಿ ರಾಮ್ 128 ಇಂಟರ್ನಲ್ ಸ್ಟೋರೇಜ್ – 16,999 ರೂಪಾಯಿಗಳು

6 ಜಿಬಿ ರಾಮ್ 128 ಜಿಬಿ ಇಂಟರ್ನಲ್ ಸ್ಟೋರೇಜ್ – 18,999 ರೂಪಾಯಿಗಳು

8 ಜಿಬಿ ರಾಮ್ ಹಾಗೂ 256 ಜಿಬಿ ಇಂಟರ್ನಲ್ ಸ್ಟೋರೇಜ್ – 20, 999 ರೂಪಾಯಿಗಳು.

ಇದರಲ್ಲಿ ಮೂರು ಬಣ್ಣಗಳ ಆಯ್ಕೆಗಳಿದ್ದು ಫ್ರಾಸ್ಟೆಡ್ ಗ್ರೀನ್, ಮ್ಯಾಟ್ ಬ್ಲ್ಯಾಕ್ ಹಾಗೂ ಮಿಸ್ಟಿಕ್ ಬ್ಲೂ ಈ ಬಣ್ಣಗಳನ್ನು ಪಡೆಯಬಹುದು. ಸದ್ಯದಲ್ಲಿ ಈ ಕಾಮರ್ಸ್ ಪ್ಲಾಟ್ ಫಾರ್ಮ್ ನಲ್ಲಿ ಈ ಫೋನ್ ಗಳನ್ನು ಖರೀದಿ ಮಾಡಬಹುದು.

Post a Comment

Previous Post Next Post
CLOSE ADS
CLOSE ADS
×