Gruha Lakshmi Yojana: ಅರ್ಜಿ ಆರಂಭಕ್ಕೂ ಮುನ್ನವೇ ಗ್ರಹಲಕ್ಷ್ಮೀ ಯೋಜನೆಗೆ ಹೊಸ ರೂಲ್ಸ್ ! ಈ ದಾಖಲೆ ಇಲ್ಲವಾದಲ್ಲಿ ಸಿಗಲ್ಲ 2000 ರೂ

Gruha Lakshmi Yojana: ಅರ್ಜಿ ಆರಂಭಕ್ಕೂ ಮುನ್ನವೇ ಗ್ರಹಲಕ್ಷ್ಮೀ ಯೋಜನೆಗೆ ಹೊಸ ರೂಲ್ಸ್ ! ಈ ದಾಖಲೆ ಇಲ್ಲವಾದಲ್ಲಿ ಸಿಗಲ್ಲ 2000 ರೂ

 ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruha Lakshmi Yojana), ಜಾರಿಗೆ ತರುವಲ್ಲಿ ವಿಳಂಬ ಆಗುತ್ತಿದೆ. ಜೂನ್ 15ರಂದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಬೇಕಿತ್ತು ಆದರೆ ಕಾರಣಾಂತರಗಳಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯಡಿ ಎರಡು ಸಾವಿರ ರೂಪಾಯಿಗಳನ್ನು ಕೊಡುವ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ ಆದರೆ ಜುಲೈ 14 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಬಹುದು ಎನ್ನುವ ನಿರೀಕ್ಷೆ ಇದೆ.



ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಅಡಿಯಲ್ಲಿ ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ನೀಡುವ ಯೋಜನೆಯನ್ನು ರೂಪಿಸಿದೆ ಆದರೆ ಈ ಯೋಜನೆಯನ್ನು ಜಾರಿಗೆ ಬಂದಿಲ್ಲ. ಕಳೆದ ಜೂನ್ 15ರಂದು ಜಾರಿಗೆ ಬರಬೇಕಿದ್ದ ಗೃಹಲಕ್ಷ್ಮಿ ಯೋಜನೆಯಲ್ಲಿ ವಿಳಂಬವಾಗಿದೆ. ಈ ತಿಂಗಳು ಅಂದರೆ ಜುಲೈ 14, 2023ಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಇನ್ನು ಗೃಹಲಕ್ಷ್ಮಿ ಯೋಜನೆಯಲ್ಲಿ ಮೊದಲು ಹೇಳಿದ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಯಾರು?

ಮನೆಯಲ್ಲಿ ಎಷ್ಟೇ ಹೆಂಗಸರು ಇದ್ದರು ಮನೆಯ ಯಜಮಾನಿ ಯಾರೋ ಅವರಿಗೆ ಮಾತ್ರ ಗ್ರಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2000 ಸಿಗುತ್ತವೆ.

ಇನ್ನು ಮಹಿಳೆ ಸರ್ಕಾರಿ ನೌಕರಿಯಲ್ಲಿ ಇದ್ದರೆ ಆಕೆಗೆ 2000 ಸಿಗುವುದಿಲ್ಲ

ಮನೆಯ ಯಜಮಾನಿ ಅಥವಾ ಯಜಮಾನಿಯಾ ಗಂಡ ತೆರಿಗೆ ಪಾವತಿದಾರರಾಗಿದ್ದರೆ, ಜಿ ಎಸ್ ಟಿ ಪಾವತಿಸುತ್ತಿದ್ದರೆ ಅಂಥವರಿಗೆ ಸಾವಿರ ರೂಪಾಯಿಗಳು ಸಿಗುವುದಿಲ್ಲ.

ಯಾರಿಗೆ ಸಿಗುತ್ತದೆ ಎರಡು ಸಾವಿರ ರೂಪಾಯಿ?

ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ. ಅವರ ಖಾತೆಗೆ ವರ್ಗಾವಣೆ ಆಗುತ್ತದೆ.

ರೂ.2000ಗಳನ್ನು ಪಡೆಯಲು ಮಹಿಳೆ ಕರ್ನಾಟಕ ನಿವಾಸಿ ಆಗಿರಬೇಕು.

ಎಲ್ಲಾ ತೆರಿಗೆಯಿಂದ ಮುಕ್ತವಾಗಿರಬೇಕು ತೆರಿಗೆ ಕಟ್ಟುತ್ತಿದ್ದರೆ 2000 ರೂಪಾಯಿಗಳು ಸಿಗುವುದಿಲ್ಲ.

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

ನಿವಾಸ ಪ್ರಮಾಣ ಪತ್ರ

ವರ್ಗ ಪ್ರಮಾಣ ಪತ್ರ

10ನೇ ಪ್ರಮಾಣ ಪತ್ರ

ಪಡಿತರ ಚೀಟಿ/ರೇಷನ್ ಕಾರ್ಡ್

ಅರ್ಜಿದಾರರ ಫೋಟೋಗಳು

ಮನೆಯ ಯಜಮಾನಿ ಎನ್ನುವುದಕ್ಕೆ ಘೋಷಣಾ ಅರ್ಜಿ

ಮೊಬೈಲ್ ಸಂಖ್ಯೆ

ಮನೆಯ ನಂಬರ್

ಆಧಾರ್ ಕಾರ್ಡ್

ಪ್ಯಾನ್ ಕಾರ್ಡ್

ಬ್ಯಾಂಕ್ ಖಾತೆ

ಈ ಎಲ್ಲ ದಾಖಲೆಗಳು ನಿಮ್ಮ ಬಳಿ ಇದ್ದರೆ ನೀವು ಆನ್ಲೈನ್ ಮೂಲಕವೂ ಕೂಡ ಅರ್ಜಿ ಸಲ್ಲಿಸಬಹುದು. ಸದ್ಯದಲ್ಲಿ ಸರ್ಕಾರದ ಅಧಿಕೃತ ವೆಬ್ಸೈಟ್ ಕೂಡ ಕರೆದುಕೊಳ್ಳಲಿದೆ. ಆನ್ಲೈನ್ ನಲ್ಲಿ ಆಗದೆ ಇದ್ದಲ್ಲಿ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಗ ನೀವು ಎಲ್ಲಾ ಅಧಿಕೃತ ಮಾಹಿತಿಗಳನ್ನು ಹೊಂದಿರುವ ದಾಖಲಾ ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋಗಬೇಕು. ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಹಾಗೂ ಈ ಯೋಜನೆಗೆ ಡೆಡ್ ಲೈನ್ ಇಲ್ಲ. ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು.

Post a Comment

Previous Post Next Post
CLOSE ADS
CLOSE ADS
×