KREIS 2023 : ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿ ಜಿಲ್ಲೆವಾರು ಉಳಿಕೆ ಸೀಟು ಮೆರಿಟ್ ಪಟ್ಟಿ ಬಿಡುಗಡೆ.

KREIS 2023 : ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿ ಜಿಲ್ಲೆವಾರು ಉಳಿಕೆ ಸೀಟು ಮೆರಿಟ್ ಪಟ್ಟಿ ಬಿಡುಗಡೆ.

 ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ 6ನೇ ತರಗತಿ ಪ್ರವೇಶಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಪರೀಕ್ಷೆ ಪ್ರಾಧಿಕಾರವು ಉಳಿಕೆ ಸೀಟು ಹಂಚಿಕೆಯ ಜಿಲ್ಲೆವಾರು, ಪ್ರವರ್ಗವಾರು ಜೇಷ್ಠತಾ ಪಟ್ಟಿಯನ್ನು ಬಿಡುಗಡೆ ಮಾಡಿದೆ.



ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, 2023ನೇ ಸಾಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ 6ನೇ ತರಗತಿ ಪ್ರವೇಶಕ್ಕೆ ಉಳಿಕೆ ಸೀಟು ಹಂಚಿಕೆಯ ಜೇಷ್ಠತಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಪೋಷಕರು ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಜೇಷ್ಠತಾ ಪಟ್ಟಿಯನ್ನು ಚೆಕ್ ಮಾಡಬಹುದಾಗಿದೆ.

2023ನೇ ಸಾಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ, ವಸತಿ ಶಾಲೆಗಳಲ್ಲಿ ಪ್ರವೇಶಾತಿಗೆ ಸಂಬಂಧಿಸಿದಂತೆ, ಉಳಿಕೆ ಸೀಟು ಹಂಚಿಕೆಗಾಗಿ, ಜಿಲ್ಲೆವಾರು, ಪ್ರವರ್ಗವಾರು ಅಭ್ಯರ್ಥಿಗಳ ಜೇಷ್ಠತಾ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಹಿಂದೆ ಪ್ರಾಧಿಕಾರವು ಮೂರು ಹಂತಗಳಲ್ಲಿ ಸೀಟು ಹಂಚಿಕೆಯ ಫಲಿತಾಂಶವನ್ನು ಬಿಡುಗಡೆ ಮಾಡಿತ್ತು. ಈಗ ವಸತಿ ಶಾಲೆಗಳಲ್ಲಿ ಉಳಿದ ಸೀಟುಗಳನ್ನು ಹಂಚಿಕೆ ಮಾಡಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉಳಿದ ಸೀಟು ಹಂಚಿಕೆ ಪಟ್ಟಿಯನ್ನು ನೋಡಲು ವಿದ್ಯಾರ್ಥಿಗಳ ಪೋಷಕರು ಪ್ರಾಧಿಕಾರದ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಿ.

6ನೇ ತರಗತಿ ಪ್ರವೇಶ ಪರೀಕ್ಷೆ ಉಳಿಕೆ ಚೇಷ್ಠತಾ ಪಟ್ಟಿ ಚೆಕ್ ಮಾಡುವ ವಿಧಾನ

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೋಷಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.

ಮುಖಪುಟದಲ್ಲಿ ಪ್ರವೇಶ ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.

ಆ ಪುಟದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಪ್ರವೇಶ 2023 ಲಿಂಕ್ ಮೇಲೆ ಕ್ಲಿಕ್ ಮಾಡಿ.

KREIS 2023 6ನೇ ತರಗತಿ ಮೆರಿಟ್ ಪಟ್ಟಿಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ ಒಂದು ಪಿಡಿಎಫ್ ಓಪನ್ ಆಗುತ್ತದೆ. ಅದರಲ್ಲಿ ನೀವು ಯಾವ ಜಿಲ್ಲೆಯಲ್ಲಿ ಪ್ರವೇಶ ಬಯಸಿ ಪರೀಕ್ಷೆಗೆ ಹಾಜರಾಗಿದ್ದಿರೋ ಆ ಜಿಲ್ಲೆಯಲ್ಲಿ ನಿಮ್ಮ ಹೆಸರನ್ನು ನೋಡಿಕೊಳ್ಳಿ.

ರಾಜ್ಯದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ, ಡಾ.ಬಿ. ಆರ್. ಅಂಬೇಡ್ಕರ್ , ಮಾಸ್ತಿ ವೆಂಕಟೇಶ ಅಯ್ಯಂಗರ್, ಸಂಗೊಳ್ಳಿ ರಾಯಣ್ಣ, ಕವಿರನ್ನ, ಗಾಂಧಿತತ್ವ, ಶ್ರೀ ನಾರಾಯಣ ಗುರು, ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಗಳಿಗೆ 2023-24ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಪ್ರವೇಶ ಪರೀಕ್ಷೆಯನ್ನು ಕೆಇಎ ನಡೆಸಿತ್ತು

ಜಿಲ್ಲೆವಾರು ಮೆರಿಟ್ ಪಟ್ಟಿ ಯನ್ನು ಚೆಕ್‌ ಮಾಡಲು ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ.

Post a Comment

Previous Post Next Post
CLOSE ADS
CLOSE ADS
×