ಬೆಂಗಳೂರು, ಜುಲೈ 26: ಈ ಹಿಂದೆ ವಿವಿಧ ಯೋಜನೆಗಳಡಿ ಸಬ್ಸಿಡಿ ದರದಲ್ಲಿ ವಿದ್ಯುತ್ ಪಡೆಯುತ್ತಿದ್ದ ರೈತರು ಮತ್ತು ವಿದ್ಯುತ್ ಗ್ರಾಹಕರು ಗೃಹ ಜ್ಯೋತಿ ಯೋಜನೆಯಡಿ ವಿಲೀನಗೊಳ್ಳಲಿದ್ದಾರೆ. ಅವರು ಪ್ರತ್ಯೇಕವಾಗಿ ನೋಂದಣಿ ಮಾಡಬೇಕಾಗಿಲ್ಲ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.
ಗೃಹ ಜ್ಯೋತಿ ಯೋಜನೆಯಡಿ ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಗಳು ವಿಲೀನಗೊಳ್ಳಲಿವೆ. ಈ ಯೋಜನೆಗಳ ವ್ಯಾಪ್ತಿಗೆ ಒಳಪಡುವ ಗ್ರಾಹಕರ ಡೇಟಾವನ್ನು ವಿಲೀನಗೊಳಿಸಲು ಬ್ಯಾಕ್ ಎಂಡ್ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
'ಒಂದು ವೇಳೆ ಗ್ರಾಹಕರು ನೋಂದಾಯಿಸಿದ್ದರೆ, ಅದು ಒಳ್ಳೆಯದೇ. ಇಲ್ಲದಿದ್ದರೆ, ಇಲಾಖೆಯು ಗ್ರಾಹಕರ ಆರ್‌ಆರ್ ಸಂಖ್ಯೆ ಮತ್ತು ಆಧಾರ್ ವಿವರಗಳನ್ನು ಹೊಂದಿರುವುದರಿಂದ ಅವರು ಇನ್ನು ಮುಂದೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಅವರ ಡೇಟಾಗಳನ್ನು ವಿಲೀನಗೊಳಿಸಲಾಗುವುದು. ಆಗಸ್ಟ್ 1 ರಿಂದ ಗ್ರಾಹಕರಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಸಿಗುತ್ತದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿವಿಧ ಯೋಜನೆಗಳ ಅಡಿಯಲ್ಲಿ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರು ಇನ್ನು ಮುಂದೆ ಗೃಹಜ್ಯೋತಿಗೆ ಯೋಜನೆಯಡಿ ಬರಲಿದ್ದಾರೆ. ಕುಟೀರ, ಅಮೃತ ಮತ್ತು ಭಾಗ್ಯಜ್ಯೋತಿ ಯೋಜನೆಗಳ ಲಾಭವನ್ನು ಪಡೆದಂತೆಯೇ ಗೃಹ ಜ್ಯೋತಿಯ ಲಾಭವನ್ನೂ ಪಡೆಯಲಿದ್ದಾರೆ. ಗೃಹ ಜ್ಯೋತಿ ಅಡಿಯಲ್ಲಿ ನೋಂದಾಯಿಸಿದ ಇತರರು ಯಾವುದೇ ಶುಲ್ಕವಿಲ್ಲದೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಗೃಹ ಜ್ಯೋತಿ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸಲು ಸರ್ಕಾರ ಈ ಕೆಲಸಗಳನ್ನು ಮಾಡುತ್ತಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಮಂಗಳವಾರ ಹೇಳಿದ್ದಾರೆ. ಆದಾಗ್ಯೂ, ರೈತರ ವಾಣಿಜ್ಯ ಬಳಕೆಗಾಗಿ ನೀಡಲಾಗುತ್ತಿರುವ ಸಬ್ಸಿಡಿ ವಿದ್ಯುತ್ ಪೂರೈಕೆ ಮುಂದುವರಿಯುತ್ತದೆ. ಮುಂದಿನ ಬಿಲ್ಲಿಂಗ್ ಸೈಕಲ್‌ನಿಂದ ಎಲ್ಲಾ ಗ್ರಾಹಕರು ಯೋಜನೆಯ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಡೇಟಾವನ್ನು ತಾಂತ್ರಿಕ ರೀತಿಯಲ್ಲಿ ವಿಲೀನಗೊಳಿಸಲಾಗುತ್ತಿದೆ ಎಂದು ಜಾರ್ಜ್ ಹೇಳಿದ್ದಾರೆ.