ಅಲ್ಪಸಂಖ್ಯಾತರ ವರ್ಗದವರಿಗೆ ಸರ್ಕಾರದಿಂದ ಸ್ವಯಂ ಉದ್ಯೋಗ ಸಾಲ: ಅರ್ಹತೆ, ಬೇಕಾದ ದಾಖಲೆಗಳ ವಿವರ ಇಲ್ಲಿದೆ

ಅಲ್ಪಸಂಖ್ಯಾತರ ವರ್ಗದವರಿಗೆ ಸರ್ಕಾರದಿಂದ ಸ್ವಯಂ ಉದ್ಯೋಗ ಸಾಲ: ಅರ್ಹತೆ, ಬೇಕಾದ ದಾಖಲೆಗಳ ವಿವರ ಇಲ್ಲಿದೆ

 KMDC self employment loan scheme: 



ಪ್ರತಿ ವರ್ಷವು ಸಹ ಸರ್ಕಾರದ ವಿವಿಧ ಇಲಾಖೆಗಳಾದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಸೇರಿದಂತೆ ಇನ್ನೂ ಇತರ ಇಲಾಖೆಗಳು / ನಿಗಮಗಳಡಿ ಸ್ವಯಂ ಉದ್ಯೋಗ ಸಾಲ ಯೋಜನೆ ಕಲ್ಪಿಸಲಾಗುತ್ತದೆ.

ಸರ್ಕಾರದ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಡಿ ಪ್ರತಿವರ್ಷವು ಸ್ವಯಂ ಉದ್ಯೋಗ ಸಾಲಗಳನ್ನು ಅರ್ಹರಿಗೆ ನೀಡಲಾಗುತ್ತಿದೆ. ಹಲವು ನಿಗಮಗಳ ಪೈಕಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಒಂದು

ಈ ನಿಗಮದಡಿ ಅಲ್ಪಸಂಖ್ಯಾತರ ಸಮುದಾಯದ ಜನರಿಗೆ ವ್ಯಾಪಾರ, ಸಣ್ಣ ಪ್ರಮಾಣದ ಗುಡಿ ಕೈಗಾರಿಕೆ, ಸೇವಾ ಕ್ಷೇತ್ರ, ಕೃಷಿ ಆಧಾರಿತ ಚಟುವಟಿಕೆಗಳು ಮುಂತಾದವುಗಳನ್ನು ಪ್ರಾರಂಭಿಸಲು ಸ್ವಯಂ ಉದ್ಯೋಗ ಸಾಲ ನೀಡಲಾಗುತ್ತದೆ. ಅಲ್ಲದೇ ಅಭಿವೃದ್ಧಿ ಪಡಿಸಿಕೊಳ್ಳುವ ಸಲುವಾಗಿ ರಾಷ್ಟ್ರೀಕೃತ / ಷೆಡ್ಯೂಲ್ಡ್‌ ಬ್ಯಾಂಕ್‌ಗಳ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನ ಒದಗಿಸಲಾಗುವುದು.


ಅಲ್ಪಸಂಖ್ಯಾತರ ಸಮುದಾಯದವರಿಗೆ ನೀಡುವ ಸಹಾಯಧನವು ಘಟಕ ವೆಚ್ಚದ ಶೇಕಡ.33 ಅಥವಾ ಗರಿಷ್ಠ ಮಿತಿ ರೂ.1.00 ಲಕ್ಷದ ವರೆಗಿನ ಸಹಾಯಧನ ನೀಡಲಾಗುವುದು

ಈ ಸಹಾಯಧನ ಪಡೆಯಲು ಅರ್ಹತೆಗಳೇನು ಎಂದರೆ

1. ಅರ್ಜಿದಾರರು ರಾಜ್ಯದ ಮತೀಯ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿರಬೇಕು.

2. ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

3. ಅರ್ಜಿದಾರರ ವಯೋಮಿತಿ 18 ರಿಂದ 55 ವರ್ಷಗಳಿರಬೇಕು.

4. ಎಲ್ಲಾ ಮೂಲಗಳಿಂದ ಕೌಟುಂಬಿಕ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ರೂ.81,000 ಮತ್ತು ನಗರ ಪ್ರದೇಶದಲ್ಲಿ ರೂ.1.03,000 ದೊಳಗಿರಬೇಕು.

5. ಕುಟುಂಬದ ಯಾವುದೇ ಸದಸ್ಯರು ರಾಜ್ಯ / ಕೇಂದ್ರ / ಸಾರ್ವಜನಿಕ ವಲಯದ ಘಟಕ ಸರ್ಕಾರದ ಉದ್ಯೋಗಿಯಾಗಿರಬಾರದು.

6. ಅರ್ಜಿದಾರರು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಡಿ ಈಗಾಗಲೇ ಸಾಲ ಪಡೆದಿರಬಾರದು

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

1. ಆನ್‌ಲೈನ್‌ ಅರ್ಜಿ

2. ಫಲಾನುಭವಿಯ ಇತ್ತೀಚಿನ 2 ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ.

3. ಜಾತಿ, ಆದಾಯ ಪ್ರಮಾಣ ಪತ್ರ.

4. ಆಧಾರ್ ಕಾರ್ಡ್‌ ಪ್ರತಿ.

5. ಯೋಜನಾ ವರದಿ.

ಅರ್ಜಿ ಸಲ್ಲಿಸುವುದು ಹೇಗೆ?

ವೆಬ್ಸೈಟ್‌ https://suvidha.karnataka.gov.in / https://suvidha1.karnataka.gov.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ನಂತರ ಅರ್ಜಿಯ ಪ್ರಿಂಟ್‌ ತೆಗೆದುಕೊಂಡು, ಅರ್ಜಿದಾರರು ತಮ್ಮ ಜಿಲ್ಲೆಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕಛೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅವರು ಅರ್ಜಿ ಪರಿಶೀಲಿಸಿ, ಸರ್ಕಾರದ ಆದೇಶ / ಸೂಚನೆಯಂತೆ ನಂತರ ಸಹಾಯಧನ ನೀಡುವರು.

ಅರ್ಜಿ ಸಲ್ಲಿಸುವ ದಿನಾಂಕ, ಕಡೆ ದಿನಾಂಕ, ಇತರೆ ಮಾಹಿತಿಗಳನ್ನು ಅಭ್ಯರ್ಥಿಗಳು ತಮ್ಮ ತಮ್ಮ ಜಿಲ್ಲೆಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಛೇರಿಗಳಲ್ಲಿ ತಿಳಿಯಬಹುದು.

ಅಭ್ಯರ್ಥಿಗಳು ಒಮ್ಮೆ ಆನ್‌ಲೈನ್‌ ಅರ್ಜಿ ಸಲ್ಲಿಸಿದ ನಂತರ, ಅದನ್ನು ಪ್ರಿಂಟ್‌ ತೆಗೆದು ಕಡ್ಡಾಯವಾಗಿ ಸಂಬಂಧಿಸಿದ ಜಿಲ್ಲಾ ಇಲಾಖಾ ಕಛೇರಿಗೆ ನೀಡಬೇಕು. ನೀಡುವ ಪೂರಕ ದಾಖಲೆಗಳು, ಬ್ಯಾಂಕ್ ಪಾಸ್‌ ಪುಸ್ತಕಗಳಲ್ಲಿ ಯಾವುದೇ ತಪ್ಪು ಮಾಹಿತಿಗಳು ಇರಬಾರದು.

Post a Comment

Previous Post Next Post
CLOSE ADS
CLOSE ADS
×