Aadhar Pan Rules: ಆಧಾರ್ ಪಾನ್ ಹೊಸ ರೂಲ್ಸ್! ಇವತ್ತಿನಿಂದ ಈ ವ್ಯಕ್ತಿಗಳಿಗೆ 6000 ರೂ ದಂಡ

Aadhar Pan Rules: ಆಧಾರ್ ಪಾನ್ ಹೊಸ ರೂಲ್ಸ್! ಇವತ್ತಿನಿಂದ ಈ ವ್ಯಕ್ತಿಗಳಿಗೆ 6000 ರೂ ದಂಡ

 ಈಗಾಗಲೇ ಎಲ್ಲಾ ಕಡೆ ಐಟಿಆರ್ ಫೈಲಿಂಗ್(ITR Filing) ಮಾಡೋದಕ್ಕೆ ಸಮಯ ಮುಗೀತಾ ಬಂದಿದೆ. ಹೀಗಾಗಿ ಪ್ರತಿಯೊಬ್ಬರು ಗಡುಗಿನ ಸಮಯದ ಒಳಗೆ ಟ್ಯಾಕ್ಸ್ ಅನ್ನು ಕಟ್ಟಬೇಕು ಎನ್ನುವುದಾಗಿ ಆದಾಯ ಇಲಾಖೆ ಕಡ್ಡಾಯವಾಗಿ ಸೂಚನೆ ನೀಡಿದ್ದು ಇದರಲ್ಲೂ ವಿಶೇಷವಾಗಿ ಐಟಿಆರ್ ಫೈಲ್ ಮಾಡೋದಕ್ಕೆ ನಿಮ್ಮ ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್(Aadhar Card) ಲಿಂಕ್ ಆಗಿರುವುದು ಪ್ರಮುಖವಾಗಿದೆ ಎಂಬುದಾಗಿ ಕೂಡ ಆದಾಯ ಇಲಾಖೆ ಸೂಚಿಸಿದೆ. ಹೀಗಾಗಿ ಇದು ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ.



ಈಗಾಗಲೇ ಜುಲೈ 31ರ ಒಳಗೆ ಐಟಿ ರಿಟರ್ನ್ ಮಾಡುವುದಕ್ಕೆ ಕೊನೆಯ ದಿನಾಂಕ ಎಂಬುದಾಗಿ ಘೋಷಿಸಲಾಗಿದ್ದು ಜೂನ್ 30ರ ಒಳಗೆ ಆಧಾರ್ ಹಾಗೂ ಪಾನ್ ಕಾರ್ಡ್ ಅನ್ನು ಲಿಂಕ್(Aadhar Pan Card Link) ಮಾಡದೆ ಇದ್ದವರು ಈ ಸಂದರ್ಭದಲ್ಲಿ ಸಮಸ್ಯೆಯನ್ನು ಅನುಭವಿಸಬೇಕಾದ ಸಂದರ್ಭ ಒದಗಿ ಬರಲಿದೆ. ಲಿಂಕ್ ಮಾಡದೆ ಇರುವಂತಹ ಪಾನ್ ಕಾರ್ಡ್ ಅನ್ನು ನಿಷ್ಕ್ರಿಯ ಎಂಬುದಾಗಿ ಘೋಷಿಸಲಾಗುತ್ತದೆ ಹಾಗೂ ಪಾನ್ ಕಾರ್ಡ್ ಕಾರ್ಯನಿರ್ವಹಿಸಲು 30 ದಿನಗಳ ತೆಗೆದುಕೊಳ್ಳುತ್ತದೆ ಆದರೆ ಐಟಿಆರ್ ಸಲ್ಲಿಸಲು ಒಂದು ತಿಂಗಳಿಗಿಂತಲೂ ಕಡಿಮೆ ಸಮಯ ಇರುವುದರಿಂದ ಇದಕ್ಕಾಗಿ ನೀವು ಐದರಿಂದ ಆರು ಸಾವಿರ ರೂಪಾಯಿಗಳವರೆಗೆ ದಂಡವನ್ನು ಕಟ್ಟಬೇಕಾಗುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಸದ್ಯಕ್ಕೆ ಒಂದುವೇಳೆ PAN CARD ನಿಸ್ಕ್ರಿಯವಾಗಿದ್ದರೆ ನೀವು 5000 ರೂಪಾಯಿ ಫೈನ್ ಕಟ್ಟುವ ಮೂಲಕ ತಡವಾಗಿ ಐಟಿಆರ್ ಫೈಲ್ ಮಾಡುವಂತಹ ಅವಕಾಶವನ್ನು ಕೂಡ ಈಗಾಗಲೇ ಒದಗಿಸಲಾಗಿದೆ. ಇದರ ಜೊತೆಗೆ ಪಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವ ಶುಲ್ಕ ಕೂಡ 1,000 ಸೇರಿರುತ್ತದೆ ಎಂಬುದಾಗಿ ತಿಳಿದು ಬಂದಿದೆ. ಒಟ್ಟಾರೆ 6,000 ದಂಡವನ್ನು ಈ ಸಂದರ್ಭದಲ್ಲಿ ಕಟ್ಟಬೇಕಾಗುತ್ತದೆ. ನಿಮ್ಮ ಆದಾಯ ಆರ್ಥಿಕ ವರ್ಷದಲ್ಲಿ 5 ಲಕ್ಷವನ್ನು ಮೀರಿದಿದ್ದಲ್ಲಿ ನೀವು ಕೇವಲ ಒಂದು ಸಾವಿರ ರೂಪಾಯಿ ಶುಲ್ಕವನ್ನು ಮಾತ್ರ ಕಟ್ಟಿದರೆ ಸಾಕು ಅದರ ಜೊತೆಗೆ ಪಾನ್ ಕಾರ್ಡ್ ಶುಲ್ಕ ಸೇರಿದಂತೆ ಒಟ್ಟಾರೆ ಎರಡು ಸಾವಿರ ರೂಪಾಯಿಗಳನ್ನು ಮಾತ್ರ ಕಟ್ಟಿದರೆ ಸಾಕು. ತಮ್ಮ ಆಧಾರ ಹಾಗೂ ಪಾನ್ ಲಿಂಕ್ ಮಾಡಿದ ತೆರಿಗೆದಾರರಿಗೆ ಐಟಿಆರ್ ಫೈಲ್ ಮಾಡಲು ಡಿಸೆಂಬರ್ 31ರವರೆಗೆ ಕೂಡ ಕಾಲಾವಕಾಶವನ್ನು ನೀಡಲಾಗುತ್ತದೆ ಎಂಬುದಾಗಿ ಕೂಡ ಆದಾಯ ಇಲಾಖೆಯಿಂದ ಸುದ್ದಿಯಿದೆ.

Post a Comment

Previous Post Next Post
CLOSE ADS
CLOSE ADS
×