Buffalo milk price hike : ಬೆಂಗಳೂರು : ರಾಜ್ಯದ ಜಿಲ್ಲೆಯ ರೈತರಿಗೆ ಸಿಹಿ ಸುದ್ದಿಯಾಗಿದ್ದು, ಇದೀಗ ಪ್ರತಿ ಲೀಟರ್ ಎಮ್ಮೆ ಹಾಲಿಗೆ ಹೆಚ್ಚುವರಿಯಾಗಿ(Buffalo milk price hike) ರೈತರಿಗೆ 9.25 ರೂಪಾಯಿ ನೀಡಲು ಕೆಎಂಎಫ್ ಮುಂದಾಗಿದೆ.
ಈ ಹಿಂದೆ ಪ್ರತಿ ಲೀಟರ್ ಎಮ್ಮೆ ಹಾಲಿಗೆ 36.80 ರೂ ನೀಡಲಾಗುತ್ತಿದ್ದು, ಇನ್ಮುಂದೆ ಭಾನುವಾರದಿಂದಲೇ ಕೆಎಂಎಫ್ ಪ್ರತಿ ಲೀಟರ್ ಹಾಲಿಗೆ 46 ರೂ. ನೀಡಲು ತೀರ್ಮಾನ ಕೈಗೊಂಡಿದೆ. ಈ ಹೆಚ್ಚುವರಿ ಬೆಲೆಯೂ ರಾಜ್ಯದ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಯ ರೈತರಿಗೆ ಅನ್ವಯವಾಗಲಿದೆ ಎಂದು ಹಾಲು ಒಕ್ಕೂಟದ ಅಧ್ಯಕ್ಷ ಆರ್ಕೆ ಪಾಟೀಲ್ ಮಾಹಿತಿಯನ್ನು ನೀಡಿದ್ದಾರೆ
ಮುಂದಿನ ದಿನಗಳಲ್ಲಿ ಎಮ್ಮೆ ಹಾಲಿನ ಬೆಲೆ ಏರಿಕೆಯಾಗಲಿದ್ದು, ದಪ್ಪನಾದ ಮತ್ತು ಕೆನೆಬಣ್ಣದ ಪರಿಪೂರ್ಣ ಎಮ್ಮೆ ಹಾಲನ್ನುಆರೋಗ್ಯಕ್ಕೂ ಪೂರಕವಾಗಿದೆ. ಈ ನಿಟ್ಟಿನಲ್ಲಿ ಬಳಕೆ ಮಾಡುವ ಜನರ ಬೇಬಿಗೂ ಕತ್ತರಿ ಬೀಳುವ ಸಾಧ್ಯತೆಯಿದೆ. ಎಮ್ಮೆಯ ಹಾಲು ಹೆಚ್ಚಿನ ಪೆರಾಕ್ಸಿಡೀಕರಣ (peroxidizing)ಚಟುವಟಿಕೆಯನ್ನು ಸಹ ಹೊಂದಿದೆ, ಇದು ಹಾಲನ್ನು ಹೆಚ್ಚು ಸಮಯ ಸಂಗ್ರಹಿಸಿಡಲು ಸಹಾಯ ಮಾಡುತ್ತದೆ.ಮಕ್ಕಳು, ವಯಸ್ಕರು ಮತ್ತು ವೃದ್ದರೂ ಸೇರಿದಂತೆ ಎಲ್ಲಾ ವಯಸ್ಸಿನ ವ್ಯಕ್ತಿಗಳು ಎಮ್ಮೆ ಹಾಲನ್ನು ಸುರಕ್ಷಿತವಾಗಿ ಸೇವಿಸಬಹುದು.
ಪರಿಪೂರ್ಣ ಎಮ್ಮೆಯ ಹಾಲಿನಲ್ಲಿ ವಿಟಮಿನ್ B12ಮತ್ತು ರೈಬೋಫ್ಲೇವಿನ್ (Riboflavin) ನಂತಹ ವಿಟಮಿನ್ನುಗಳಿವೆ, ಇವೆರಡೂ ಆರೋಗ್ಯಕ್ಕೆ ಒಳ್ಳೆಯದು. ಅಗ್ರಿಕಲ್ಚರಲ್ ಅಂಡ್ ಫುಡ್ ಕೆಮಿಸ್ಟ್ರ ಎಂಬ ಮಾಧ್ಯಮದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವಿಟಮಿನ್ B12 ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಸಮಸ್ಯೆಗಳು ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದು ವಿಟಮಿನ್ A,ವಿಟಮಿನ್ C,ವಿಟಮಿನ್ B6,ನಿಯಾಸಿನ್, ಫೋಲೇಟ್ ಮತ್ತು ಥಯಾಮಿನ್ ಅನ್ನು ಸಹ ಹೊಂದಿದೆ. ಈ ಎಲ್ಲಾ ಪ್ರಯೋಜನಗಳಿಂದಾಗಿ ಬಳಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗುವುದರಿಂದ ರೈತರಿಗೆ ಉತ್ತೇಜನ ನೀಡುವಂತಾಗುತ್ತದೆ. ಅಲ್ಲದೇ ಹೆಚ್ಚಿನ ಬೆಲೆ ನಿಗದಿಯಿಂದ ರೈತರ ಆದಾಯ ಮಟ್ಟವೂ ಹೆಚ್ಚಾಗುವ ಸಾಧ್ಯತೆಯಿದೆ.