Electricity Meter: ವಿದ್ಯುತ್ ಮೀಟರ್ ನಲ್ಲಿ ನಾವು ಪ್ರತಿ ದಿನ ಎಷ್ಟು ಯೂನಿಟ್ ವಿದ್ಯುತ್ ಬಳಸುತ್ತಿದ್ದೇವೆ ಎಂದು ತಿಳಿಯುವುದು ಹೇಗೆ

Electricity Meter: ವಿದ್ಯುತ್ ಮೀಟರ್ ನಲ್ಲಿ ನಾವು ಪ್ರತಿ ದಿನ ಎಷ್ಟು ಯೂನಿಟ್ ವಿದ್ಯುತ್ ಬಳಸುತ್ತಿದ್ದೇವೆ ಎಂದು ತಿಳಿಯುವುದು ಹೇಗೆ

 ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಕನೆಕ್ಷನ್ ಹಾಗೂ ಎಷ್ಟು ವಿದ್ಯುತ್ ಅನ್ನು ಬಳಸಿದ್ದೇವೆ ಎನ್ನುವುದರ ಕುರಿತಂತೆ ಸಂಪೂರ್ಣವಾಗಿ ತಿಳಿಯಲು ಹಾತೊರೆಯುತ್ತಿದ್ದಾರೆ ಯಾಕೆಂದರೆ ರಾಜ್ಯ ಸರ್ಕಾರ ಪ್ರತಿಯೊಂದು ಮನೆಗಳಿಗೂ ಕೂಡ ಗ್ರಹ ಜ್ಯೋತಿ ಯೋಜನೆ (Gruha Jyothi Yojana) ಅಡಿಯಲ್ಲಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್ (Free Electricity) ನೀಡಲು ಸಜ್ಜಾಗಿ ನಿಂತಿದೆ.



ಇನ್ನು ನಿಮಗೆ ಬರುತ್ತಿರುವಂತಹ ವಿದ್ಯುತ್ ಬಿಲ್ ಸರಿ ಆಗಿದೆಯೇ ಇಲ್ಲವೇ ಎಂಬುದನ್ನು ವಿದ್ಯುತ್ ಮೀಟರ್ (Electricity Meter) ಅನ್ನು ನೋಡಿ ಕೂಡ ಚೆಕ್ ಮಾಡಬಹುದಾಗಿದ್ದು ಇದರ ಕುರಿತಂತೆ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ ಬನ್ನಿ.

 ಯಾಕೆಂದರೆ ಈಗಾಗಲೇ ನೀವು ರಾಜ್ಯದ ಹಲವಾರು ಭಾಗಗಳಲ್ಲಿ ತಪ್ಪಾದ ವಿದ್ಯುತ್ ಬಿಲ್ ಅನ್ನು ನೀಡುತ್ತಿದ್ದಾರೆ ಎನ್ನುವಂತಹ ಆರೋಪಗಳು ಕೂಡ ಕೇಳಿ ಬರುತ್ತಿದ್ದು ಈ ಮೂಲಕ ನೀವು ಇದರ ಕುರಿತಂತೆ ಸ್ವತಹ ತಿಳಿದುಕೊಂಡರೆ ತಪ್ಪನ್ನು ಕ್ಷಣಮಾತ್ರದಲ್ಲಿ ಸ್ಥಳದಲ್ಲಿ ಕಂಡು ಹಿಡಿಯಲು ಸಾಧ್ಯವಾಗುತ್ತದೆ.

ಮೊದಲಿಗೆ ನೀವು ಹಿಂದಿನ ಮಾಪನ ಹಾಗೂ ಹಾಲಿ ಮಾಪನದ ಕಳೆದು ಉಳಿದಂತಹ ಸಂಖ್ಯೆಯನ್ನು ನೀವು ಈ ತಿಂಗಳಿನಲ್ಲಿ ಬಳಸಿರುವಂತಹ ಯೂನಿಟ್ ಎಂಬುದಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಆಧಾರದ ಮೇಲೆ ನೀವು ಒಂದು ಯೂನಿಟ್ ಗೆ ಎಷ್ಟು ಬೆಲೆ ಎಂಬುದನ್ನು ತಿಳಿದು ಗುಣಿಸಿ ಬರುವಂತಹ ಮೊತ್ತವನ್ನು ನೀವು ಈ ತಿಂಗಳು ಬಳಸಿದಂತಹ ವಿದ್ಯುತ್ ನ ಬೆಲೆ ಎಂಬುದಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಇನ್ನು ವಿಶೇಷವಾಗಿ ವಿದ್ಯುತ್ ಮಾಪನವನ್ನು ನೋಡಿ ಇದನ್ನು ಲೆಕ್ಕಾಚಾರ ಹಾಕುವುದು ಕಠಿಣ ಹೀಗಿದ್ದರೂ ಕೂಡ ಸುಲಭ ಮಾರ್ಗದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ. ನಾವು ಹೇಳಲು ಹೊರಟಿರುವುದು 24 ಗಂಟೆಗಳಲ್ಲಿ ಇದನ್ನು ಯಾವ ರೀತಿಯಲ್ಲಿ ಲೆಕ್ಕಾಚಾರ ಹಾಕಬಹುದು ಎನ್ನುವುದಾಗಿ. Meter ನಲ್ಲಿ kW/h ನಲ್ಲಿ ಕಂಡುಬರುವಂತಹ ಸಂಖ್ಯೆಯನ್ನು 24 ಗಂಟೆಗಳಾದ ನಂತರ ನಾಳೆಗೆ ಅದನ್ನು ಕಂಪೇರ್ ಮಾಡಿ ನೋಡಿ. ಎರಡನ್ನು ಕಳೆದು ಬರುವಂತಹ ಸಂಖ್ಯೆ ನೀವು ಒಂದು ದಿನದಲ್ಲಿ ಬಳಕೆ ಮಾಡಿರುವಂತಹ ಯೂನಿಟ್ ಬೆಲೆಯಾಗಿದ್ದು ಅದೇ ರೀತಿ ನೀವು ಲೆಕ್ಕಾಚಾರ ಹಾಕಬಹುದಾಗಿದೆ. ಇದು ವಿದ್ಯುತ್ ಮೀಟರ್ ಅನ್ನು ನೋಡುವ ಮೂಲಕ ನೀವು ಸುಲಭ ವಿಧಾನದಲ್ಲಿ ಎಷ್ಟು ವಿದ್ಯುತ್ ಬಳಸಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

1 Comments

Previous Post Next Post

Top Post Ad

CLOSE ADS
CLOSE ADS
×