CM Siddaramaiah: ಮತ್ತೊಂದು ಗ್ಯಾರಂಟಿ ಘೋಷಿಸಿದ ಸಿಎಂ ಸಿದ್ದರಾಮಯ್ಯ, ಬಂಪರ್ ಆಫರ್

CM Siddaramaiah: ಮತ್ತೊಂದು ಗ್ಯಾರಂಟಿ ಘೋಷಿಸಿದ ಸಿಎಂ ಸಿದ್ದರಾಮಯ್ಯ, ಬಂಪರ್ ಆಫರ್

 ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಂತೆ ಐದು ಗ್ಯಾರೆಂಟಿಯಲ್ಲಿ ಒಂದಾದ ಉಚಿತ ಬಸ್ (Free Bus) ಗೆ ಜೂ. 11ರಂದು ಚಾಲನೆ ದೊರೆತಿದ್ದು ಇನ್ನು ಒಂದೊಂದೆ ಯೋಜನೆ ಜಾರಿಗೆ ಬರಲಿದೆ. ಅದೇ ರೀತಿ ವಿಧಾನ ಸಭೆಯಲ್ಲಿ ಗ್ಯಾರೆಂಟಿ ಯೋಜನೆಯ ಮೂಲಕವೆ ಬಹುಮತ ಪಡೆದು ಗೆದ್ದ ಕಾಂಗ್ರೆಸ್ ಪಕ್ಷವೂ ಈಗ ಮುಂಬರುವ ಚುನಾವಣೆಗೆ ಈಗಲೇ ಒಂದೊಂದೆ ಸಿದ್ಧತೆ ಮಾಡಿಕೊಳ್ಳುತ್ತಿದೆ.



ವರುಣಾ ಕ್ಷೇತ್ರ (Varuna) ದಲ್ಲಿ ಭರ್ಜರಿ ಬಹುಮತ ಪಡೆದ ಸಿದ್ಧರಾಮಯ್ಯ ಅವರು ಕೃತಜ್ಞತಾ ಸಭೆಯನ್ನು ಏರ್ಪಡಿಸಿ ಮುಂಬರುವ ಚುನಾವಣೆಗೆ ಈಗ ಮಾಡಿಕೊಳ್ಳಬೇಕಾದ ಸಿದ್ಧತೆ ಬಗ್ಗೆ ಮಾತಾಡಿದ್ದಾರೆ. ಮತ್ತು ಕೇಂದ್ರ ಸರಕಾರದ ಈಗಿನ ಪರಿಸ್ಥಿತಿಯನ್ನು ಜನರಿಗೆ ಮನದಟ್ಟು ಮಾಡಿ ಮುಂಬರುವ ಚುನಾವಣೆಗೆ ಬೆಂಬಲಿಸಿ ಕಾಂಗ್ರೆಸ್ ಗೆಲ್ಲಿಸಿ ಅಭಿವೃದ್ಧಿ ಕಾಣಿರಿ ಎಂದಿದ್ದಾರೆ

ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಸರಕಾರ ಸದ್ಯ ನುಡಿದಂತೆ ನಡೆದ ಪ್ರಾಮಾಣಿಕತೆಗೆ ಪಾತ್ರವಾಗಿದ್ದು ಮುಂದಿನ ದಿನದಲ್ಲಿ ಇನ್ನಷ್ಟು ಸುಧಾರಣಾ ಕ್ರಮ ಆಡಳಿತದಲ್ಲಿ ಬರಲಿದೆ ಎಂಬ ಭರವಸೆಯನ್ನು ಸಿಎಂ ನೀಡಿದ್ದಾರೆ. ಈ ಮೂಲಕ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆಲ್ಲುವುದು ನಮಗೆ ತುಂಬಾ ಮುಖ್ಯ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಬಂದರೆ ಪೆಟ್ರೋಲ್ (Petrol), ಡೀಸೆಲ್‌ ಬೆಲೆ (Diesel Price) ಇಳಿಕೆ ಮಾಡುವುದರ ಜೊತೆಗೆ ರೈತರಿಗೆ ಸಹ ಅನುಕೂಲ ಕ್ರಮ ಜಾರಿ ಮಾಡ್ತೇವೆ. ಬೀಜಗಳ ಮತ್ತು ರಸಗೊಬ್ಬರಗಳಿಗೆ ವಿನಾಯಿತಿ ಮತ್ತು ಸಬ್ಸಿಡಿ ಜಾರಿಗೆ ತರ್ತೇವೆ ಮತ್ತು ಅಡುಗೆ ಇಂಧನವಾದ ಗ್ಯಾಸ್ ಸಿಲಿಂಡರ್ ಬೆಲೆ ಸಹ ಇಳಿಕೆ ಮಾಡ್ತೆವೆ ಎಂದು ಹೇಳಿದ್ದಾರೆ.

ಆಡಳಿತ ಪಕ್ಷದ ಅಭಿವೃದ್ಧಿಯನ್ನು ವಿರೋಧ ಮಾಡೊದೆ ವಿರೋಧ ಪಕ್ಷದ ಕೆಲಸ ಚುನಾವಣೆಗೆ ಪೂರ್ವದಲ್ಲು ಗ್ಯಾರೆಂಟಿ ಹರಿದು ಹಾಕಿ ಎಂದ ವಿಪಕ್ಷ ಈಗ ಜನತೆಗೆ ಗ್ಯಾರೆಂಟಿ ಕೇಳಿ ಈಗಲೇ ಜಾರಿ ಮಾಡಿ ಎಂದು ಪಟ್ಟು ಹಿಡಿಯುತ್ತಿದ್ದಾರೆ. ಕರ್ನಾಟಕದ ಜನತೆ ಮೂರ್ಖರೇನಲ್ಲ ನಂಬಿಕೆ ಇಟ್ಟು ಈ ಸ್ಥಾನ ನೀಡಿದ್ದಾರೆ. ನಮ್ಮ ಕೆಲಸ ಕೊಟ್ಟ ಭರವಸೆ ಎಲ್ಲವೂ ನೆನಪಿದೆ. ಒಂದೊಂದೆ ಗ್ಯಾರೆಂಟಿ ಬರುತ್ತೆ ನೋಡ್ತಾ ಇರಿ. ನಮ್ಮ ಆಡಳಿತದ ಅವಧಿಯಲ್ಲಿ ಜನರಿಗೆ ಕೊಟ್ಟ ಸೌಲಬ್ಯ ಅವರ ಅವಧಿಯಲ್ಲಿ ಇರಲಿಲ್ಲ ಈಗ ಮತ್ತೇ ನಾವು ಬಂದಿದ್ದೇವೆ ಪುನಃ ಕರ್ನಾಟಕದ ಸಮೃದ್ಧ ಅಭಿವೃದ್ಧಿ ಮಾಡ್ತೇವೆ ಅದೇ ರೀತಿ ನಮಗೆ ಕೇಂದ್ರದ ನೆರವು ಬೇಕು ಹಾಗಾಗಿ ಕೇಂದ್ರದಲ್ಲೂ ಕೈ ಮುನ್ನಡೆ ಬರಲು ಕರ್ನಾಟಕದ ಜನತೆ ಸಹಕಾರ ಬೇಕು ಎಂದಿದ್ದಾರೆ

Post a Comment

Previous Post Next Post

Top Post Ad

CLOSE ADS
CLOSE ADS
×