ಕೂಡಲೇ ವಿದ್ಯುತ್ ದರ ಇಳಿಕೆ ಮಾಡಬೇಕೆಂದು KCC&I ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿತ್ತು. ಗಡುವು ಮುಕ್ತಾಯವಾದ ಹಿನ್ನೆಲೆ ಬಂದ್‌ಗೆ ಕರೆ ಕೊಡಲಾಗಿದೆ.
ಇದೇ ವೇಳೆ ಬೆಲೆ ಇಳಿಕೆ ಮಾಡದಿದ್ರೆ ಎಲ್ಲಾ ಕೈಗಾರಿಕೆಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಲಾಗಿತ್ತು.
ವಿದ್ಯುತ್ ದರ ಇಳಿಕೆಯಾಗದ ಹಿನ್ನೆಲೆಯಲ್ಲಿ ಜೂನ್ 22ರಂದು ಒಂದು ದಿನ ಬಂದ್‌ಗೆ ಕರೆ ನೀಡಲಾಗಿದೆ
KCCI ಎಚ್ಚರಿಕೆ ನೀಡಿದ್ರೂ ರಾಜ್ಯ ಸರ್ಕಾರ ಯಾವುದೇ ಚರ್ಚೆ ನಡೆಸದ ಹಿನ್ನೆಲೆಯಲ್ಲಿ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಬಂದ್ ನಿರ್ಧಾರ ತೆಗೆದುಕೊಂಡಿದೆ.
ಇದೀಗ ಜೂನ್ 22 ಕ್ಕೆ ಚೇಂಬರ್ಸ್ ಆಫ್ ಕಾಮರ್ಸ್ ‘ಕರ್ನಾಟಕ ಬಂದ್’ಗೆ ಕರೆ ನೀಡಿದೆ! ಒಂದು ನೂತನ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಅದೇ ಸರಕಾರದ ವಿರುದ್ಧ ರಾಜ್ಯ ಬಂದ್‌ಗೆ ಕರೆ ಬಂದಿರುವುದು, ದೇಶದಲ್ಲೇ ಇದೇ ಮೊದಲು ಎಂದು ಬಿಜೆಪಿ ವಾಗ್ದಾಳಿ ನಡೆದಿದೆ.
ಮಾನ್ಯ ಸಿದ್ದರಾಮಯ್ಯರವರೇ, ಬಂದ್ ಆಗುವವರೆಗೂ ಕಾದು ಜನಸಾಮಾನ್ಯರಿಗೆ ತೊಂದರೆ ಕೊಡುತ್ತೀರೋ ಅಥವಾ ಮೊದಲೇ ಪರಿಹಾರ ಕೈಗೊಳ್ಳುತ್ತೀರೋ? ಅಥವಾ, ಇದಕ್ಕೂ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಅವರ ಪರ್ಮಿಷನ್ ಬೇಕೇ ಎಂದು ಬಿಜೆಪಿ ಪ್ರಶ್ನೆ ಮಾಡಿದೆ
ಆದರೆ ಇವರೆಗೂ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಬಂದ್ ಬಗ್ಗೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.