JNVST Class 6 Results 2023: ನವೋದಯ 6ನೇ ತರಗತಿ ಪ್ರವೇಶ ಪರೀಕ್ಷೆ ಫಲಿತಾಂಶ ಬಿಡುಗಡೆ..ಆಯ್ಕೆಯಾದ ವಿದ್ಯಾರ್ಥಿಗಳು ಎಷ್ಟು?

JNVST Class 6 Results 2023: ನವೋದಯ 6ನೇ ತರಗತಿ ಪ್ರವೇಶ ಪರೀಕ್ಷೆ ಫಲಿತಾಂಶ ಬಿಡುಗಡೆ..ಆಯ್ಕೆಯಾದ ವಿದ್ಯಾರ್ಥಿಗಳು ಎಷ್ಟು?

 Navodaya Vidyalaya Class 6 Results 2023: ನವೋದಯ ವಿದ್ಯಾಲಯ ಸಮಿತಿಯ 6ನೇ ತರಗತಿ ಪ್ರವೇಶ ಪರೀಕ್ಷೆಯ ಫಲಿತಾಂಶ ಬಿಡುಗಡೆ ಆಗಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶವನ್ನು ಪಡೆಯಬಹುದಾಗಿದೆ.



ನವೋದಯ ವಿದ್ಯಾಲಯ ಸಮಿತಿಯ 6ನೇ ತರಗತಿ ಪ್ರವೇಶ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಿದೆ. 6ನೇ ತರಗತಿ ಪ್ರವೇಶಕ್ಕೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ navodaya.gov.inಗೆ ಭೇಟಿ ನೀಡಿ ಫಲಿತಾಂಶವನ್ನು ಪಡೆಯಬಹುದಾಗಿದೆ. ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ ಏಪ್ರಿಲ್ 29, 2023 ರಂದು ನವೋದಯ ವಿದ್ಯಾಲಯ ಸಮಿತಿಯ 6ನೇ ತರಗತಿ ಪ್ರವೇಶ ಪರೀಕ್ಷೆಯನ್ನು ನಡೆಸಿತ್ತು.

ಜೆಎನ್‌ವಿಎಸ್‌ಟಿ 6ನೇ ತರಗತಿಯ ಪ್ರವೇಶ ಪರೀಕ್ಷೆಯಲ್ಲಿ ಮಾನಸಿಕ ಸಾಮರ್ಥ್ಯ ವಿಷಯದಿಂದ 40 ಪ್ರಶ್ನೆಗಳು, ಅಂಕಗಣಿತ ವಿಭಾಗದಿಂದ 20 ಪ್ರಶ್ನೆಗಳು ಮತ್ತು ಭಾಷಾ ವಿಷಯದಿಂದ 20 ಪ್ರಶ್ನೆಗಳನ್ನು ಕೇಳಲಾಗಿತ್ತು. JNV ಮೆರಿಟ್ ಪಟ್ಟಿಯಲ್ಲಿ, ದೇಶಾದ್ಯಂತ ವಿವಿಧ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಬಹುದಾದ ವಿದ್ಯಾರ್ಥಿಗಳ ಹೆಸರನ್ನು ಬಿಡುಗಡೆಮಾಡಲಾಗುತ್ತದೆ.


ಈ ಬಾರಿ ನವೋದಯ ವಿದ್ಯಾಲಯ 6 ನೇ ತರಗತಿಗೆ ಆಯ್ಕೆ ಬಯಸಿ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 50,000 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು

6ನೇ ತರಗತಿ ಪ್ರವೇಶ ಪರೀಕ್ಷೆltbಯ ಫಲಿತಾಂಶ ಚೆಕ್‌ ಮಾಡುವುದು ಹೇಗೆ?

navodaya.gov.in.ಅಫೀಶಿಯಲ್‌ ವೆಬ್‌ಸೈಟ್‌ ಗೆ ಭೇಟಿ ನೀಡಿ.

ಮುಖಪುಟದಲ್ಲಿ 6ನೇ ತರಗತಿ ಪ್ರವೇಶ ಪರೀಕ್ಷೆಯ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ ಓಪನ್ ಆದ ಪುಟದಲ್ಲಿ ರೋಲ್‌ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿಯನ್ನು ಟೈಪ್‌ ಮಾಡಿ.

ನಂತರ ಹೊಸ ಪುಟದಲ್ಲಿ 'Check Result' ಎಂಬಲ್ಲಿ ಕ್ಲಿಕ್ ಮಾಡಿ.

ಫಲಿತಾಂಶ ಪುಟ ತೆರೆದುಕೊಳ್ಳುತ್ತದೆ. ಡೌನ್‌ಲೋಡ್ ಮಾಡಿಕೊಳ್ಳಿ.

ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್‌ ತೆಗೆದುಕೊಳ್ಳಿ.

6ನೇ ತರಗತಿ ಪ್ರವೇಶಕ್ಕಾಗಿ ಬೇಕಾಗುವ ದಾಖಲೆಗಳ ಪಟ್ಟಿ

ವಿದ್ಯಾರ್ಥಿಯ ಹುಟ್ಟಿದ ದಿನಾಂಕದ ಪುರಾವೆ.

NVSಗೆ ದಾಖಲಾತಿಗೆ ಬೇಕಾಗಿರುವ ದಾಖಲೆಗಳು.

ವಿದ್ಯಾರ್ಥಿಯೂ ಗ್ರಾಮೀಣ ಪ್ರದೇಶದಲ್ಲಿ ಓದಿದ್ದರೆ, ವಿದ್ಯಾರ್ಥಿ ಓದಿದ ಶಾಲೆಯಿಂದ ಗ್ರಾಮೀಣ ದಾಖಲೆ ಪ್ರಮಾಣ ಪತ್ರ. ( ಗ್ರಾಮೀಣ ಕೋಟಾದಡಿ ಅರ್ಜಿ ಸಲ್ಲಿಸಿದವರು).

ನಿವಾಸಿ ಪ್ರಮಾಣಪತ್ರ.

ಶಾಲಾ ದಾಖಲಾತಿಗೆ ಬೇಕಾಗುವ ಇತರೆ ಅಗತ್ಯ ದಾಖಲೆಗಳು.


Post a Comment

Previous Post Next Post
CLOSE ADS
CLOSE ADS
×