Solar Stove: ಫ್ರಿ ಕರೆಂಟ್ ಬೆನ್ನಲ್ಲೇ ಇದೀಗ ಸರ್ಕಾರವ ಕೊಡುತ್ತಿದೆ ಸೋಲಾರ್ ಸ್ಟವ್, ಅತಿ ಕಡಿಮೆ ಬೆಲೆಗೆ

Solar Stove: ಫ್ರಿ ಕರೆಂಟ್ ಬೆನ್ನಲ್ಲೇ ಇದೀಗ ಸರ್ಕಾರವ ಕೊಡುತ್ತಿದೆ ಸೋಲಾರ್ ಸ್ಟವ್, ಅತಿ ಕಡಿಮೆ ಬೆಲೆಗೆ

 ಈಗಾಗಲೇ ಹೆಚ್ಚುತ್ತಿರುವ ಗ್ಯಾಸಿನ ಬೆಲೆ ಅಡುಗೆ ಮನೆಯಲ್ಲಿ ಕೂಡ ಬಜೆಟ್ ನೋಡಿ ಅಡುಗೆ ಮಾಡುವಂತಹ ಪರಿಸ್ಥಿತಿಯನ್ನು ತಂದೊದಗಿಸಿದೆ.



 ಇದಕ್ಕಾಗಿ ಸರ್ಕಾರದ ಮೂಲಕ ಇಂಡಿಯನ್ ಆಯಿಲ್ ಕಾರ್ಪೊರೇಷನ್ (Indian Oil Corporation) ಸಂಸ್ಥೆ ಹೊಸ ಸೋಲಾರ್ ಸ್ಟೌ (Solar Stove) ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಇದಕ್ಕೆ ಸೂರ್ಯ ನೂತನ್ ಎನ್ನುವಂತಹ ನಾಮಕರಣವನ್ನು ಕೂಡ ಮಾಡಿದ್ದು ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಇದನ್ನು ಫರಿದಾಬಾದ್ ನಲ್ಲಿ ತಯಾರಿಸಲಾಗಿದ್ದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (Indian Oil Corporation) ಸಂಸ್ಥೆ ಈ ವಸ್ತುವನ್ನು ತನ್ನ ಹೆಸರಿಗೆ ಪೇಟೆಂಟ್ ಮಾಡಿಸಿಕೊಂಡಿದೆ. ಸೂರ್ಯ ನೂತನ್ ಸೋಲಾರ್ ಸ್ಟೊವ್ ಬೇರೆ ಸ್ಟೌ ಗಳಿಗಿಂತ ವಿಶೇಷವಾಗಿದ್ದು ಬೇರೆ ಸ್ಟೌಗಳನ್ನು ಬಿಸಿಲಿನಲ್ಲಿ ಇಡಬೇಕಾಗುತ್ತದೆ ಆದರೆ ಈ ಸ್ಟೌ ನಲ್ಲಿ ಎರಡು ಡಿವೈಸ್ ಗಳು ಬರುತ್ತವೆ, 

ಅದರಲ್ಲಿ ಮೊದಲನೆಯದು ನಿಮ್ಮ ಅಡಿಗೆ ಮನೆಯಲ್ಲಿರುತ್ತದೆ ಇನ್ನೊಂದು ಹೊರಗೆ ಬಿಸಿಲಿನಲ್ಲಿ ಇರುತ್ತದೆ. ಇದೊಂದು ರಿಚಾರ್ಜ್ ಆಗುವಂತಹ ಸೋಲಾರ್ ಸ್ಟೌ ಆಗಿದ್ದು ಬಿಸಿಲು ಇಲ್ಲದಿದ್ದರೂ ಕೂಡ ನಿಮ್ಮ ಮನೆಯಲ್ಲಿ ಸುಲಭವಾಗಿ ಅಡುಗೆಯನ್ನು ಮಾಡಬಹುದಾದಂತಹ ಉಪಕರಣವಾಗಿದೆ. ಬಿಸಿಲು ಇರುವಾಗ ಇದರಲ್ಲಿ ಎನರ್ಜಿ ಸ್ಟೋರ್ ಆಗುತ್ತದೆ ಹಾಗೂ ರಾತ್ರಿಯ ಸಂದರ್ಭದಲ್ಲಿ ಯಾವುದೇ ಬಿಸಿಲು ಇಲ್ಲದಿದ್ದರೂ ಕೂಡ ಸುಲಭವಾಗಿ ನೀವು ಅಡಿಗೆ ಮಾಡಬಹುದಾಗಿದೆ

ಸೂರ್ಯನೂತನ್ ಸೋಲಾರ್ ಎನರ್ಜಿ (Surya Nutan Solar Energy) ಸ್ಟೌ ನ ಬೆಲೆ 12,000 ಇಂದ ಪ್ರಾರಂಭವಾಗಿ ಅದರ ಟಾಪ್ ವೇರಿಯಂಟ್ 23,000 ವರೆಗೂ ಕೂಡ ಸಿಗುತ್ತದೆ. ಹೆಚ್ಚುತ್ತಿರುವ ಗ್ಯಾಸ್ ಬೆಲೆ ಅನ್ನು ಗಮನಿಸಿ ಸರ್ಕಾರ ಕೂಡ ಸೋಲಾರ್ ಎನರ್ಜಿಯನ್ನು ಬಳಸಿಕೊಳ್ಳುವ ಮೂಲಕ ಪ್ರಾಕೃತಿಕ ಸಕಾರಾತ್ಮಕತೆಗೂ ಕೂಡ ಸಹಕಾರ ನೀಡುವಂತಹ ಯೋಜನೆಯನ್ನು ಹೊಂದಿದ್ದು

 ಇದಕ್ಕಾಗಿ ಇಂತಹ ಸೋಲಾರ್ ಸ್ಟೌ ಅನ್ನು ಸರ್ಕಾರ ಇನ್ನಷ್ಟು ಜನರಿಗೆ ತಲುಪಿಸುವಂತಹ ಪ್ರೋತ್ಸಾಹವನ್ನು ನೀಡುತ್ತಿದೆ. ಇಂಡಿಯನ್ ಆಯಿಲ್ ಸಂಸ್ಥೆಗೆ ಸೇರಿರುವಂತಹ ಪೆಟ್ರೋಲ್ ಬಂಕ್ಗಳಲ್ಲಿ (Petrol Bunk) ಕೂಡ ನೀವು ಇದನ್ನು ಖರೀದಿಸಬಹುದಾಗಿದೆ ಹಾಗೂ ಇದರ ಕುರಿತಂತೆ ಇನ್ನಷ್ಟು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬಹುದು.

Post a Comment

Previous Post Next Post
CLOSE ADS
CLOSE ADS
×