ಬೆಂಗಳೂರು: ರಾಜ್ಯದ ಜನರಿಗೆ ಉಚಿತ ಗ್ಯಾರಂಟಿಗಳಲ್ಲಿ ಒಂದಾಗಿರುವ ಉಚಿತ 200 ಯೂನಿಟ್ ಕರೆಂಟ್ ನೀಡುವ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ನೀಡಿದ್ದು, ಫ್ರೀ ಆಫರ್ ಜೊತೆಗೆ 5 ಎಸ್ಕಾಂಗಳು (ESCOM) ಜನತೆಗೆ ಭರ್ಜರಿ ಕರೆಂಟ್ ಶಾಕ್ ಕೊಟ್ಟಿದೆ.
ಈ ಬಾರಿಯ ವಿದ್ಯುತ್ ಬಿಲ್‌ಗಳು (Electricity Bill) ಕಳೆದ ಬಾರಿಗಿಂತ ದುಪ್ಪಟ್ಟಾಗಿದ್ದು, ಡಬಲ್ ಬಿಲ್ ಕಂಡು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನತೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಬೆಸ್ಕಾಂ (BESCOM) ಅಧಿಕಾರಿಗಳು ಡಬಲ್ ಬಿಲ್‌ನ ಅಸಲಿ ಸತ್ಯವನ್ನು ‘ಪಬ್ಲಿಕ್ ಟಿವಿ’ ಮುಂದೆ ಬಿಚ್ಚಿಟ್ಟಿದ್ದಾರೆ. ಸಾಫ್ಟ್‌ವೇರ್ ಸಮಸ್ಯೆಯಿಂದ ಬಿಲ್‌ಗಳು ತಪ್ಪಾಗಿ ಎಂಟ್ರಿ ಆಗಿದೆ. ಹೀಗಾಗಿ ದುಪ್ಪಟ್ಟು ಬಿಲ್ ಬಂದಿದೆ. ಜನರು ಸಬ್ ಡಿವಿಷನ್‌ಗಳಿಗೆ ಹೋಗಿ ಅನುಮಾನ ಇದ್ದರೆ ಸರಿ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.
ಯಾವುದೇ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸದೆ ಎಡವಟ್ಟು ಮಾಡಿದ್ದರಿಂದ ಡಬಲ್ ಬಿಲ್ ನೋಡಿ ಜನರು ಕಂಗಾಲಾಗಿದ್ದಾರೆ. ತಾಂತ್ರಿಕ ದೋಷದಿಂದ ಹಿಗ್ಗಾಮುಗ್ಗ ಬಿಲ್ ಬಂದಿದೆ ಎಂದು ಬೆಸ್ಕಾಂ ಒಪ್ಪಿಕೊಂಡಿದೆ. ಒಂದು ವೇಳೆ ತಾಂತ್ರಿಕ ದೋಷವಿದ್ದರೆ ದುಡ್ಡು ಕಟ್ಟಿದರೆ ಮತ್ತೆ ದುಡ್ಡು ವಾಪಸ್ ಸಿಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ
Tags:
STATE GOVT. Schemes