Cash At Home: ಭಾರತದ ಎಲ್ಲಾ ರಾಜ್ಯಗಳಿಗೂ ಸೂಚನೆ, ಮನೆಯಲ್ಲಿ ಇಷ್ಟು ಕ್ಯಾಶ್ ಇಡುವಂತಿಲ್ಲ, ಹೊಸ ಆದೇಶ.

Cash At Home: ಭಾರತದ ಎಲ್ಲಾ ರಾಜ್ಯಗಳಿಗೂ ಸೂಚನೆ, ಮನೆಯಲ್ಲಿ ಇಷ್ಟು ಕ್ಯಾಶ್ ಇಡುವಂತಿಲ್ಲ, ಹೊಸ ಆದೇಶ.

 2016ರಲ್ಲಿ ನೋಟಿನ ಅಮಾನ್ಯೀಕರಣ ಆಗಿತ್ತು. ಅದರ ನಂತರ ಮನೆಯಲ್ಲಿ ಕ್ಯಾಶ್ (Cash at Home) ಇಟ್ಟುಕೊಳ್ಳುವ ಪರಿಪಾಠವೂ ಬಹುಶಃ ಕಡಿಮೆ ಆಗುತ್ತಾ ಬಂದಿದೆ ಎನ್ನಬಹುದು.



 ಅದರ ಜೊತೆಗೆ ಡಿಜಿಟಲೀಕರಣ ಕೂಡ ಅಭಿವೃದ್ಧಿಯಾಗಿದ್ದು ಕ್ಯಾಶ್ ವ್ಯವಹಾರಕ್ಕಿಂತ ಆನ್ಲೈನ್ ಮೂಲಕ ಹಣದ ವ್ಯವಹಾರ ಮಾಡುವುದು ಹೆಚ್ಚಾಗಿದೆ ಹಾಗಾಗಿ ಎಲ್ಲರ ಬಳಿಯೂ ಅಷ್ಟಾಗಿ ಕ್ಯಾಶ್ ಇರುವುದಿಲ್ಲ.

ಆದಾಗ್ಯೂ ಕೆಲವು ತುರ್ತು ಸಂದರ್ಭಗಳಲ್ಲಿ ಬ್ಯಾಂಕ್ ಅಥವಾ ಎಟಿಎಂ ಗೆ ಹೋಗಲು ಸಾಧ್ಯವಾಗದೇ ಇದ್ದಾಗ ಅಥವಾ ಆನ್ಲೈನ್ ವ್ಯವಹಾರಗಳನ್ನು ಮಾಡಲು ಸಾಧ್ಯವಾಗದೇ ಇದ್ದಾಗ ಮನೆಯಲ್ಲಿ ಎಮರ್ಜೆನ್ಸಿ ಗಾಗಿ ಸ್ವಲ್ಪ ಹಣ ಇಟ್ಟುಕೊಳ್ಳಬಹುದು. ಆದರೆ ನೀವು ಎಷ್ಟು ಹಣವನ್ನು ಮನೆಯಲ್ಲಿ (Cash at Home) ಇಟ್ಟುಕೊಳ್ಳಬಹುದು ಎಂಬುದನ್ನು ಕೂಡ ಸರ್ಕಾರ ನಿಗದಿಪಡಿಸಿದೆ ಅದನ್ನು ಮೀರಿದರೆ ಇದು ಕಾನೂನು ಬದ್ಧ ಶಿಕ್ಷಾರ್ಹ ಅಪರಾಧ ಎನಿಸಿಕೊಳ್ಳುತ್ತದೆ. ಆದರೆ ಈ ಅಂಬೋಣಗಳು ಎಷ್ಟು ಸತ್ಯ ಸುಳ್ಳು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಸಾಮಾನ್ಯವಾಗಿ ನೀವು ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು ಎನ್ನುವುದರ ಬಗ್ಗೆ ಆರ್‌ಬಿಐ ಆಗಲಿ ಕೇಂದ್ರ ಸರ್ಕಾರವಾಗಲಿ ನಿಖರವಾದ ನಿಯಮ ರೂಪಿಸಿಲ್ಲ. ಆದರೆ ನೀವು ಅತಿ ಹೆಚ್ಚು ಹಣವನ್ನು ಮನೆಯಲ್ಲಿ ಇಟ್ಟುಕೊಂಡಿದ್ದು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಇದು ಬಂದರೆ ನೀವು ಆ ಹಣದ ಮೂಲಕ್ಕೆ ಲೆಕ್ಕಾಚಾರ ಹೇಳಬೇಕಾಗುತ್ತದೆ ನೀವು ಸರಿಯಾದ ದಾಖಲೆಯನ್ನು ಕೊಡದೆ ಇದ್ದಲ್ಲಿ ತೆರಿಗೆ ರಿಟರ್ನ್ ಸಲ್ಲಿಸದೆ ಇದ್ದಲ್ಲಿ ಸಮಸ್ಯೆ ಅನುಭವಿಸಬೇಕಾಗುತ್ತದೆ.

ಹೆಚ್ಚು ಹಣ ಮನೆಯಲ್ಲಿದ್ದರೆ ದಂಡ ವಿಧಿಸುತ್ತಾ ಸರ್ಕಾರ?

ಹೌದು, ನಗದು ಹಣವನ್ನು ಅತಿ ಹೆಚ್ಚಾಗಿ ಇಟ್ಟುಕೊಳ್ಳುವುದು ಸಮಸ್ಯೆಗೆ ಕಾರಣವಾಗಬಹುದು ನೀವು ಒಂದು ವೇಳೆ ನಿಮ್ಮ ಬಳಿ ಇರುವ ಹಣಕ್ಕೆ ಸರಿಯಾದ ಮಾಹಿತಿ ಕೊಡದೆ ಇದ್ದಲ್ಲಿ ಬಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ. ನಿಮ್ಮ ಬಳಿ ಇರುವ ಮೊತ್ತದ 137%ವರೆಗೆ ತೆರಿಗೆ ವಿಧಿಸಬಹುದು. ಅಂದರೆ ಸರಿಯಾದ ಮಾಹಿತಿ ಇಲ್ಲದ ನಿಮ್ಮ ಬಳಿ ಇರುವ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಜೊತೆಗೆ ಅಧಿಕ ತೆರಿಗೆ ಕೂಡ ಪಾವತಿ ಮಾಡಬೇಕು.

ಬ್ಯಾಂಕ್ ನಲ್ಲಿ ಎಷ್ಟು ಹಣ ಇರಬಹುದು?

ನೀವು ಬ್ಯಾಂಕ್ ನಲ್ಲಿ ಹಣ ವ್ಯವಹಾರ ಮಾಡುತ್ತಿದ್ದರೆ ಅದರಲ್ಲೂ 50,000 ಅಥವಾ ಅದಕ್ಕಿಂತ ಹೆಚ್ಚಿನ ಹಣ ಹಿಂಪಡೆಯಲು ಅಥವಾ ಬ್ಯಾಂಕ್ ನಲ್ಲಿ ಡೆಪಾಸಿಟ್ ಇಡಲು ಮುಂದಾದರೆ ನೀವು ಪ್ಯಾನ್ ಕಾರ್ಡ್ ಅನ್ನು ಕಡ್ಡಾಯವಾಗಿ ತೋರಿಸಲೇಬೇಕು. ನಿಮ್ಮ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಎರಡನ್ನು ನೀಡಿ 20 ಲಕ್ಷದವರೆಗೆ ವ್ಯವಹಾರ ಮಾಡಬಹುದು 20 ಲಕ್ಷಕ್ಕೂ ಹೆಚ್ಚು ಹಣವನ್ನು ಜಮಾ ಮಾಡಿದರೆ ಅದಕ್ಕೂ ನೀವು ಸರಿಯಾದ ದಾಖಲಾತಿ ಕೊಡಬೇಕಾಗುತ್ತದೆ. ಹಾಗಾಗಿ ಈ ವಿಷಯಗಳನ್ನು ನೆನಪಿಟ್ಟುಕೊಂಡು ಬ್ಯಾಂಕ್ ವ್ಯವಹಾರಗಳನ್ನು ಮಾಡಿ.


Post a Comment

Previous Post Next Post
CLOSE ADS
CLOSE ADS
×