ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತದಲ್ಲಿ ಪ್ರತಿಬಾರಿ ಸಮಸ್ಯೆಯನ್ನು ತರುವಂತಹ ಒಂದು ವಿಚಾರ ಎಂದರೆ ಅದು ಆಸ್ತಿಯನ್ನು ಪಾಲು ಮಾಡುವುದು. ಎಷ್ಟೇ ಆತ್ಮೀಯವಾಗಿದ್ದರೂ ಕೂಡ ಆಸ್ತಿ ಪಾಲು ವಿಚಾರಕ್ಕೆ ಬಂದಾಗ ಒಡಹುಟ್ಟಿದವರು ಶತ್ರುಗಳಾಗುವುದನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಇತ್ತೀಚಿಗಷ್ಟೇ ಸುಪ್ರೀಂಕೋರ್ಟ್(Supreme Court) ಪಿತ್ರಾರ್ಜಿತ ಆಸ್ತಿಯ ಕುರಿತಂತೆ ಒಂದು ಮಹತ್ವದ ನಿರ್ಧಾರವನ್ನು ಘೋಷಿಸಿದ್ದು ಪ್ರತಿಯೊಬ್ಬರೂ ಕೂಡ ಇದನ್ನು ತಪ್ಪದೆ ಓದಲೇಬೇಕಾಗಿದೆ.
ತಮಿಳುನಾಡು ಮೂಲದ ಪ್ರಕರಣ ಒಂದರಲ್ಲಿ ತೀರ್ಪನ್ನು ನೀಡುತ್ತಾ ಸರ್ವೋಚ್ಚ ನ್ಯಾಯಾಲಯ ಇದರ ಬಗ್ಗೆ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು ಒಂದು ವೇಳೆ ಒಬ್ಬ ವ್ಯಕ್ತಿ ತನ್ನ ಆಸ್ತಿ ಯಾರ ಪಾಲಿಗೆ ಸೇರಬೇಕು ಎಂಬುದಾಗಿ Will ಬರೆಯದೆ ಹೋದರೆ ಅದರಲ್ಲಿ ಆತನ ಮಗಳಾದವಳಿಗೆ ಕೂಡ ಆಸ್ತಿಯ ಹಕ್ಕು ಇರುತ್ತದೆ ಎಂಬುದಾಗಿ ತಿಳಿಸಿದೆ. ಮರಣ ಹೊಂದಿದ ವ್ಯಕ್ತಿಯ ಸಹೋದರನ ಮಕ್ಕಳಿಗಿಂತ ಆ ವ್ಯಕ್ತಿಯ ಸ್ವಂತ ಮಗಳಿಗೆ ಆಸ್ತಿಯಲ್ಲಿ ಹಕ್ಕು ಇರುತ್ತದೆ ಎಂಬುದಾಗಿ ಕೂಡ ತಿಳಿಸಿದೆ. ತಮಿಳುನಾಡಿನಲ್ಲಿ ನಡೆದಿರುವಂತಹ ಈ ಘಟನೆಯಲ್ಲಿ ವ್ಯಕ್ತಿ 1949ರಲ್ಲಿ ಮರಣ ಹೊಂದಿದ್ದರು.
ಈ ಸಂದರ್ಭದಲ್ಲಿ ಅವರು ತನ್ನ ಆಸ್ತಿಯನ್ನು ಯಾರಿಗೆ ನೀಡಬೇಕು ಎನ್ನುವುದಾಗಿ ಪ್ರಮಾಣ ಪತ್ರದಲ್ಲಿ ಬರೆದಿರಲಿಲ್ಲ. ಹೀಗಾಗಿ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದ ಕಾರಣದಿಂದಾಗಿ ಆ ವ್ಯಕ್ತಿಯ ಸಹೋದರನ ಗಂಡು ಮಕ್ಕಳಿಗೆ ಆ ಸಂದರ್ಭದಲ್ಲಿ ಆಸ್ತಿಯನ್ನು ನೀಡಬೇಕು ಎನ್ನುವುದಾಗಿ ನ್ಯಾಯಾಲಯ ತೀರ್ಮಾನ ಮಾಡಿತು. ಆ ವ್ಯಕ್ತಿಯ ಮಗಳಿಗೆ ಕೂಡ ಪ್ರಾಥಮಿಕ ಹಕ್ಕು ಇರುತ್ತದೆ ಎಂಬುದಾಗಿ ಸುಪ್ರೀಂ ಕೋರ್ಟ್ ನಿರ್ಣಯವನ್ನು ಮಾಡುವ ಮೂಲಕ ಇತಿಹಾಸ ಸೃಷ್ಟಿಸುವಂತಹ ನಿಯಮವನ್ನು ಜಾರಿಗೊಳಿಸಿದೆ ಎಂದು ಹೇಳಬಹುದು.
ಇನ್ನು ಮುಂದೆ ಒಬ್ಬ ವ್ಯಕ್ತಿ ಕೇವಲ ಹೆಣ್ಣು ಮಗಳನ್ನು ಮಾತ್ರ ಹೊಂದಿದ್ದರೆ ಆ ವ್ಯಕ್ತಿಯ ಆಸ್ತಿಯನ್ನು ಆಸ್ತಿ ಪಾಲುದಾರಿಕೆ ಕಾನೂನಿನ ಪ್ರಕಾರ ಆಕೆ ಕೂಡ ಸಂಪೂರ್ಣವಾಗಿ ಅಧಿಕಾರವನ್ನು ಹೊಂದಬಹುದಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ತೀರ್ಪು ಖಂಡಿತವಾಗಿ ಮುಂದಿನ ದಿನಗಳಲ್ಲಿ ಆಸ್ತಿಯನ್ನು ಪಾಲು ಮಾಡುವಾಗ ಸಾಕಷ್ಟು ಪ್ರಮುಖವಾದ ಪರಿಣಾಮವನ್ನು ಬೀರಬಹುದು ಎಂಬುದಾಗಿ ಆಲೋಚಿಸಲಾಗಿದೆ.