Bank New Rules : ನಮಸ್ಕಾರ ಸ್ನೇಹಿತರೇ, ಅವಶ್ಯಕತೆಗಿಂತ ಜಾಸ್ತಿಯಿರುವ ಹಣವನ್ನು ಬ್ಯಾಂಕ್(Bank)ನಲ್ಲಿ ಠೇವಣಿ ಇಡುವುದು ಬಹಳ ಮುಖ್ಯ.
ಇದರಿಂದಲೇ ನಮ್ಮ ಹಣ ಕೂಡ ಉಳಿತಾಯವಾಗುತ್ತದೆ. ಆದರೆ, ವರ್ಷಕ್ಕೊಮ್ಮೆ ಬ್ಯಾಂಕ್ ನ ಠೇವಣಿ ಸೌಲಭ್ಯ, ಬಡ್ಡಿ ಮೌಲ್ಯ ಸೇರಿದಂತೆ ಬ್ಯಾಂಕ್ ನ ನಿಯಮಗಳಲ್ಲಿ ಕೂಡ ಬದಲಾವಣೆಯಾಗ್ತಾ ಇರುತ್ತದೆ. ಇದೀಗ ಮುಂದೆ ಉಳಿತಾಯ ಖಾತೆ ಹಾಗು ಚಾಲ್ತಿ ಖಾತೆಯ ನಿಯಮದಲ್ಲಿ ಬದಲಾವಣೆಯಾಗಲಿದೆಯಂತೆ. ಯಾವ ನಿಯಮ ಹಾಗು ಏನು ಬದಲಾವಣೆಯಾಗುತ್ತೆ.? ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.
ಏನು ಬದಲಾವಣೆಯಾಗುತ್ತೆ :-
ಪ್ರತಿಯೊಬ್ಬರೂ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಮಾಡುತ್ತಾರೆ. ಒಂದು ವೇಳೆ ಬಡ್ಡಿಯನ್ನ ಪಾವತಿಸದಿದ್ದರೂ, ಇದು ಹೆಚ್ಚಿನ ಹಿಂಪಡೆಯುವ ಮಿತಿ ಹಾಗು ದೈನಂದಿನ ಠೇವಣಿಯನ್ನ ಹೊಂದಿದೆ. ಓವರ್ ಡ್ರಾಫ್ಟ್ ಸೌಲಭ್ಯ ಹಾಗು ಸಾಲಗಳನ್ನು ನೀವು ಇದರ ಮೂಲಕ ಪಡೆಯಬಹುದು. ನೀವು ನಿರ್ದಿಷ್ಟ ವಹಿವಾಟುಗಳನ್ನ ಉಳಿತಾಯ ಖಾತೆಯಲ್ಲಿ ಮಾಡಬಹುದು. ಆದರೆ, ಯಾವುದೇ ವಹಿವಾಟಿನ ಮಿತಿಯನ್ನ ಚಾಲ್ತಿ ಖಾತೆ ಹೊಂದಿಲ್ಲ. ಚಾಲ್ತಿ ಖಾತೆಯಲ್ಲಿ ನಿಮಗೆ ಬೇಕಾದಷ್ಟು ವಹಿವಾಟುಗಳನ್ನು ನಡೆಸಬಹುದು. ಆದರೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಇದೀಗ ಹೊಸ ನಿಯಮವನ್ನ ತಂದಿದೆ. ಮುಂದಿನ ದಿನಗಳಲ್ಲಿ ಈ ನಿಯಮ ಜಾರಿಯಲ್ಲಿರುತ್ತದೆ.
ಮಾರ್ಗಸೂಚಿ ಏನಂದ್ರೆ :-
ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಇದೀಗ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಚಾಲ್ತಿ ಖಾತೆ ಹಾಗು ಉಳಿತಾಯ ಖಾತೆಯಲ್ಲಿ ಹತ್ತು ವರ್ಷಗಳವರೆಗೆ ಉಪಯೋಗಿಸದೆ ಇರುವ ಹಾಗು ಹಾಗೆಯೇ ಉಳಿದಿರುವ ಮೊತ್ತವನ್ನ 10 ವರ್ಷಗಳೊಳಗೆ ಕ್ಲೈಮ್ ಮಾಡದೇ ಇದ್ದರೆ, ಇದನ್ನ ಉಪಯೋಗಿಸದೆ ಇಡುವ ಠೇವಣಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಇದೆ ಜೂನ್ 1 ರಿಂದ ಬ್ಯಾಂಕ್ ಗಳು ಈ ನಿಯಮಗಳನ್ನು ಸರಿಪಡಿಸಬೇಕು ಎಂದು ಆರ್ ಬಿಐ ತಿಳಿಸಿದೆ.