ಈಗಾಗಲೇ ರಾಜ್ಯದ ಹೊಸ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುವ ಕುರಿತಂತೆ ಮಾತನಾಡಿದ್ದು ಅದರಲ್ಲಿ ಪ್ರಮುಖವಾಗಿ ಈಗ ಎಲ್ಲಾ ಕಡೆ ಕೇಳಿ ಬರುತ್ತಿರುವ ಒಂದೇ ಒಂದು ಯೋಜನೆ ಎಂದರೆ ಅದು 200 ಯೂನಿಟ್ ಉಚಿತ ವಿದ್ಯುತ್ (Free Electricity) ಯೋಜನೆ.
ಇನ್ನು ಪ್ರತಿಯೊಬ್ಬರೂ ಕೂಡ ಜೂನ್ ಮೊದಲನೇ ದಿನಾಂಕದಂದು ಈ ಯೋಜನೆ ಜಾರಿಗೆ ಬರುತ್ತದೆ ಎಂಬುದಾಗಿ ಕಾತರರಾಗಿ ಕಾಯುತ್ತಿದ್ದು ಇನ್ನೂ ಕೆಲವು ರಾಜಕೀಯ ವಿಶ್ಲೇಷಕರು ದೆಹಲಿಯ ಉಚಿತ ವಿದ್ಯುತ್ (Free Electricity) ಯೋಜನೆಗೆ ಹೋಲಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ (Arvind Kejriwal) ನಾಯಕತ್ವದ ಆಮ್ ಆದ್ಮಿ ಪಾರ್ಟಿ (Aam Admi Party) ಅಲ್ಲಿ ಅಧಿಕಾರದಲ್ಲಿದ್ದು ಅಲ್ಲಿ ಕೂಡ 200 ಯೂನಿಟ್ ಉಚಿತ ಯೋಜನೆಯನ್ನು ಅಧಿಕಾರಕ್ಕೆ ಬಂದ ಆರಂಭದಲ್ಲಿ ಘೋಷಿಸಲಾಗಿತ್ತು. ಆದರೆ ನಂತರ ಅಲ್ಲಿ ಕಂಡಿಶನ್ ಕೂಡ ಹಾಕಲಾಗಿತ್ತು. ಅಲ್ಲಿ ಉಚಿತ ವಿದ್ಯುತ್ ಗಾಗಿ ಅಪ್ಲೈ ಮಾಡಿದವರಿಗಾಗಿ ಮಾತ್ರ 200 ಯೂನಿಟ್ ವಿದ್ಯುತ್ ಅನ್ನು ನೀಡಲಾಗಿತ್ತು. ಅಲ್ಲಿನ ವಿದ್ಯುತ್ ಯೋಜನೆಯ ಕುರಿತಂತೆ ಇನ್ನಷ್ಟು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
201 ಯೂನಿಟ್ ನಿಂದ 400 ಯೂನಿಟ್ ವರೆಗೆ ವಿದ್ಯುತ್ ಅನ್ನು ಉಪಯೋಗಿಸುವವರು 50 ಪ್ರತಿಶತ ವಿದ್ಯುತ್ ಬಿಲ್ ಅನ್ನು ಕಟ್ಟಬೇಕಾಗುತ್ತದೆ ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯುತ್ ಅನ್ನು ಉಪಯೋಗಿಸುವವರು ಪೂರ್ಣ ಪ್ರಮಾಣದ ಬಿಲ್ ಅನ್ನು ಕಟ್ಟಬೇಕಾಗುತ್ತದೆ ಎಂಬುದಾಗಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ನಿಯಮವನ್ನು ರೂಪಿಸಿದ್ದರು. ಕರ್ನಾಟಕದಲ್ಲಿ ಕೂಡ ಇದೇ ರೀತಿಯ ಯೋಜನೆಗಳನ್ನು ಈಗ ಜಾರಿಗೆ ತರುವ ಕುರಿತಂತೆ ಮಾತುಕತೆ ನಡೆಯುತ್ತಿದ್ದು ನಿಯಮಗಳು ಯಾವ ರೀತಿ ಇರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.