Gold and Silver Price Today: ಇಂದಿನಿಂದ ಹೊಸ ವ್ಯಾಪಾರ ವಾರ ಪ್ರಾರಂಭವಾಗುತ್ತಿದೆ. ಕಳೆದ ವಾರದ ಆರಂಭದಲ್ಲಿ, ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದೊಡ್ಡ ಕುಸಿತ ದಾಖಲಾಗಿತ್ತು. ಈ ವಾರ ಮಾತ್ರ ಸಾರ್ವಕಾಲಿಕ ದರ ಇಳಿಕೆ ಕಂಡಿದ್ದು, ಚಿನ್ನ-ಬೆಳ್ಳಿ ಖರೀದಿಗೆ ಇದು ಬೆಸ್ಟ್ ಟೈಂ ಎನ್ನುವಂತಾಗಿದೆ.
Gold and Silver Price Today: ಪ್ರಸ್ತುತ ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ಕುಸಿತ ಕಂಡಿದೆ. 10 ಗ್ರಾಂಗೆ ಸುಮಾರು 1500 ರೂ ಮತ್ತು ಬೆಳ್ಳಿಯಲ್ಲಿ ಕೆಜಿಗೆ 9400 ರೂ. ಕಡಿಮೆಯಾಗಿದೆ. ಚಿನ್ನದ ಬೆಲೆ ಸದ್ಯ 10 ಗ್ರಾಂಗೆ ಸುಮಾರು 60,000 ರೂ. ಆಗಿದ್ದು, ಬೆಳ್ಳಿ ಬೆಲೆ ಕೆಜಿಗೆ 70,500 ರೂ. ಆಗಿದೆ.
ಇಂದಿನಿಂದ ಹೊಸ ವ್ಯಾಪಾರ ವಾರ ಪ್ರಾರಂಭವಾಗುತ್ತಿದೆ. ಕಳೆದ ವಾರದ ಆರಂಭದಲ್ಲಿ, ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದೊಡ್ಡ ಕುಸಿತ ದಾಖಲಾಗಿತ್ತು. ಈ ವಾರ ಮಾತ್ರ ಸಾರ್ವಕಾಲಿಕ ದರ ಇಳಿಕೆ ಕಂಡಿದ್ದು, ಚಿನ್ನ-ಬೆಳ್ಳಿ ಖರೀದಿಗೆ ಇದು ಬೆಸ್ಟ್ ಟೈಂ ಎನ್ನುವಂತಾಗಿದೆ.
ಇಂಡಿಯನ್ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಕೇಂದ್ರ ಸರ್ಕಾರವು ಘೋಷಿಸಿದ ರಜಾದಿನಗಳನ್ನು ಹೊರತುಪಡಿಸಿ ಶನಿವಾರ ಮತ್ತು ಭಾನುವಾರದಂದು ದರಗಳನ್ನು ನೀಡುವುದಿಲ್ಲ. ಎರಡು ದಿನಗಳ ರಜೆಯ ನಂತರ ಇದೀಗ ಚಿನ್ನ ಮತ್ತು ಬೆಳ್ಳಿಯ ಹೊಸ ಅಪ್ಡೇಟ್ ಇಂದು ಬಿಡುಗಡೆಯಾಗಲಿದೆ.
ಶುಕ್ರವಾರ ಚಿನ್ನ-ಬೆಳ್ಳಿಯ ದರ
ಕಳೆದ ವಾರದ ಐದನೇ ದಿನ ಮತ್ತು ವ್ಯಾಪಾರದ ಕೊನೆಯ ದಿನವಾದ ಶುಕ್ರವಾರದಂದು, ಚಿನ್ನದ ಪ್ರತಿ 10 ಗ್ರಾಂಗೆ 219 ರೂ.ಗಳಷ್ಟು ಅಗ್ಗವಾಗಿದ್ದು, ಬೆಳ್ಳಿ ಬೆಲೆಯಲ್ಲಿ ಪ್ರತಿ ಕೆಜಿಗೆ 60142 ರೂ. ಇಳಿಕೆಯಾಗಿತ್ತು, ಅದಕ್ಕೂ ಮುನ್ನ ಗುರುವಾರ, ಚಿನ್ನದ ಪ್ರತಿ 10 ಗ್ರಾಂ ಬೆಲೆಯಲ್ಲಿ 319 ರೂ.ಗಳಷ್ಟು ಅಗ್ಗವಾಗಿತ್ತು.
ಶುಕ್ರವಾರದಂದು 24 ಕ್ಯಾರೆಟ್ ಚಿನ್ನ ರೂ.60,142, 23 ಕ್ಯಾರೆಟ್ ರೂ.59,901, 22 ಕ್ಯಾರೆಟ್ ರೂ.55,090, 18 ಕ್ಯಾರೆಟ್ ರೂ.45,107 ಮತ್ತು 14 ಕ್ಯಾರೆಟ್ ರೂ.35,183 ಕ್ಕೆ ಆಗಿತ್ತು. MCX ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯ ಚಿನ್ನ ಮತ್ತು ಬೆಳ್ಳಿ ದರಗಳು ತೆರಿಗೆ ಮುಕ್ತವಾಗಿವೆ. ಆದ್ದರಿಂದ ದೇಶದ ಮಾರುಕಟ್ಟೆಗಳ ದರಗಳ ನಡುವೆ ವ್ಯತ್ಯಾಸವಿರುವುದು ಸಹಜ.
ಮಿಸ್ಡ್ ಕಾಲ್ ನೀಡುವ ಮೂಲಕ ಚಿನ್ನದ ಬೆಲೆಯನ್ನು ತಿಳಿಯಿರಿ:
22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನಾಭರಣಗಳ ಚಿಲ್ಲರೆ ದರವನ್ನು ತಿಳಿಯಲು, ನೀವು 8955664433 ಗೆ ಮಿಸ್ಡ್ ಕಾಲ್ ನೀಡಬಹುದು. ತಕ್ಷಣವೇ ದರಗಳ ಮಾಹಿತಿುಯನ್ನಯ SMS ಮೂಲಕ ನೀಡಲಾಗುತ್ತದೆ. ಇದರೊಂದಿಗೆ, ನಿರಂತರ ಅಪ್ಡೇಟ್ ಪಡೆಯಲು ನೀವು www.ibja.co ಅಥವಾ ibjarates.com ಗೆ ಭೇಟಿ ನೀಡಬಹುದು.