2022-23ನೇ ಸಾಲಿನ ಜಿಲ್ಲೆಯಲ್ಲಿ 1,69,914 ರೈತರಿಗೆ ರೂ.443.09 ಕೋಟಿ ಬೆಳೆ ವಿಮೆ ಮಂಜೂರು.

2022-23ನೇ ಸಾಲಿನ ಜಿಲ್ಲೆಯಲ್ಲಿ 1,69,914 ರೈತರಿಗೆ ರೂ.443.09 ಕೋಟಿ ಬೆಳೆ ವಿಮೆ ಮಂಜೂರು.

 ನಮಸ್ಕಾರ ಆತ್ಮೀಯ ರೈತ ಬಾಂಧವರೇ ಹಾವೇರಿ :

 ಕಳೆದ 2022-23ನೇ ಸಾಲಿನ ಜಿಲ್ಲೆಯಲ್ಲಿ 2,02,436 ರೈತರು ಬೆಳೆ ವಿಮೆ ನೊಂದಣಿ ಮಾಡಿದ್ದರು.



 ಈ ಪೈಕಿ 1.69,914 ರೈತರಿಗೆ ರೂ.409 ಕೋಟಿ ಬೆಳೆ ವಿಮೆ ಮಂಜೂರಾಗಿದೆ. 1,59,992 ರೈತರಿಗೆ ರೂ. 427.04 ಕೋಟಿ ಫಲಾನುಭವಿಗಳು ಖಾತೆಗಳಿಗೆ ಉಳಿಕೆ ವಿಮಾ ಪರಿಹಾರ ಮೊತ್ತ ಮಾಡುವ ಪ್ರಗತಿಯಲ್ಲಿರುತ್ತದೆ. ಎಂದು ಜಿಲ್ಲಾಧಿಕಾರಿ ಮೂರ್ತಿ ಅವರು ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯು ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು, 2022-23 ನೇ ಸಾಲಿನ ಹಂಗಾಮಿನಲ್ಲಿ ಮುಖ್ಯವಾಗಿ ಗೋವಿನಜೋಳ, ಹತ್ತಿ, ಭತ್ತ, ಶೇಂಗಾ ಮತ್ತು ಸೋಯಾ ಅವರೆ ಬೆಳೆಗಳನ್ನು 3.30 ಲಕ್ಷ ಹೆಕ್ಟೇ‌ರ್ ಪ್ರದೇಶದಲ್ಲಿ ಬಿತ್ತನೆ ಗುರಿಗೆ 3,27 ಲಕ್ಷ ಹೆಕ್ಟೇರ್, ಸಾಧನೆಯಾಗಿದ್ದು ಶೇಕಡಾ 99.0 ರಷ್ಟು ಬಿತ್ತನೆಯಾಗಿರುತ್ತದೆ.

ಆನ್ಲೈನ್ ಮೂಲಕ ನಿಮ್ಮ ಖಾತೆಗೆ ಬೆಳೆವಿಮೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. 

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ:


https://www.samrakshane.karnataka.gov.in/publichome.aspx


– ಮೊಟ್ಟಮೊದಲು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ


ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ :https://www.samrakshane.karnataka.gov.in/


ಆಗ ಅಲ್ಲಿ ವರ್ಷ ಹಾಗೂ ಋತುವಿನ ಆಯ್ಕೆ ಮಾಡಿ

-ವರ್ಷ 2022 2023 

-ಋತು ಮುಂಗಾರು( kharif)

-ಮುಂದೆ/GO ಬಟನನ್ನು ಒತ್ತಿ 

ಅದಾದ ನಂತರ ಓಪನ್ ಆಗುವಂತಹ ಹೊಸ ಟ್ಯಾಬ್ ನಲ್ಲಿ, ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.


– ಆಗೋಪನಾಗುವಂತ ಹೊಸ ಪೇಜ್ ನಲ್ಲಿ ನಿಮಗೆ ಮೂರು ಆಯ್ಕೆಗಳಿರುತ್ತವೆ


1-proposal number

 2-mobile number

3-aadhar number

ಈ ಮೂರು ಆಪ್ಷನ್ ನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ. 


– ಅದರಲ್ಲಿ ಪ್ರಪೋಸಲ್ ನಂಬರನ್ನು ಆಯ್ಕೆ ಮಾಡಿ.

– ಕೆಳಗಡೆ ನಿಮ್ಮ ಪ್ರಪೋಸಲ್ (ಅಪ್ಲಿಕೇಶನ್) ನಂಬರನ್ನು ನಮೂದಿಸಿ.

– ಕ್ಯಾಚ್ ಪಕೋಡನು ಟೈಪ್ ಮಾಡಿ.

– ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.


ಹೀಗೆ ಮಾಡುವ ಮೂಲಕ ನೀವು ಬೆಳೆ ವಿಮೆ ಮಾಡಿಸಿದಂತಹ ಬೆಳಗೆ ಎಷ್ಟು ವಿಮೆಯ ಹಣ ಜಮಯಾಗಿದೆ ಎಂಬುದನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಆನ್ಲೈನ್ ಮುಖಾಂತರ ಚೆಕ್ ಮಾಡಿಕೊಳ್ಳಬಹುದಾಗಿದೆ.


2022-23 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಾವೇರಿ ತಾಲೂಕಿನಲ್ಲಿ 21719.20 ಹೆಕ್ಟೇರ್ ಪ್ರದೇಶಕ್ಕೆ 24314 ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದು, 21.150 ಫಲಾನುಭವಿಗಳಿಗೆ ರೂ.5819.50 ಲಕ್ಷ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿರುತ್ತದೆ

ಹಾನಗಲ್ ತಾಲೂಕಿನಲ್ಲಿ 27326.28 ಹೆಕ್ಟೇರ್ ಪ್ರದೇಶಕ್ಕೆ 45099 ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದ 25,104 ಫಲಾನುಭವಿಗಳಿಗೆರೂ. 4367.56 ಲಕ್ಷ ಬೆಳೆ ವಿಮೆಪರಿಹಾರ ಮೊತ್ತ ಜಮೆಯಾಗಿರುತ್ತದೆ.

ಸವಣೂರು ತಾಲೂಕಿನಲ್ಲಿ 16418.26 ಹೆಕ್ಟೇರ್ ಪ್ರದೇಶಕ್ಕೆ 15.860 ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದು, 13.945 ಫಲಾನುಭವಿಗಳಿಗೆ ರೂ. 4348.67 ಲಕ್ಷ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿರುತ್ತದೆ.


 ಶಿಗ್ಗಾಂವ ತಾಲೂಕಿನಲ್ಲಿ 20951.10 ಹೆಕ್ಟೇರ್ ಪ್ರದೇಶಕ್ಕೆ 25.129 ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದು. ಪರಿಹಾರ ಮೊತ್ತ ಜಮೆಯಾಗಿರುತ್ತದೆ. 17,828 ಫಲಾನುಭವಿಗಳಿಗೆ ರೂ. 4633.91 ಲಕ್ಷ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿರುತ್ತದೆ.


ಬ್ಯಾಡಗಿ ತಾಲೂಕಿನಲ್ಲಿ 18751.31 ಹೆಕ್ಟೇರ್ ಪ್ರದೇಶಕ್ಕೆ 23.364 ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದು, 20.978 ಫಲಾನುಭವಿಗಳಿಗೆ ರೂ. 6448.86 ಲಕ್ಷ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿರುತ್ತದೆ.


 ಹಿರೇಕೆರೂರು ತಾಲೂಕಿನಲ್ಲಿ 11966.98 ಹೆಕ್ಟೇರ್ ಪ್ರದೇಶಕ್ಕೆ . 19021 ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದು. 16,942 ಫಲಾನುಭವಿಗಳಿಗೆ ರೂ. 4798.51 ಲಕ್ಷ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿರುತ್ತದೆ.

ರಾಣೇಬೆನ್ನೂರು ತಾಲೂಕಿನಲ್ಲಿ ರೂ. 4367.56 ಲಕ್ಷ ಬೆಳೆ ವಿಮೆ 2630362 ಹೆಕ್ಟೇರ್ ಪ್ರದೇಶಕ್ಕೆ ಪರಿಹಾರ ಮೊತ್ತ ಜಮೆಯಾಗಿರುತ್ತದೆ. 31486 ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದು, 26,831 ಫಲಾನುಭವಿಗಳಿಗೆ ರೂ. 7033.48 ಲಕ್ಷ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿರುತ್ತದೆ. ರಟ್ಟಿಹಳ್ಳಿ ತಾಲೂಕಿನಲ್ಲಿ 12913.47 ಹೆಕ್ಟೇರ್ ಪ್ರದೇಶಕ್ಕೆ 18,163 ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದು, 17204 ಫಲಾನುಭವಿಗಳಿಗೆ ರೂ. 525361 ಲಕ್ಷ ಬೆಳೆ ವಿಮೆ.


ಬೆಳೆ ವಿಮೆ ಜಮೆಯಾದ ರೈತರ ವಿವರಗಳ ಮಾಹಿತಿಯನ್ನು ಈಗಾಗಲೇ ರೈತ ಕೇಂದ್ರಗಳಿಗೆ ರವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

Post a Comment

Previous Post Next Post
CLOSE ADS
CLOSE ADS
×