Aadhaar Update: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಒಂದು ಭರ್ಜರಿ ಸಿಹಿ ಸುದ್ದಿ ನೀಡಿದೆ. ಅದುವೇ, ನಿಮ್ಮ ಬಳಿ ಯಾವುದೇ ಅಧಿಕೃತ ದಾಖಲೆಗಳಿಲ್ಲದಿದ್ದರೂ ಸಹ, ಈ ವಿಧಾನದ ಮೂಲಕ ನಿಮ್ಮ ಆಧಾರ್‌ನಲ್ಲಿ ವಿಳಾಸವನ್ನು ಬದಲಾಯಿಸಿಕೊಳ್ಳಲು ಈಗ ಅವಕಾಶ ಕಲ್ಪಿಸಲಾಗಿದೆ. ಹಾಗಾದ್ರೆ, ಆ ವಿಧಾನ ಯಾವುದು ಗೊತ್ತಾ?
Aadhaar Update: ಇವತ್ತೇಲ್ಲಾ ಆಧಾರ್ ಕಾರ್ಡ್ (Aadhar Card) ಎನ್ನುವುದು ಕೇವಲ ಗುರುತಿನ ಚೀಟಿಯಾಗಿ ಉಳಿದಿಲ್ಲ, ಬದಲಾಗಿ ಅದು ನಮ್ಮ ಜೀವನದ ಪ್ರತಿಯೊಂದು ಅಧಿಕೃತ ಕೆಲಸಕ್ಕೂ ಬೇಕಾಗುವ ಅನಿವಾರ್ಯ ದಾಖಲೆಯಾಗಿದೆ.! ಆದರೆ, ಮನೆ (House) ಬದಲಾಯಿಸಿದಾಗ ಅಥವಾ ಬಾಡಿಗೆ ಮನೆಗೆ ಹೋದಾಗ ಆಧಾರ್‌ನಲ್ಲಿ ವಿಳಾಸವನ್ನು ಅಪ್‌ಡೇಟ್ (Address Update in Aadhaar) ಮಾಡುವುದು ಯಾವಾಗಲೂ ಒಂದು ದೊಡ್ಡ ತಲೆನೋವಾಗಿರುತ್ತದೆ.
ಯಾಕಂದ್ರೆ, ಆಧಾರ್ ಅಪಡೇಟ್ ಮಾಡುವಾಗ, ಅಡ್ರೆಸ್ ಪ್ರೂಫ್ ನೀಡಲು ಸರಿಯಾದ ದಾಖಲೆಗಳಿಲ್ಲದೆ ಹಲವರು ಪರದಾಡುತ್ತಿದ್ದರು. ಆದರೆ ಈಗ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಒಂದು ಭರ್ಜರಿ ಸಿಹಿ ಸುದ್ದಿ ನೀಡಿದೆ. ಅದುವೇ, ನಿಮ್ಮ ಬಳಿ ಯಾವುದೇ ಅಧಿಕೃತ ದಾಖಲೆಗಳಿಲ್ಲದಿದ್ದರೂ ಸಹ, ಈ ವಿಧಾನದ ಮೂಲಕ ನಿಮ್ಮ ಆಧಾರ್‌ನಲ್ಲಿ ವಿಳಾಸವನ್ನು ಬದಲಾಯಿಸಿಕೊಳ್ಳಲು ಈಗ ಅವಕಾಶ ಕಲ್ಪಿಸಲಾಗಿದೆ. ಹಾಗಾದ್ರೆ, ಆ ವಿಧಾನ ಯಾವುದು ಗೊತ್ತಾ?
ಏನಿದು ಹೊಸ ನಿಯಮ?
ಸಾಮಾನ್ಯವಾಗಿ ಆಧಾರ್‌ನಲ್ಲಿ ವಿಳಾಸ ಬದಲಾಯಿಸಲು ಬಾಡಿಗೆ ಆಗ್ರಿಮೆಂಟ್, ಬ್ಯಾಂಕ್ ಪಾಸ್‌ಬುಕ್ ಅಥವಾ ವಿದ್ಯುತ್ ಬಿಲ್‌ನಂತಹ ದಾಖಲೆಗಳು ಬೇಕಾಗುತ್ತಿದ್ದವು. ಆದರೆ ಈಗ, ನಿಮ್ಮ ಕುಟುಂಬದ ಮುಖ್ಯಸ್ಥರ (ತಂದೆ, ತಾಯಿ, ಪತಿ ಅಥವಾ ಪತ್ನಿ) ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನೇ ನಿಮ್ಮ ಆಧಾರ್‌ಗೂ ಅಳವಡಿಸಿಕೊಳ್ಳಬಹುದು. ಅಂದರೆ, ಕುಟುಂಬದ ಮುಖ್ಯಸ್ಥರು ನೀಡುವ ಒಂದು 'ಸಮ್ಮತಿ' ನಿಮ್ಮ ವಿಳಾಸ ಬದಲಾವಣೆಗೆ ಸಾಕಾಗುತ್ತದೆ.
ಯಾರಿಗೆ ಇದು ಹೆಚ್ಚು ಉಪಯುಕ್ತ?
ಉದ್ಯೋಗದ ಕಾರಣ ಅಥವಾ ಮದುವೆಯಾಗಿ ಹೊಸ ಸ್ಥಳಕ್ಕೆ ಬಂದವರಿಗೆ, ತಮ್ಮ ಹೆಸರಿನಲ್ಲಿ ಯಾವುದೇ ವಿಳಾಸದ ಪುರಾವೆಗಳಿಲ್ಲದ ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಹೊಸ ನಿಯಮವು ವರದಾನವಾಗಲಿದೆ. ಇದರಿಂದ ಅಡ್ರೆಸ್ ಪ್ರೂಫ್‌ಗಾಗಿ ಕಚೇರಿಗಳಿಗೆ ಅಲೆಯುವ ಕೆಲಸ ತಪ್ಪುತ್ತದೆ.!
ಹಾಗಾದ್ರೆ, ಅಪ್‌ಡೇಟ್ ಮಾಡುವುದೇಗೆ?
ಈ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯುತ್ತದೆ. ಮೊದಲಿಗೆ ಮೈ ಆಧಾರ್ ಪೋರ್ಟಲ್‌ನಲ್ಲಿ ಲಾಗಿನ್ ಆಗಿ 'HoF based address update' ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನಿಮ್ಮ ಕುಟುಂಬದ ಮುಖ್ಯಸ್ಥರ ಆಧಾರ್ ಸಂಖ್ಯೆಯನ್ನು ನಮೂದಿಸಿ, ಅವರೊಂದಿಗೆ ನಿಮಗಿರುವ ಸಂಬಂಧದ ಬಗ್ಗೆ ಮಾಹಿತಿ ನೀಡಬೇಕು. ಇನ್ನು, ಸಂಬಂಧದ ಪುರಾವೆಯಾಗಿ ಪಡಿತರ ಚೀಟಿ ಅಥವಾ ಸ್ವಯಂ ಘೋಷಣಾ ಪತ್ರವನ್ನು ಅಪ್‌ಲೋಡ್ ಮಾಡಬಹುದು. ಇದಾದ ನಂತರ 50 ರೂಪಾಯಿ ಶುಲ್ಕ ಪಾವತಿಸಬೇಕು. ಅಂತಿಮವಾಗಿ, ಕುಟುಂಬದ ಮುಖ್ಯಸ್ಥರು ತಮ್ಮ ಲಾಗಿನ್ ಮೂಲಕ 30 ದಿನಗಳೊಳಗೆ ನಿಮ್ಮ ವಿನಂತಿಯನ್ನು ಅನುಮೋದಿಸಬೇಕಾಗುತ್ತದೆ.
ಸ್ವಯಂ ಘೋಷಣಾ ಪತ್ರದ ಬಳಕೆ:
ಇನ್ನೂ, ಒಂದು ವೇಳೆ ಸಂಬಂಧವನ್ನು ಸಾಬೀತುಪಡಿಸಲು ಯಾವುದೇ ದಾಖಲೆ ಇಲ್ಲದಿದ್ದರೆ, UIDAI ವೆಬ್‌ಸೈಟ್‌ನಲ್ಲಿ ಸಿಗುವ ನಮೂನೆಯನ್ನು ಬಳಸಿ ಸ್ವಯಂ ಘೋಷಣಾ ಪತ್ರದ ಮೂಲಕ ಅಪ್‌ಡೇಟ್ ಮಾಡಿಕೊಳ್ಳಬಹುದು.