ಕ್ಯೂಆರ್ (QR) ಕೋಡ್ ತೋರಿಸಿ ಕಾಂಟ್ಯಾಕ್ಟ್ ಶೇರ್ ಮಾಡಿ – ಹೊಸ Aadhaar App ಫೀಚರ್ ಇಲ್ಲಿದೆ

By SVR Creations
ನೀವು ಹೊಸ ವ್ಯಕ್ತಿಯನ್ನು ಭೇಟಿಯಾದಾಗ ಅಥವಾ ಬ್ಯಾಂಕ್, ಕಚೇರಿ, ಆಸ್ಪತ್ರೆಗಳಲ್ಲಿ“ಸರ್, ನಿಮ್ಮ ಮೊಬೈಲ್ ನಂಬರ್ ಹೇಳಿ” ಅಂತ ಕೇಳಿದ್ರೆ ಕಿರಿಕಿರಿ ಆಗುತ್ತಾ?
ಹತ್ತು ಅಂಕೆಗಳ ನಂಬರ್ ಹೇಳುವಾಗ ತಪ್ಪಾಗಿ ಹೇಳಿ, ಮತ್ತೆ ಸರಿಪಡಿಸಬೇಕಾಗುತ್ತಾ?
ಇನ್ಮುಂದೆ ಆ ಸಮಸ್ಯೆಗಳಿಗೆ ಫುಲ್ ಸ್ಟಾಪ್ 




UIDAI (ಆಧಾರ್ ನೀಡುವ ಸಂಸ್ಥೆ) ಇದೀಗ mAadhaar App ನಲ್ಲಿ ಹೊಸ ಮತ್ತು ಸೂಪರ್ ಫೀಚರ್ ಬಿಡುಗಡೆ ಮಾಡಿದೆ.
ಇನ್ಮುಂದೆ ನಿಮ್ಮ ಹೆಸರು ಮತ್ತು ಮೊಬೈಲ್ ನಂಬರ್ ಅನ್ನು QR Code ಮೂಲಕ ಶೇರ್ ಮಾಡಬಹುದು.

📲 ಹೊಸ Aadhaar App ಫೀಚರ್ ಮುಖ್ಯಾಂಶಗಳು


🚫 No Typing – ನಂಬರ್ ಹೇಳೋದು, ಟೈಪ್ ಮಾಡೋದು ಬೇಡ
📷 Easy Share – ಒಂದೇ ಸ್ಕ್ಯಾನ್‌ನಲ್ಲಿ ಕಾಂಟ್ಯಾಕ್ಟ್ ಸೇವ್
✅ Official & Secure – UIDAI ಅಧಿಕೃತ ಸರ್ಕಾರಿ ಆಪ್
📱 Android & iPhone – ಎಲ್ಲರಿಗೂ ಲಭ್ಯ
💯 Free – ಯಾವುದೇ ಶುಲ್ಕ ಇಲ್ಲ

🤔 ಏನಿದು ಹೊಸ ಫೀಚರ್?


ಹೊಸ mAadhaar App Update 2026 ನಲ್ಲಿ
“Share Contact via QR Code” ಎಂಬ ಹೊಸ ಆಯ್ಕೆಯನ್ನು ಸೇರಿಸಲಾಗಿದೆ.

✔️ ಆಪ್‌ನಲ್ಲಿ ನಿಮ್ಮ ಕಾಂಟ್ಯಾಕ್ಟ್‌ಗೆ ಒಂದು QR Code ಜನರೇಟ್ ಆಗುತ್ತದೆ
✔️ ಎದುರಿನ ವ್ಯಕ್ತಿ ಅದನ್ನು ಸ್ಕ್ಯಾನ್ ಮಾಡಿದ ತಕ್ಷಣ
✔️ ನಿಮ್ಮ ಹೆಸರು ಮತ್ತು ಮೊಬೈಲ್ ನಂಬರ್ ಅವರ ಫೋನ್‌ನಲ್ಲಿ ಡೈರೆಕ್ಟ್ ಸೇವ್ ಆಗುತ್ತದೆ

👉 ರೈತರು, ವಿದ್ಯಾರ್ಥಿಗಳು, ವ್ಯಾಪಾರಿಗಳು, ಸರ್ಕಾರಿ ಕಚೇರಿ ಕೆಲಸಗಳಿಗೆ ಇದು ತುಂಬಾ ಉಪಯುಕ್ತ.

🛠️ ಇದನ್ನು ಬಳಸುವುದು ಹೇಗೆ? (Step-by-Step)


1️⃣ Download
Play Store / App Store ಗೆ ಹೋಗಿ mAadhaar App ಇನ್‌ಸ್ಟಾಲ್ ಮಾಡಿ

2️⃣ Login
ನಿಮ್ಮ ಆಧಾರ್ ನಂಬರ್ ಹಾಕಿ → OTP ಮೂಲಕ ಲಾಗಿನ್ ಆಗಿ

3️⃣ PIN Set
4 ಅಥವಾ 6 ಅಂಕಿಯ ಸುರಕ್ಷಿತ PIN ಸೆಟ್ ಮಾಡಿ

4️⃣ Share Contact
App Open → Services → Share Contact ಕ್ಲಿಕ್ ಮಾಡಿ

5️⃣ QR Code Ready
ಕ್ಷಣದಲ್ಲೇ ನಿಮ್ಮ ಕಾಂಟ್ಯಾಕ್ಟ್ QR Code ಜನರೇಟ್ ಆಗುತ್ತದೆ 🎉

📊 ಕ್ವಿಕ್ ಮಾಹಿತಿ ಟೇಬಲ್
ವಿವರಗಳು ಮಾಹಿತಿ
📱 App Name mAadhaar (New Version)
⚡ Feature QR Code ಮೂಲಕ Contact Sharing
📲 Platform Android & iPhone
🆔 Shared Info Aadhaar-linked Name & Mobile
💰 Cost ಸಂಪೂರ್ಣ ಉಚಿತ

⚠️ Important Note (ತುಂಬಾ ಮುಖ್ಯ)


👉 ಈ QR Code ಮೂಲಕ
ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಮಾತ್ರ ಶೇರ್ ಆಗುತ್ತದೆ
👉 ಬೇರೆ SIM / ಬೇರೆ ನಂಬರ್ ಶೇರ್ ಆಗುವುದಿಲ್ಲ
👉 Aadhaar Update ಆಗಿರಬೇಕು

💡 ನಮ್ಮ ಸಲಹೆ (Pro Tip)

ಪ್ರತಿ ಬಾರಿ ಆಪ್ ಓಪನ್ ಮಾಡೋದು ಕಷ್ಟ ಅಂದ್ರೆ 👇

✔️ ಒಮ್ಮೆ QR Code ಜನರೇಟ್ ಆದ್ಮೇಲೆ
✔️ ಅದರ Screenshot ತೆಗೆದುಕೊಳ್ಳಿ
✔️ Favorites / Gallery ಫೋಲ್ಡರ್‌ನಲ್ಲಿ ಉಳಿಸಿ

ನಂಬರ್ ಕೇಳಿದ್ರೆ → ಫಟ್ ಅಂತ ಫೋಟೋ ತೋರಿಸಿ 😎

❓ FAQs

Q1: ಇದು WhatsApp QR Code ತರಹವೇನಾ?


Ans: ಹೌದು, ಆದರೆ ಇದು ನೇರವಾಗಿ ಫೋನ್ ಕಾಂಟ್ಯಾಕ್ಟ್‌ಗೆ ಸೇವ್ ಆಗುತ್ತದೆ.
ಇದು UIDAI ಸರ್ಕಾರಿ ಆಪ್ ಆಗಿರುವುದರಿಂದ ಹೆಚ್ಚು ಸುರಕ್ಷಿತ.

Q2: Aadhaar Update ಇಲ್ಲದಿದ್ದರೆ ಕೆಲಸ ಮಾಡುತ್ತಾ?


Ans: ಇಲ್ಲ. Aadhaar ಗೆ ಮೊಬೈಲ್ ನಂಬರ್ ಲಿಂಕ್ ಆಗಿರಲೇಬೇಕು.