ಕೇಂದ್ರ, ರಾಜ್ಯ ಸರ್ಕಾರಗಳ 16 ಮಾನದಂಡ ಆಧರಿಸಿ 21 ಲಕ್ಷ ಬಿಪಿಎಲ್‌ ಕಾರ್ಡ್‌ಗಳು ಡಿಲೀಟ್‌

ಕೇಂದ್ರ, ರಾಜ್ಯ ಸರ್ಕಾರಗಳ 16 ಮಾನದಂಡ ಆಧರಿಸಿ 21 ಲಕ್ಷ ಬಿಪಿಎಲ್‌ ಕಾರ್ಡ್‌ಗಳು ಡಿಲೀಟ್‌

ಅನರ್ಹರಿಂದ ಅರ್ಹರಿಗೆ BPL ಕಾರ್ಡ್ ನೀಡಲು ಕಾರ್ಯಾಚರಣೆ

ಬಿಪಿಎಲ್ ಕಾರ್ಡ್‌ದಾರರಿಗೆ (BPL Card) ರಾಜ್ಯ ಸರ್ಕಾರ ಬಿಗ್‌ ಶಾಕ್‌ ಕೊಟ್ಟಿದೆ. ಅನರ್ಹ ಕಾರ್ಡ್‌ಗಳ ಪರಿಶೀಲನೆಗೆ ಆಹಾರ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ರಾಜ್ಯದಲ್ಲಿ ಬರೋಬ್ಬರಿ 21 ಲಕ್ಷಕ್ಕೂ ಕಾರ್ಡ್ ಗಳ ಪರಿಶೀಲನೆ ಆಗ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ 16 ಮಾನದಂಡ ಆಧರಿಸಿ ಕಾರ್ಡ್ ಗಳನ್ನ ರದ್ದು ಮಾಡ್ತಿವೆ. ಬಿಪಿಎಲ್ ಎಪಿಎಲ್‌ಗೆ ಶಿಫ್ಟ್‌ ಮಾಡ್ತಿದ್ದಾರೆ. ಯಾವೆಲ್ಲ ಮಾನದಂಡದಡಿ ಕಾರ್ಡ್ ಡಿಲಿಟ್ ಆಗ್ತಿವೆ. ರಾಜ್ಯದಲ್ಲಿ ಕಾರ್ಡ್ ಪರಿಷ್ಕರಣೆ ಹೇಗಿರಲಿದೆ? ಅನ್ನೋದನ್ನ ತಿಳಿಯಬೇಕಿದ್ರೆ ಮುಂದೆ ಓದಿ

ಅನರ್ಹರಿಂದ ಅರ್ಹರಿಗೆ BPL ಕಾರ್ಡ್ ನೀಡಲು ಕಾರ್ಯಾಚರಣೆ

ಕೇಂದ್ರ ಮತ್ತು ರಾಜ್ಯ ಸರ್ಕಾರ (Karnataka Government) ಅನರ್ಹ ಕಾರ್ಡ್‌ಗಳನ್ನ ಪಟ್ಟಿ ಮಾಡಿವೆ ಅನರ್ಹ ಕಾರ್ಡ್ ಗಳನ್ನ ಲಿಸ್ಟ್ ಔಟ್ ಮಾಡಿ ಕಾರ್ಡ್‌ಗಳ ಪರಿಷ್ಕರಣೆ ಮಾಡಿವೆ. ಈಗಾಗಲೇ ರಾಜ್ಯದಲ್ಲಿ ಸುಮಾರು 21 ಲಕ್ಷ ಕಾರ್ಡ್ ಗಳು ಅನರ್ಹ ಅಂತಾ ಆಗಿದ್ದು ಅಂತಹ ಕಾರ್ಡ್‌ಗಳಿಗೆ ಅಕ್ಕಿ ಸಿಗ್ತಿಲ್ಲ. ಈಗಾಗಲೇ ಡಿಲೀಟ್‌ ಮಾಡಿದ್ದಾರೆ. ಮನೆ ಮನೆಗೂ ತೆರಳಿ ಪರಿಶೀಲನೆ ಮಾಡಿ ಅನರ್ಹರಿಂದ ಅರ್ಹರಿಗೆ ಕಾರ್ಡ್ ನೀಡಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ 12 ಮಾನದಂಡ ಮತ್ತು ರಾಜ್ಯ ಸರ್ಕಾರ 4 ಮಾನದಂಡ ಆಧರಿಸಿ ಕಾರ್ಡ್ ಗಳನ್ನ ಡಿಲೀಟ್‌ ಮಾಡಲಾಗಿದೆ. ಯಾವೆಲ್ಲ ಮಾನದಂಡ ಆಧರಿಸಿ ಕಾರ್ಡ್ ಡಿಲಿಟ್ ಆಗಿದೆ ಅಂತಾ ನೋಡೋದಾದ್ರೆ..

Ration Card 

ಕೇಂದ್ರ ಸರ್ಕಾರ 12 ಮಾನದಂಡಗಳನ್ನ ಆಧಾರವಾಗಿಟ್ಟುಕೊಂಡು 7,76,206 ಕಾರ್ಡ್ ಗಳನ್ನ ಡಿಲೀಟ್ ಮಾಡಿವೆ. ಆ ಮಾನದಂಡ ಯಾವುದು? ಅಂತಾ ನೋಡೋದಾದ್ರೆ..

1. ಆದಾಯ 1.20 ಲಕ್ಷಕ್ಕಿಂತ ಹೆಚ್ಚಿರುವ ಫಲಾನುಭವಿಗಳ ಸಂಖ್ಯೆ – 5,80,415

2. ಬೇರೆ ರಾಜ್ಯದಲ್ಲಿ ಇದ್ದು ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು – 73,859

3. 12 ತಿಂಗಳಿನಿಂದ ಅಕ್ಕಿಪಡೆಯದವರ ಸಂಖ್ಯೆ – 40,833

4. ಪಿಎಂ ಕಿಸಾನ್ ಯೋಜನೆ ಅಡಿ 7.5 ಎಕರೆಗಿಂತ ಹೆಚ್ಚು ಭೂಮಿ ಇರುವವರು – 34,710

5. ಕಂಪನಿಗಳು ಡೈರೆಕ್ಟ್ ಆಗಿರುವವರು – 21,402

6. 6 ರಿಂದ 12 ತಿಂಗಳವರೆಗೂ ಅಕ್ಕಿ ಪಡೆಯದವರು – 17,414

7. ಜಿಎಸ್‌ಟಿ ಹೊಂದಿದ್ದೂ 25 ಲಕ್ಷಕ್ಕಿಂತ ಹೆಚ್ಚು ವಹಿವಾಟು – 2,695

8. 100 ವರ್ಷ ಮೇಲ್ಪಟ್ಟ ಪಡಿತರ ಫಲಾನುಭವಿಗಳು – 2050

9. ಆಧಾರ್ ಸ್ಥಿತಿಯಲ್ಲಿ ಮೃತ ವ್ಯಕ್ತಿಗಳ ಸಂಖ್ಯೆ – 1452

10. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಕ ಸದಸ್ಯ ಫಲಾನುಭವಿಗಳು – 793

11. ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಇರುವವರು – 430

12. ನಾಲ್ಕು ಚಕ್ರ ವಾಹನ ಇರುವವರು – 153

ಇನ್ನೂ ರಾಜ್ಯ ಸರ್ಕಾರ 4 ಮಾನದಂಡಗಳನ್ನ ಇಟ್ಟುಕೊಂಡು 13 ಲಕ್ಷ ಕಾರ್ಡ್‌ಗಳನ್ನ ಡಿಲೀಟ್ ಮಾಡಲಾಗಿದೆ. 4 ಮಾನದಂಡಗಳ ಅಡಿ ಎಷ್ಟೇಷ್ಟು ಕಾರ್ಡ್ ಡಿಲಿಟ್ ಆಗಿವೆ ಅಂತಾ ನೋಡೋದಾದ್ರೆ..

1. ಕಳೆದ 6 ತಿಂಗಳಿನಿಂದ ಅಕ್ಕಿ ಪಡೆಯದವರು – 2,75,667

2. ಆದಾಯ ತೆರಿಗೆದಾರರು – 98,473

3. ವಾರ್ಷಿಕ ವರಮಾನ 1.20 ಲಕ್ಷಕ್ಕಿಂತ ಹೆಚ್ಚು ಇರುವವರು – 10,09,475

4. ಸರ್ಕಾರಿ ನೌಕರರು – 4,036

ಒಟ್ಟು – 13,87,651

ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸರ್ಕಾರಗಳು ಅನರ್ಹ ಕಾರ್ಡ್ ಗಳನ್ನ ಗುರುತಿಸಿ ಪರಿಶೀಲನೆ ಮಾಡ್ತಿದ್ದು ಅನರ್ಹರು ಕೂಡ ಅರ್ಹರು ಅಂತಾ ಸಾಬೀತು ಪಡಿಸಿಕೊಳ್ಳಲು ಅವಕಾಶ ಇದ್ದು ಪರಿಶೀಲನೆ ಕಾರ್ಯ ಪಾರದರ್ಶಕತೆಯಿಂದ ಇರುತ್ತಾ ಕಾದು ನೋಡಬೇಕಿದೆ.



Previous Post Next Post