ಹೊಸ ಪಲ್ಸರ್ 150 ಬಿಡುಗಡೆ: ಪೈಪೋಟಿಗೆ ನಾನು ಸಿದ್ಧವೆಂದ ಅಪಾಚೆ RTR 160: ಯಾವುದು ಬೆಸ್ಟ್?

ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಬಜಾಜ್ ಆಟೋ ಲಿಮಿಟೆಡ್, ಮೊನ್ನೆಯಷ್ಟೆ ಹೊಸ ಪಲ್ಸರ್ 150 ಬೈಕ್ ಅನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆ ಮಾಡಿದೆ. ಇದು ಭಾರತದ ನೆಚ್ಚಿನ 150ಸಿಸಿ ಪರ್ಫಾಮೆನ್ಸ್ ಮೋಟಾರ್‌ಸೈಕಲ್ ಆಗಿದ್ದು, ಈ ಬಾರಿ ಹೊಸ ಬಣ್ಣ ಆಯ್ಕೆಗಳು ಮತ್ತು ರಿಫ್ರೆಶ್ಡ್ ಗ್ರಾಫಿಕ್ಸ್‌ ನೊಂದಿಗೆ ತನ್ನ ಕ್ಲಾಸಿಕ್ ಮಸ್ಕುಲರ್ ಲುಕ್‌ ಉಳಿಸಿಕೊಂಡಿದೆ. ಹೊಸ LED ಹೆಡ್‌ಲ್ಯಾಂಪ್ ಮತ್ತು LED ಬ್ಲಿಂಕರ್‌ಗಳ ಜೊತೆಗೆ ಪಲ್ಸರ್ 150 ಆಕರ್ಷಣೆಯನ್ನು ಪಡೆದುಕೊಂಡಿದೆ. ಈ ಬೈಕ್‌ಗೆ ನೇರ ಪ್ರತಿಸ್ಪರ್ಧಿಯಾಗಿರುವ ಟಿವಿಎಸ್ ಅಪಾಚೆ RTR 160 ಬೈಕ್ ಅನ್ನು ಹೋಲಿಕೆ ಮಾಡಿದ್ದೇವೆ. ಯಾವುದು ಬೆಸ್ಟ್ ನೋಡೋಣ.

ಬೆಲೆ: 

ಹೊಸ ಬಜಾಜ್ ಪಲ್ಸರ್ 150 ಮೋಟಾರ್‌ಸೈಕಲ್‌, ಕೈಗೆಟುಕುವ ದರದಲ್ಲಿ ಗ್ರಾಹಕರ ಲಭ್ಯವಿದೆ. ರೂ.1.08 ಲಕ್ಷದಿಂದ ರೂ.1.15 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಎಸ್‌ಡಿ (ಸಿಂಗಲ್ ಡಿಸ್ಕ್), ಎಸ್‌ಡಿ ಯುಜಿ (ಸಿಂಗಲ್ ಡಿಸ್ಕ್ ಅಪ್‌ಗ್ರೇಡ್‌) ಮತ್ತು ಟಿಡಿ ಯುಜಿ (ಟ್ವಿನ್ ಡಿಸ್ಕ್ ಅಪ್‌ಗ್ರೇಡ್‌) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಕೂಡ ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂ. 1,09,036 (ಎಕ್ಸ್-ಶೋರೂಂ) ರಿಂದ ರೂ. 1,26,747 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಅಪಾಚೆ ಆರ್‌ಟಿಆರ್ 160 ಆರ್‌ಎಂ ಡ್ರಮ್, ಅಪಾಚೆ ಆರ್‌ಟಿಆರ್ 160 ಆರ್‌ಎಂ ಡಿಸ್ಕ್, ಅಪಾಚೆ ಆರ್‌ಟಿಆರ್ 160 ಆರ್‌ಎಂ ಡಿಸ್ಕ್ ಬ್ಲೂಟೂತ್, ಅಪಾಚೆ ಆರ್‌ಟಿಆರ್ 160 ರೇಸಿಂಗ್ ಎಡಿಷನ್, ಅಪಾಚೆ ಆರ್‌ಟಿಆರ್ 160 ಡ್ಯುಯಲ್ ಚಾನೆಲ್ ಎಬಿಎಸ್ ಆಯ್ಕೆಗಳಲ್ಲಿ ಲಭ್ಯವಿದೆ.

ಡಿಸೈನ್: 

ಹೊಸ ಬಜಾಜ್ ಪಲ್ಸರ್ 150 ಮೋಟಾರ್‌ಸೈಕಲ್‌ ಹೊಸ ಗ್ರಾಫಿಕ್ಸ್ ಒಳಗೊಂಡಿದೆ. ಆಕರ್ಷಕ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳು ಹಾಗೂ ಎಲ್‌ಇಡಿ ಟೈಲ್ ಲ್ಯಾಂಪ್‌ನ್ನು ಹೊಂದಿದೆ. 17-ಇಂಚಿನ ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ. ಸ್ಪಾರ್ಕ್ಲಿ ಬ್ಲ್ಯಾಕ್ ರೆಡ್, ಸ್ಪಾರ್ಕ್ಲಿ ಬ್ಲ್ಯಾಕ್ ಬ್ಲೂ ಹಾಗೂ ಸ್ಪಾರ್ಕ್ಲಿ ಬ್ಲ್ಯಾಕ್ ಸಿಲ್ವರ್ ಎಂಬ 3 ಅತ್ಯುತ್ತಮವಾದ ಬಣ್ಣಗಳೊಂದಿಗೂ ಸಿಗುತ್ತದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 LED ಹೆಡ್‌ಲೈಟ್ ಮತ್ತು ಟೈಲ್‌ಲೈಟ್ ಅನ್ನು ಪಡೆದಿದೆ. ಆದರೆ ಟರ್ನ್ ಇಂಡಿಕೇಟರ್‌ಗಳು ಹ್ಯಾಲೊಜೆನ್ ಆಗಿವೆ. ಈ ಬೈಕ್ 17-ಇಂಚಿನ ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ. ಟಿವಿಎಸ್ ಅಪಾಚೆ ಆರ್‌ಟಿಆರ್ 160 ಸ್ಟ್ರೀಟ್ ಬೈಕ್, 7 ವೇರಿಯೆಂಟ್‌ಗಳಲ್ಲಿ ಮತ್ತು 8 ಬಣ್ಣಗಳಲ್ಲಿ ಲಭ್ಯವಿದೆ.

ಎಂಜಿನ್: ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕ್ 159.7 ಸಿಸಿ ಸಿಂಗಲ್ ಸಿಲೆಂಡರ್, ಬಿಎಸ್ 6 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಇದು 15.82 ಬಿಎಚ್ ಪವರ್ ಮತ್ತು 13.85 ಎನ್‌ಎಂ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ. ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಡಿಸ್ಕ್/ಡ್ರಮ್ ಬ್ರೇಕ್‌ಗಳೊಂದಿಗೆ ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್‌ ಹೊಂದಿದೆ. 137 ಕೆಜಿ ತೂಗುತ್ತದೆ ಮತ್ತು 12 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

bajaj-pulsar-150-vs-tvs-apache-rtr-160-price-specs-features-comparison

ಹೊಸ ಬಜಾಜ್ ಪಲ್ಸರ್ 150 ಮೋಟಾರ್‌ಸೈಕಲ್‌ 149.5-ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೋಲ್ಡ್ ಬಿಎಸ್ 6 ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 13.8 ಪಿಎಸ್ ಪವರ್ ಮತ್ತು 13.25 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 15 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. ಸಿಂಗಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡಿಸ್ಕ್/ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಈ ವಿಭಾದಲ್ಲಿ ನಿಮಗೆ ಸಿಗುವ ಇನ್ನೂ ಹಲವು ಆಯ್ಕೆಗಳೆಂದರೆ ಹೋಂಡಾ ಯುನಿಕಾರ್ನ್, ಹೀರೋ ಎಕ್ಸ್‌ಟ್ರೀಮ್ 160ಆರ್, ಹೋಂಡಾ ಎಸ್‌ಪಿ160, ಸುಜುಕಿ ಜಿಕ್ಸರ್ ಹಾಗೂ ಯಮಹಾ ಎಕ್ಸ್ಎಸ್ಆರ್ 155 ಮೋಟಾರ್‌ಸೈಕಲ್‌ಗಳಾಗಿವೆ. ಆದರೆ 150 ಸಿಸಿ ಸೆಗ್ಮೆಂಟಿನಲ್ಲಿ ಮೊದಲಿನಿಂದಲೂ ಈ ಎರಡೂ ಬೈಕ್‌ಗಳದ್ದೇ ಹೆಚ್ಚು ಪೈಪೋಟಿ ಇರುತ್ತದೆ. ಈ ಬೈಕ್‌ಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Previous Post Next Post