ಹೊಸ ವರ್ಷದ ಧಮಾಕಾ: ಜಿಯೋ ಹ್ಯಾಪಿ ನ್ಯೂ ಇಯರ್ 2026 ಪ್ಲಾನ್ ಔಟ್‌

ಜಿಯೋದಿಂದ (Jio) ಜಿಯೋ ಹ್ಯಾಪಿ ನ್ಯೂ ಇಯರ್ 2026 (Jio Happy New year) ಪ್ಲಾನ್ ಘೋಷಣೆ ಮಾಡಲಾಗಿದೆ. ಇದರ ಮೂಲಕ ಜಿಯೋ ಸಿಮ್ ಬಳಸುವ ಗ್ರಾಹಕರಿಗೆ ಈ ಹಿಂದೆಂದೂ ದೊರೆಯದಂಥ ಬೆನಿಫಿಟ್ ಗಳು ಸಿಗುತ್ತವೆ.

ಹೀರೋ ಆ್ಯನುಯಲ್ ರೀಚಾರ್ಜ್ 3599:

ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಅನ್ ಲಿಮಿಟೆಡ್ 5ಜಿ, ದಿನಕ್ಕೆ 2.5 ಜಿಬಿ ಡೇಟಾ ದೊರೆಯುತ್ತದೆ. ಇದರ ಜೊತೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್‌ಗಳು ದೊರೆಯುತ್ತವೆ ಮತ್ತು ಪ್ರತಿ ದಿನ 100 ಎಸ್ಸೆಮ್ಮೆಸ್ ಉಚಿತವಾಗಿ ಸಿಗುತ್ತದೆ. ಈ ಪ್ಲಾನ್ ವ್ಯಾಲಿಡಿಟಿ 365 ದಿನ ಇರುತ್ತದೆ. ಈ ಪ್ಲಾನ್‌ನಲ್ಲಿ ವಿಶೇಷ ಆಫರ್ ಸಹ ಒಂದು ಒಳಗೊಂಡಿದೆ. 18 ತಿಂಗಳ ಉಚಿತ ಪ್ರೊ ಪ್ಲಾನ್ ‘ಗೂಗಲ್ ಜೆಮಿನಿ ಸಿಗುತ್ತದೆ. ಇದರ ಮೌಲ್ಯ 35,100 ರೂ. ಆಗಿದೆ. ಆದರೆ ಇದು ಉಚಿತವಾಗಿಯೇ ಒಂದೂವರೆ ವರ್ಷದ ಅವಧಿಗೆ ಜಿಯೋ ಸಿಮ್ ಬಳಕೆ ಮಾಡುವ ಗ್ರಾಹಕರಿಗೆ ಸಿಗುತ್ತದೆ.

ಸೂಪರ್ ಸೆಲೆಬ್ರೇಷನ್ ಮಂಥ್ಲಿ ಪ್ಲಾನ್ 500:

ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಅನ್ ಲಿಮಿಟೆಡ್ 5ಜಿ, ದಿನಕ್ಕೆ 2 ಜಿಬಿ ಡೇಟಾ ದೊರೆಯುತ್ತದೆ. ಅನ್ ಲಿಮಿಟೆಡ್ ವಾಯ್ಸ್ ಕಾಲ್ ಗಳು ದೊರೆಯುತ್ತವೆ ಮತ್ತು ಪ್ರತಿ ದಿನ 100 ಎಸ್ಸೆಮ್ಮೆಸ್ ಉಚಿತವಾಗಿ ಸಿಗುತ್ತದೆ. 500 ರೂಪಾಯಿ ಮೌಲ್ಯ ಒಟಿಟಿ ಅಪ್ಲಿಕೇಷನ್ ಗಳು ದೊರೆಯುತ್ತದೆ. ಅದರಲ್ಲಿ ಯೂಟ್ಯೂಬ್ ಪ್ರೀಮಿಯಂ, ಜಿಯೋಹಾಟ್ ಸ್ಟಾರ್, ಅಮೆಜಾನ್ ಪಿವಿಎಂಇ, ಸೋನಿ ಲಿವ್, ಝೀ 5, ಲಯನ್ಸ್ ಗೇಟ್ ಪ್ಲೇ, ಡಿಸ್ಕವರಿ+, ಸನ್ NXT, ಕಂಚ ಲಂಕ, ಪ್ಲಾನೆಟ್ ಮರಾಠಿ, ಚೌಪಾಲ್, ಫ್ಯಾನ್ ಕೋಡ್ ಮತ್ತು ಹೊಯ್ ಚೊಯ್ ಈ ಆಪ್ ಗಳು ಉಚಿತವಾಗಿ ಬಳಕೆ ಮಾಡಬಹುದು. ಪ್ಲಾನ್ ವ್ಯಾಲಿಡಿಟಿ 28 ದಿನಗಳಿಗೆ ಇರುತ್ತದೆ. ಇದರೊಂದಿಗೆ 18 ತಿಂಗಳ ಉಚಿತ ಪ್ರೊ ಪ್ಲಾನ್ ‘ಗೂಗಲ್ ಜೆಮಿನಿ ಸಿಗುತ್ತದೆ. ಇದರ ಮೌಲ್ಯ 35,100 ರೂ. ಆಗಿದೆ. ಇದನ್ನೂ ಓದಿ: ಭಾರತಕ್ಕೆ ಬಂತು ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ – ತಿಂಗಳಿಗೆ 8,600 ರೂ. ಪ್ಯಾಕ್‌ ಬಿಡುಗಡೆ

ಫ್ಲೆಕ್ಸಿ ಪ್ಯಾಕ್ 103:

5 ಜಿಬಿ ಡೇಟಾ ದೊರೆಯುತ್ತದೆ. ಇನ್ನು ಇಲ್ಲಿನ ಮೂರು ಮನರಂಜನೆ ಪ್ಯಾಕ್ ಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಹಿಂದಿ ಪ್ಯಾಕ್- ಜಿಯೋ ಹಾಟ್ ಸ್ಟಾರ್, ಸೋನಿ ಲಿವ್, ಝೀ 5. ಇಂಟರ್ ನ್ಯಾಷನಲ್ ಪ್ಯಾಕ್- ಜಿಯೋ ಹಾಟ್ ಸ್ಟಾರ್, ಫ್ಯಾನ್ ಕೋಡ್, ಲಯನ್ಸ್ ಗೇಟ್, ಡಿಸ್ಕವರಿ+. ರೀಜನಲ್ ಪ್ಯಾಕ್- ಜಿಯೋ ಹಾಟ್ ಸ್ಟಾರ್, ಸನ್ NXT, ಕಂಚ ಲಂಕ, ಹೊಯ್ ಚೊಯ್. ಇನ್ನು ಪ್ಲಾನ್ ವ್ಯಾಲಿಡಿಟಿ 28 ದಿನಗಳಿಗೆ ಇರುತ್ತದೆ.

ಭಾರತದ ಅತಿ ದೊಡ್ಡ ಗ್ರಾಹಕ ನೆಲೆಯನ್ನು ಹೊಂದಿರುವ ಜಿಯೋದಿಂದ ಹೊಸ ವರ್ಷದ ಕೊಡುಗೆಯಾಗಿ ನೀಡಿರುವ ಈ ಪ್ಲಾನ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವುದಕ್ಕೆ ಜಿಯೋ ವೆಬ್ ಸೈಟ್‌ಗೆ ಭೇಟಿ ನೀಡಬಹುದು.



Previous Post Next Post