ದ್ವಿ ಚಕ್ರವಾಹನ ಖರೀದಿಗೆ ಶೇ. 90 ರಷ್ಟು ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

Two wheelers purchase subsidy : 2025-26ನೇ ಸಾಲಿನ ಪ್ರಧಾನಮಂತ್ರಿ ಮತ್ಯ್ಸ ಸಂಪದ ಯೋಜನೆಯಡಿ ಧರ್ತಿ ಅಭಾ ಜನ ಜಾತಿಯ ಗ್ರಾಮ ಉತ್ಕರ್ಷ ಅಭಿಯಾನವನ್ನು ಜಾರಿಗೊಳಿಸಲು ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಧರ್ತಿ ಅಭಾ ಜನ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನವನ್ನು ಜಾರಿಗೊಳಿಸುವ ಯೋಜನೆಯನ್ನು ಬುಡಕಟ್ಟು ಸಮುದಾಯ, ಪರಿಶಿ ಷ್ಟ ಪಂಗಡ ಫಲಾನುಭವಿಗಳಿಗೆ ಘಟಕೆ ವೆಚ್ಚದ ಶೇ. 90 ರಷ್ಟು ಸಹಾಯಧನ ನೀಡಲು ಅವಕಾಶವಿದೆ.

ಪರಿಶಿಷ್ಟ ಪಂಗಡದವರಿಗೆ ಮೀನು ಮಾರಾಟಕ್ಕಾಗಿ ಐಸಿ ಬಾಕ್ಸ್ನೊಂದಿಗೆ ದ್ವಿಚಕ್ರ ವಾಹನ, ಐಸಿ ಬಾಕ್ಸ್ ನೊಂದಿಗೆ ತ್ರಿಚಕ್ರ ವಾಹನ ಹಾಗೂ ಜೀವಂತ ಮೀನು ಮಾರಾಟ ಕೇಂದ್ರಗಳನ್ನು ಸ್ಥಾಪಿಸಲು ಸಹಾಯಧನ (ಸಬ್ಸಿಡಿ) ನೀಡಲಾಗುವುದು. ಈ ಯೋಜನೆ ಆಯ್ತ ಗ್ರಾಮಗಳಿಗೆ ಮೀಸಲಾಗಿದ್ದು, ಯಾದಗಿರಿ ತಾಲೂಕಿನ ಅರಿಕೇರಾ ಬಿ ಗ್ರಾಮ ಪಂಚಾಯತ್ ನಲ್ಲಿ ಬರುವ ಬಸಂತಪೂರ ಗ್ರಾಮ ಪಂಚಾಯತ್ ನಲ್ಲಿ ಬರುವ ಬಸಂತಪುರ ಗ್ರಾಮದ ಅರ್ಹ ಮೀನುಗಾರ ಫಲಾನುಭವಿಗಳು ಡಿಸೆಂಬರ್ 22 ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಯಾದಗಿರಿ ಇಲ್ಲಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Two wheelers purchase subsidy : ರಾಯಚೂರು ಜಿಲ್ಲೆಯಿಂದಲೂ ಅರ್ಜಿ ಆಹ್ವಾನ

ರಾಯಚೂರು ಜಿಲ್ಲೆಯ ಸಿಂದನೂರು ಹಾಗೂ ಮಸ್ಕಿ ಮೀನುಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಧರ್ತಿ ಅಭಾ ಜನ ಜಾತಿಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ತಾಜಾ ಮೀನು ಮಾರಾಟ ಮಾಡಲು ಜಿಲ್ಲೆಗೆ ನಿಗದಿಯಾದ ಗುರಿಗಳಾದ ದ್ವಿಚಕ್ರ ವಾಹನ 23, ತ್ರಿಚಕ್ರ ವಾಹನ – 4 ಹಾಗೂ ನೇರ ಮೂನು ಮಾರಾಟ 2 ಘಟಕಗಳನ್ನು ಅನು ಷ್ಠಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.

ಸಿಂಧನೂರು ತಾಲೂಕಿನ ಮೀರಾಪುರ, ಕರಡಚಿಲಮಿ, ಯಾಪಲಪರ್ವಿ, ರಾಗಲಪರ್ವಿ, ಪುಲದಿನ್ನಿ, ಧುಮತಿ, ಹುಲಗುಂಚಿ, ಚಿಂತಮಾನದೊಡ್ಡಿ, ಯದ್ದಲದೊಡ್ಡಿ ಹಾಗೂ ಮಸ್ಕಿ ತಾಲೂಕಿನ ರತ್ನಾಪೂರ, ಗುಂಡ, ಹೊಕ್ರಾಣಿ, ಹೊರಗನಾಳ, ಗುಡಿಹಾಳ, ಬಪ್ರೂರು, ಮಾಟೂರು, ಚಿಕ್ಕಕಡಬೂದು, ಕ್ಯಾಶ್ನಟ್ಟಿ, ಉದ್ಬಾಳ, ದೀನಸಮುದ್ರ, ಪರಾಪೂರು, ನಂಜಲದಿನ್ನಿ, ತಂಪನಾಳ, ಗುಡಗಲದಿನ್ನಿ, ಹಂಚಿನಾಳ ಯು ಕಣ್ಣೂರು, ಹುಲ್ಲೂರು, ರಂಗಾಪೂರು, ಮುದ್ದಾಪುರ, ಕೊಳಬಾಳ, ಗೌಡನಬಾವಿ, ಬೆಳ್ಳಿಗನುರು, ಸುಲ್ತಾನಪುರ, ಮಹಾಂಪೂರು, ಗದ್ದಟಗಿ, ಬೋಗಾಪೂರ, ಬುದ್ನಿನ್ನಿ, ಅಮರಾಪುರ, ಗ್ರಾಮಗಲ ಆಸಕ್ತ ಅರ್ಜಿದಾರರು ಡಿಸೆಂಬರ್ 24 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ವಿವರಗಳನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕರು, ಸಿಂದನೂರು ಅವರ ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಾನಗರಪಾಲಿಕೆ: ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಮಹಾನಗರಪಾಲಿಕೆಯ 2025-26ನೇ ಸಾಲಿನಲ್ಲಿ ಎಸ್.ಎಫ್.ಸಿ. (ಮುಕ್ತ ನಿಧಿ) ಜಿಲ್ಲಾಧಿಕಾರಿಗಳಿಂದ ಅನುಮೋದನೆಗೊಂಡಿರುವ ಶೇ. 7.25 ಮತ್ತು ಶೇ. 5ರ ಯೋಜನೆಯ ಕ್ರೀಯಾ ಯೋಜನೆಗಳಡಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗ ಹಾಗೂ ವಿಕಲಚೇತನರ ಕಲ್ಯಾಣ ಕಾರ್ಯಕ್ರಮ ಯೋಜನೆಗಳಡಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತರು (ಆಡಳಿತ) ಅವರು ತಿಳಿಸಿದ್ದಾರೆ.

2025-26ನೇ ಸಾಲಿನ ಮಹಾನಗರಪಾಲಿಕೆಯ ಶೇ. 7.25 ಉನ್ನತ ವಾಸ್ಯಂಗಕ್ಕಾಗಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಪಿ.ಹೆಚ್.ಡಿ /ಪೋಸ್ಟ್ ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಮಾತ್ರ 30,000 ರೂ ಮೀರದಂತೆ (11 ವಿದ್ಯಾರ್ಥಿಗಳಿಗೆ) ಮಾತ್ರ ಸಹಾಯಧನ ನೀಡಲಾಗುತ್ತದೆ ಎಂದರು.

ಅರ್ಹತೆಗಳು:-

ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗ ವಿದ್ಯಾರ್ಥಿಗಳಿಗೆ ಮಾತ್ರ, ವಾರ್ಷಿಕ ಆಧಾಯ 2.50 ಲಕ್ಷ ಮೀರಿರಬಾರದು, ಆಧಾರ ಕಾರ್ಡ , ಪಡಿತರ ಚೀಟಿ, ಚುನಾವಣಾ ಗುರಿತಿನ ಚೀಟಿ ಕಡ್ಡಾಯವಾಗಿ ಲಗತ್ತಿಸಿರಬೇಕು ಮತ್ತು ಕಲಬುರಗಿ ನಗರ ನಿವಾಸಿಯಾಗಿರಬೇಕು.

ಅರ್ಜಿ ನಮೂನೆಯನ್ನು ನೀಡುವ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಮಹಾನಗರಪಾಲಿಕೆಯ ಆವಕ ಶಾಖೆಯಿಂದ ಕಚೇರಿ ವೇಳೆಯಲ್ಲಿ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ 2026ರ ನವೆಂಬರ್ 22ರ ಸಂಜೆ 5.30 ಗಂಟೆಯೊಳಗಾಗಿ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ದೃಢೀಕರಣದೊಂದಿಗೆ ಕಲಬುರಗಿ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಸಲ್ಲಿಸಬೇಕು.

ಅರ್ಹತೆ, ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ಶೇ 7.25 ಹಾಗೂ ಶೇ 5 ಶಾಖೆಯನ್ನು ಹಾಗೂ ಪಾಲಿಕೆಯ

http://www.kalaburagicity.mrc.gov

ವೆಬ್ಸೈಟ್ನಲ್ಲಿ ಸಂಪರ್ಕಿಸಲು ಕಲಬುರಗಿ ಮಹಾನಗರ ಪಾಲಿಕೆ ಉಪ ಆಯುಕ್ತರು (ಆಡಳಿತ) ಕಲಬುರಗಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Previous Post Next Post