Sprayer Subsidy-ಹೈ ಪ್ರೆಶರ್ ಪವರ್ ಸ್ಪ್ರೇಯರ್ ಸಹಾಯಧನದಲ್ಲಿ ಪಡೆಯಲು ಅರ್ಜಿ ಆಹ್ವಾನ

ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ದೊಡ್ಡ ಮಟ್ಟದ ಪ್ರದೇಶಗಳಿಗೆ ಸಿಂಪರಣೆಯನ್ನು ಮಾಡಲು ಇಲಾಖೆಯಿಂದ ಸಹಾಯಧನದಲ್ಲಿ ಹೈ ಪ್ರೆಶರ್ ಪವರ್ ಸ್ಪ್ರೇಯರ್ ಅನ್ನು(High Pressure Power Sprayer) ಸಹಾಯಧನದಲ್ಲಿ ಪಡೆಯಲು ರೈತರಿಗೆ ಅವಕಾಶವಿದ್ದು ಇಂದಿನ ಅಂಕಣದಲ್ಲಿ ಇದರ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಪ್ರಕಟಿಸಲಾಗಿದೆ.

ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಹಾಯಧನದಲ್ಲಿ ಹೈ ಪ್ರೆಶರ್ ಪವರ್ ಸ್ಪ್ರೇಯರ್ ಅನ್ನು(High Pressure Power Sprayer Subsidy) ಸಹಾಯಧನದಲ್ಲಿ ಪಡೆಯಬಹುದು ಈ ಹೈ ಪ್ರೆಶರ್ ಪವರ್ ಸ್ಪ್ರೇಯರ್ ಅನ್ನು ಬಳಕೆ ಮಾಡಿಕೊಂಡು ರಾಸಾಯನಿಕ ಸಿಂಪರಣೆಯ ಜೊತೆಗೆ ಕೊಟ್ಟಿಗೆಯನ್ನು ಕ್ಲೀನ್ ಮಾಡಬಹುದು ವಾಹನ/ಟ್ರಾಕ್ಟ್ರ‍ರ್ ತೊಳೆಯಬಹುದು ಹೀಗೆ ಅನೇಕ ವಿವಿಧ ಕೃಷಿ ಪೂರಕ ಚಟುವಟಿಕೆಗೆ ಈ ಯಂತ್ರ ಸಹಕಾರಿಯಾಗಿದೆ.

ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ರೋಗ ಮತ್ತು ಕೀಟ ನಿಯಂತ್ರಣ ಮಾಡಲು ಕಾಲ ಕಾಲಕ್ಕೆ ಸಮರ್ಪಕವಾಗಿ ಮತ್ತು ದೊಡ್ಡ ಮಟ್ಟದ ಜಮೀನನ್ನು ಕಡಿಮೆ ಸಮಯದಲ್ಲಿ ಸಿಂಪರಣೆಯನ್ನು(High Pressure Power Sprayer Subsidy Application)ಮಾಡಲು ಹೈ ಪ್ರೆಶರ್ ಪವರ್ ಸ್ಪ್ರೇಯರ್ ಒಂದು ಉತ್ತಮ ಉಪಕರಣವಾಗಿದ್ದು ಸಣ್ಣ ಮತ್ತು ಅತೀ ಸಣ್ಣ ರೈತರು ಇಲಾಖೆಯಿಂದ ಸಹಾಯಧನದಲ್ಲಿ ಹೈ ಪ್ರೆಶರ್ ಪವರ್ ಸ್ಪ್ರೇಯರ್ ಪಡೆಯಲು ಅವಕಾಶವಿರುತ್ತದೆ.

ಹೈ ಪ್ರೆಶರ್ ಪವರ್ ಸ್ಪ್ರೇಯರ್ ಅನ್ನು ಸಬ್ಸಿಡಿಯಲ್ಲಿ ಪಡೆಯಲು ರೈತರು(High Pressure Power Sprayer Subsidy Scheme) ಅನುಸರಿಸಬೇಕಾದ ಕ್ರಮಗಳೇನು? ಇದಕ್ಕಾಗಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು? ಇದರ ವಿವರ ಈ ಕೆಳಗಿನಂತಿವೆ.

High Pressure Power Sprayer Subsidy Amount-ಹೈ ಪ್ರೆಶರ್ ಪವರ್ ಸ್ಪ್ರೇಯರ್ ಸಬ್ಸಿಡಿ ಮೊತ್ತ ಎಷ್ಟು?

ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ಕೃಷಿ ಯಾಂತ್ರೀಕರಣ ಯೋಜನೆ ಅಡಿಯಲ್ಲಿ ವಿತರಣೆ ಮಾಡುವ ಹೈ ಪ್ರೆಶರ್ ಪವರ್ ಸ್ಪ್ರೇಯರ್ ಯಂತ್ರಕ್ಕೆ(HTP Sprayer with Green King Engine)ನಿಗದಿಪಡಿಸಿರುವ ರೈತರು ಯಂತ್ರ ಖರೀದಿ ಮಾಡಲು ಪಾವತಿ ಮಾಡಬೇಕಾದ ಮೊತ್ತ(Farmer Share) ಮತ್ತು ಸಹಾಯಧನ ಮೊತ್ತದ(Subsidy Amount) ವಿವರ ಹೀಗಿದೆ:

ಗಮನಿಸಿ:

1) ಕಂಪನಿ ಮತ್ತು ಮಾಡೆಲ್ ವಾರು ಹೈ ಪ್ರೆಶರ್ ಪವರ್ ಪವರ್ ಸ್ಪ್ರೇಯರ್ ಉಪಕರಣದ ಸಬ್ಸಿಡಿ ಮತ್ತು ಪೂರ್ಣ ದರದಲ್ಲಿ ವ್ಯತ್ಯಾಸವಿರುತ್ತದೆ.

2) ಆಯಾ ಜಿಲ್ಲೆಯ ಕೃಷಿ ಇಲಾಖೆಯ ಅನುದಾನ ಲಭ್ಯತೆಯ ಆಧಾರದ ಮೇಲೆ ಕೃಷಿ ಉಪಕರಣಗಳಿಗೆ ಸಹಾಯಧನವನ್ನು ನೀಡಲಾಗುತ್ತದೆ.

How To Apply For High Pressure Power Sprayer Subsidy-ಹೈ ಪ್ರೆಶರ್ ಪವರ್ ಸ್ಪ್ರೇಯರ್ ಗೆ ಸಬ್ಸಿಡಿ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಹೈ ಪ್ರೆಶರ್ ಪವರ್ ಸ್ಪ್ರೇಯರ್ ಅನ್ನು ಸಹಾಯಧನದಲ್ಲಿ ಪಡೆಯಲು ಆಸಕ್ತಿಯನ್ನು ಹೊಂದಿರುವ ರೈತರು ಅರ್ಜಿ ಸಲ್ಲಿಸಲು ಬೇಕಾಗುವ ಅವಶ್ಯಕ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಕೃಷಿ ಇಲಾಖೆಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ನಮೂನೆಯನ್ನು ಪಡೆದು ಅರ್ಜಿ ಹಾಕಬಹುದು ಅಥವಾ ಈ ಲೇಖನದಲ್ಲಿ ತಿಳಿಸಿರುವ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕವು ಸಹ ಅರ್ಜಿ ಸಲ್ಲಿಸಬಹುದು.

Required Documents For Application-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಪವರ್ ಸ್ಪ್ರೇಯರ್ ಪವರ್ ಸ್ಪ್ರೇಯರ್ ಉಪಕರಣವನ್ನು ಸಹಾಯಧನದಲ್ಲಿ ಪಡೆಯಲು ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳ ವಿವರ ಹೀಗಿದೆ:

High Pressure Power Sprayer Online Application-ಪವರ್ ಸ್ಪ್ರೇಯರ್ ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಮೇವು ಕತ್ತರಿಸುವ ಯಂತ್ರವನ್ನು ಸಬ್ಸಿಡಿಯಲ್ಲಿ ಖರೀದಿ ಮಾಡಲು ಆಸಕ್ತಿಯನ್ನು ಹೊಂದಿರುವ ರೈತರು ಕೃಷಿ ಇಲಾಖೆ ಅಧಿಕೃತ ಕೆ-ಕಿಸಾನ್ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬಹುದು.

Step-1: ಮೊದಲಿಗೆ ಈ ಲಿಂಕ್ "High Pressure Power Sprayer Online Application" ಕ್ಲಿಕ್ ಮಾಡಿ ಕೆ-ಕಿಸಾನ್ ವೆಬ್ಸೈಟ್ ಅನ್ನು ಭೇಟಿ ಮಾಡಿ.

Step-2: ತದನಂತರ ಈ ಪೇಜ್ ನಲ್ಲಿ "Farm Mechanisation Application Registration/ಕೃಷಿ ಯಾಂತ್ರೀಕರಣ ಅರ್ಜಿ ನೋಂದಣಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ FID ನಂಬರ್ ಅನ್ನು ನಮೂದಿಸಿ "Get Details" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಬಳಿಕ "Get Details" ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

High Pressure Power Sprayer Benefits-ಕೃಷಿಯಲ್ಲಿ ರೈತರು ಹೈ ಪ್ರೆಶರ್ ಪವರ್ ಸ್ಪ್ರೇಯರ್ ಬಳಕೆಯಿಂದಾಗುವ ಪ್ರಯೋಜನಗಳು:

ಹೈ ಪ್ರೆಶರ್ ಪವರ್ ಸ್ಪ್ರೇಯರ್ (High Pressure Power Sprayer) ಬಳಕೆಯ ಪ್ರಯೋಜನಗಳು ಕೃಷಿಯಲ್ಲಿ ಅತ್ಯಂತ ಪ್ರಮುಖವಾಗಿವೆ. ಇದು ರೈತರಿಗೆ ಸಮಯ, ಶ್ರಮ ಮತ್ತು ಸಂಪನ್ಮೂಲಗಳನ್ನು ಉಳಿಸುವಲ್ಲಿ ಸಹಾಯ ಮಾಡುತ್ತದೆ. ಇದರ ಮುಖ್ಯ ಪ್ರಯೋಜನಗಳನ್ನು ಕೆಳಗೆ ವಿವರಿಸಲಾಗಿದೆ:

ತ್ವರಿತ ಮತ್ತು ಸಮಾನವಾದ ಔಷಧ ಚೆಲ್ಲುವಿಕೆ: ದೊಡ್ಡ ಪ್ರದೇಶವನ್ನು ಕಡಿಮೆ ಸಮಯದಲ್ಲಿ ಮುಚ್ಚಬಹುದು. ಉದಾಹರಣೆಗೆ: 1 ಎಕರೆಗೆ 15-20 ನಿಮಿಷಗಳಲ್ಲಿ ಸ್ಪ್ರೇ ಮಾಡಬಹುದು. ರೈತರ ಶ್ರಮ ಕಡಿಮೆ – ದಿನಕ್ಕೆ ಹೆಚ್ಚು ಜಮೀನು ಸ್ಪ್ರೇ ಮಾಡಬಹುದು.

ಕಡಿಮೆ ನೀರು ಮತ್ತು ಔಷಧ ಬಳಕೆ: ಸಾಮಾನ್ಯ ಸ್ಪ್ರೇಯರ್‌ಗಿಂತ 30-50% ಕಡಿಮೆ ನೀರು ಬೇಕು, ಔಷಧವು ಚೆಲ್ಲದೆ ಉಳಿಯದೇ, ಸಂಪೂರ್ಣ ಬಳಕೆಯಾಗುವುದರಿಂದ ಔಷಧ ಉಳಿತಾಯ, ಪರಿಸರ ಮಾಲಿನ್ಯ ಕಡಿಮೆ.

ಹೆಚ್ಚಿನ ಕಾರ್ಯಕ್ಷಮತೆ ಮತ್ತು ಸಮಯ ಉಳಿತಾಯ: ಹೆಚ್ಚಿನ ಒತ್ತಡದಿಂದ ಆಳವಾದ ತಲುಪುವಿಕೆ: ದಟ್ಟವಾದ ಸಸ್ಯಗಳು (ಅಡಿಕೆ, ತೆಂಗು, ದ್ರಾಕ್ಷಿ, ಕಬ್ಬು) ಒಳಗೆ ಔಷಧ ತಲುಪುತ್ತದೆ.

ಗಿಡದ ಮೇಲ್ಭಾಗದಿಂದ ಕೆಳಭಾಗದವರೆಗೂ ಸಂಪೂರ್ಣ ಕವರ್ ಅಗುತ್ತದೆ.

ರೈತರ ಆರೋಗ್ಯ ರಕ್ಷಣೆ: ದೂರದಿಂದ ಸ್ಪ್ರೇ ಮಾಡಬಹುದು – ಔಷಧದ ಸಂಪರ್ಕ ಕಡಿಮೆ.

 ಪ್ರಕಟ!

Previous Post Next Post