Government Scheme: ಬೇರೆ ಖಾಸಗಿ ಪೆನ್ಶನ್ ಪ್ಲಾನ್‌ಗಳ ಹಾಗೆ ಇದರಲ್ಲಿ ಶೇರು ಮಾರುಕಟ್ಟೆಯ ಯಾವುದೇ ರಿಸ್ಕ್ ಇರುವುದಿಲ್ಲ. ನಿಮ್ಮ ದುಡ್ಡಿಗೆ ಸರ್ಕಾರವೇ ಗ್ಯಾರಂಟಿ. ನಿವೃತ್ತಿಯ ನಂತರ ಪ್ರತಿ ತಿಂಗಳು ಒಂದು ಸ್ಥಿರವಾದ ಆದಾಯ ಬೇಕು ಅಂತ ಯೋಚನೆ ಮಾಡುವವರಿಗೆ ಇದೊಂದು ಸ್ಮಾರ್ಟ್ ದಾರಿ.
ನಿಮ್ಮ ಜೀವನದುದ್ದಕ್ಕೂ ಪ್ರತಿ ತಿಂಗಳು ₹20000 ಹಣ ಬರುತ್ತೆ, ಈ ಯೋಜನೆ ಬಗ್ಗೆ ನಿಮಗೆ ಗೊತ್ತಾ?
ಸಾರ್ವಜನಿಕ ಭವಿಷ್ಯ ನಿಧಿ (PPF) ಅಂದ್ರೆ ಬರೀ ದುಡ್ಡು ಉಳಿಸೋ ಸ್ಕೀಮ್ ಅಂದ್ಕೊಂಡ್ರಾ? ಖಂಡಿತ ಇಲ್ಲ. ಇದನ್ನೇ ಸರಿಯಾಗಿ ಪ್ಲಾನ್ ಮಾಡಿದರೆ, ಇದೊಂದು ಅದ್ಭುತ ಪಿಂಚಣಿ (Pension) ಯೋಜನೆಯಾಗಿ ಬದಲಾಗುತ್ತೆ. ಭಾರತ ಸರ್ಕಾರದ ಗ್ಯಾರಂಟಿ ಇರೋದ್ರಿಂದ, ನಿಮ್ಮ ದುಡ್ಡು ಸೇಫ್ ಆಗಿ ಬೆಳೆಯುತ್ತೆ. ಅಷ್ಟೇ ಅಲ್ಲ, ಇದರಿಂದ ಬರೋ ಆದಾಯ ಸಂಪೂರ್ಣವಾಗಿ ತೆರಿಗೆ-ಮುಕ್ತ (Tax-free). ಇದೇ ಕಾರಣಕ್ಕೆ ಇದು ಮಾರ್ಕೆಟ್‌ನಲ್ಲಿರೋ ಬೆಸ್ಟ್ ದೀರ್ಘಕಾಲೀನ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ.
ಪಿಪಿಎಫ್‌ಗೆ "ಟ್ರಿಪಲ್ E" ಸ್ಟೇಟಸ್ ಇದೆ. ಇದರ ಅರ್ಥ ಏನು? ಮೊದಲನೆಯದಾಗಿ, ನೀವು ಹೂಡಿಕೆ (Investment) ಮಾಡುವ ವಾರ್ಷಿಕ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಸಿಗುತ್ತೆ. ಎರಡನೆಯದಾಗಿ, ಅದರ ಮೇಲೆ ಬರುವ ಬಡ್ಡಿಗೆ (Interest) ಒಂದು ರೂಪಾಯಿ ತೆರಿಗೆ ಕಟ್ಟಬೇಕಾಗಿಲ್ಲ. ಮೂರನೆಯದಾಗಿ, 15 ವರ್ಷದ ನಂತರ ನೀವು ವಾಪಸ್ ಪಡೆಯುವ ಪೂರ್ತಿ ಮೊತ್ತಕ್ಕೂ (Maturity) ತೆರಿಗೆ ಇಲ್ಲ. ಇದಕ್ಕಿಂತ ದೊಡ್ಡ ವರದಾನ ಇನ್ನೇನು ಬೇಕು
ಬೇರೆ ಖಾಸಗಿ ಪೆನ್ಶನ್ ಪ್ಲಾನ್‌ಗಳ ಹಾಗೆ ಇದರಲ್ಲಿ ಶೇರು ಮಾರುಕಟ್ಟೆಯ ಯಾವುದೇ ರಿಸ್ಕ್ ಇರುವುದಿಲ್ಲ. ನಿಮ್ಮ ದುಡ್ಡಿಗೆ ಸರ್ಕಾರವೇ ಗ್ಯಾರಂಟಿ. ನಿವೃತ್ತಿಯ ನಂತರ ಪ್ರತಿ ತಿಂಗಳು ಒಂದು ಸ್ಥಿರವಾದ ಆದಾಯ ಬೇಕು ಅಂತ ಯೋಚನೆ ಮಾಡುವವರಿಗೆ ಇದೊಂದು ಸ್ಮಾರ್ಟ್ ದಾರಿ. ನಿಮ್ಮ ಉಳಿತಾಯವನ್ನೇ ಮಾಸಿಕ ಆದಾಯವಾಗಿ ಬದಲಾಯಿಸಬಹುದು.
ನೀವು ಪಿಪಿಎಫ್ ಖಾತೆ ತೆರೆದಾಗ, ಅದು 15 ವರ್ಷಗಳಿಗೆ ಲಾಕ್ ಆಗಿರುತ್ತದೆ. 15 ವರ್ಷ ಮುಗಿದ ನಂತರ, ನೀವು ಮತ್ತೆ 5-5 ವರ್ಷಗಳ ಬ್ಲಾಕ್‌ಗಳಲ್ಲಿ ಎಷ್ಟು ಸಲ ಬೇಕಾದರೂ ಖಾತೆಯನ್ನು ವಿಸ್ತರಿಸಬಹುದು. ಇಲ್ಲಿರೋ ಅಸಲಿ ಮ್ಯಾಜಿಕ್ ಏನಂದ್ರೆ, 15 ವರ್ಷದ ನಂತರ ನೀವು ಹೊಸದಾಗಿ ದುಡ್ಡು ಹಾಕದಿದ್ದರೂ ಪರವಾಗಿಲ್ಲ, ನಿಮ್ಮ ಖಾತೆಯಲ್ಲಿರುವ ಹಳೆ ಬ್ಯಾಲೆನ್ಸ್ ಮೇಲೆ ಬಡ್ಡಿ (ಪ್ರಸ್ತುತ 7.1%) ಬರ್ತಾನೇ ಇರುತ್ತೆ.
ಒಂದು ಸಣ್ಣ ಉದಾಹರಣೆ ನೋಡೋಣ. ನೀವು ಪ್ರತಿ ತಿಂಗಳು 5,000 ರೂಪಾಯಿ ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ ನೀವು ಒಟ್ಟು 9,00,000 ರೂ. ಕಟ್ಟಿರುತ್ತೀರಿ. ಆದರೆ ನಿಮ್ಮ ಖಾತೆಯಲ್ಲಿ ಬಡ್ಡಿ ಸೇರಿ 16,27,284 ರೂ. ಜಮಾ ಆಗಿರುತ್ತೆ. 15 ವರ್ಷದ ನಂತರ, ಈ 16.27 ಲಕ್ಷಕ್ಕೆ ಬರುವ ಬಡ್ಡಿಯೇ ನಿಮಗೆ ತಿಂಗಳಿಗೆ ಸುಮಾರು 9,628 ರೂ. ಪೆನ್ಶನ್ ರೂಪದಲ್ಲಿ ಸಿಗುತ್ತದೆ.
ಇದೇ ಲೆಕ್ಕದಲ್ಲಿ, ನೀವು ತಿಂಗಳಿಗೆ 10,000 ರೂ. ಹೂಡಿಕೆ ಮಾಡಿದರೆ, 15 ವರ್ಷಗಳ ನಂತರ ನಿಮ್ಮ ಹತ್ತಿರ 32,54,567 ರೂ. ಇರುತ್ತದೆ. ಆಗ ನಿಮಗೆ ತಿಂಗಳಿಗೆ ಸುಮಾರು 19,256 ರೂ. ಬಡ್ಡಿ (ಪೆನ್ಶನ್) ಸಿಗುತ್ತದೆ. ಒಂದು ವೇಳೆ ನೀವು ಗರಿಷ್ಠ ಮಿತಿ, ಅಂದರೆ ತಿಂಗಳಿಗೆ 12,500 ರೂ. (ವಾರ್ಷಿಕ 1.5 ಲಕ್ಷ) ಹೂಡಿಕೆ ಮಾಡಿದರೆ, ನಿಮ್ಮ ನಿಧಿ 40,68,209 ರೂ. ಆಗಿರುತ್ತದೆ. ಆಗ ನಿಮಗೆ ತಿಂಗಳಿಗೆ ಸುಮಾರು 24,070 ರೂ. ಪೆನ್ಶನ್ ಬರುತ್ತದೆ!
ಹೌದು, ನೀವು 15 ವರ್ಷಗಳ ಕಾಲ ಪ್ರತಿ ತಿಂಗಳು 12,500 ರೂ. ಕಟ್ಟಿದರೆ, ನಿಮ್ಮ ಖಾತೆಯಲ್ಲಿ 40.68 ಲಕ್ಷ ರೂ. ಜಮೆ ಆಗಿರುತ್ತದೆ. ನಿವೃತ್ತಿಯ ನಂತರ ನೀವು ಹೊಸದಾಗಿ ದುಡ್ಡು ಹಾಕುವುದನ್ನು ನಿಲ್ಲಿಸಿದರೂ, ಆ 40.68 ಲಕ್ಷಕ್ಕೆ ವಾರ್ಷಿಕ 2.88 ಲಕ್ಷದವರೆಗೆ ಬಡ್ಡಿ ಉತ್ಪತ್ತಿಯಾಗುತ್ತದೆ. ಅಂದರೆ, ಪ್ರತಿ ತಿಂಗಳು 24,000 ರೂ. ನಿಮಗೆ ಯಾವುದೇ ಅಪಾಯ-ಮುಕ್ತ ಪಿಂಚಣಿ ಸಿಕ್ಕಿದ ಹಾಗೆ. ಬೇಕಿದ್ದರೆ, ವರ್ಷಕ್ಕೊಮ್ಮೆ ಆ ಅಸಲು ದುಡ್ಡಿನಿಂದಲೂ ಸ್ವಲ್ಪ ವಾಪಸ್ ತೆಗೆಯುವ ಆಯ್ಕೆಯೂ ಇರುತ್ತದೆ.
ಯಾವುದೇ ಭಾರತೀಯ ನಾಗರಿಕರು ಹತ್ತಿರದ ಅಂಚೆ ಕಚೇರಿ (Post Office) ಶಾಖೆ ಅಥವಾ ಬ್ಯಾಂಕ್‌ನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಇದಕ್ಕಾಗಿ ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ: ಕೆವೈಸಿ ದಾಖಲೆಗಳು (ಆಧಾರ್ ಕಾರ್ಡ್, ವೋಟರ್ ಐಡಿ), ಪ್ಯಾನ್ ಕಾರ್ಡ್, ವಿಳಾಸದ ಪುರಾವೆ (Address Proof), ನಾಮಿನೇಷನ್ ಫಾರ್ಮ್, ಮತ್ತು ನಿಮ್ಮ ಪಾಸ್‌ಪೋರ್ಟ್ ಗಾತ್ರದ ಫೋಟೋ.