ಮಹಾತ್ಮ ಗಾಂಧಿ ಉದ್ಯೊಗ ಖಾತರಿ ಯೋಜನೆ(MGNREGA) ಅಡಿ ರಾಜ್ಯದ ರೈತರಿಗೆ ವಿವಿಧ ಕೃಷಿ, ತೋಟಗಾರಿಕೆ ಬೆಳೆಯನ್ನು ಬೆಳೆಯಲು ಮತ್ತು ಉಪಕಸುಬುಗಳನ್ನು ಪ್ರಾರಂಭಿಸಲು ಈ ಯೋಜನೆಯಡಿ ಲಕ್ಷದ ವರೆಗೆ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಥಾನ ಮಾಡಲು ಅವಕಾಶವಿದೆ ಎಂದು ನರೇಗಾ ಯೋಜನೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಣೆ ಹೊರಡಿಸಲಾಗಿದ್ದು, ಈ ಕುರಿತು ಅಗತ್ಯ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಪ್ರಕಟಿಸಲಾಗಿದೆ.
ರಾಜ್ಯದ್ಯಂತ ಅಕ್ಟೋಬರ್ 02 ರಿಂದ ನವೆಂಬರ್ 30 ರವರೆಗೆ ಗ್ರಾಮ ಪಂಚಾಯತಿ(Grama Panchayat)ಮಟ್ಟದಲ್ಲಿ ನಡೆಯುವ ಗ್ರಾಮ ಸಭೆಯಲ್ಲಿ ರೈತರು ಭೇಟಿ ಮಾಡಿ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಲು ರೈತರಿಗೆ ಸೂಚನೆ ನೀಡಲಾಗಿದೆ.
ರೈತರು ನರೇಗಾ ಯೋಜನೆ(Narega Scheme) ಅಡಿ ಯಾವೆಲ್ಲ ಚಟುವಟಿಕೆಯನ್ನು ಪ್ರಾರಂಭಿಸಬಹುದು? ಮತ್ತು ಇದಕ್ಕಾಗಿ ಎಷ್ಟು ಆರ್ಥಿಕ ನೆರವನ್ನು ನರೇಗಾ ಯೋಜನೆ ಅಡಿ ನೀಡಲಾಗುತ್ತದೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು ಯಾವುವು? ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.
Narega Scheme In Karnataka-5.0 ಲಕ್ಷದ ವರೆಗೆ ಆರ್ಥಿಕ ನೆರವು:
ಮಹಾತ್ಮ ಗಾಂಧಿ ಉದ್ಯೊಗ ಖಾತರಿ ಯೋಜನೆ ಅಡಿ ರಾಜ್ಯದ ಎಲ್ಲಾ ಜಿಲ್ಲೆಯ ರೈತರು 5.0 ಲಕ್ಷದ ವರೆಗೆ ವೈಯಕ್ತಿಕ ಕಾಮಗಾರಿಯನ್ನು ಅನುಷ್ಥಾನ ಮಾಡಲು ಈ ಯೋಜನೆ ಅಡಿ ಅವಕಾಶವಿರುತ್ತದೆ ಎಂದು ಯೋಜನೆ ಅಧಿಕೃತ ಟ್ವಿಟರ್/ಎಕ್ಸ್ ಖಾತೆಯಲ್ಲಿ ಪ್ರಕಟಿಸಲಾಗಿದೆ.
MGNREGA Applicant Eligibility-ನರೇಗಾ ಯೋಜನೆ ಅಡಿ ಸೌಲಭ್ಯ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಮಹಾತ್ಮ ಗಾಂಧಿ ಉದ್ಯೊಗ ಖಾತರಿ ಯೋಜನೆ ಅಡಿ ಆರ್ಥಿಕ ನೆರವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು.
ಅರ್ಜಿದಾರರು ಜಾಬ್ ಕಾರ್ಡ ಅನ್ನು ಹೊಂದಿರುವುದು ಕಡ್ಡಾಯ.
ಬಿಪಿಎಲ್ ರೇಶನ್ ಕಾರ್ಡ ಅನ್ನು ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು.
ಸಣ್ಣ ಮತ್ತು ಅತೀ ಸಣ್ಣ ರೈತರು ಅರ್ಜಿ ಸಲ್ಲಿಸಬಹುದು.
Narega Scheme Subsidy Amount-ನರೇಗಾ ಯೋಜನೆ ಅಡಿ ವೈಯಕ್ತಿಕ ಕಾಮಗಾರಿವಾರು ಸಹಾಯಧನದ ವಿವರ:
ಮಹಾತ್ಮ ಗಾಂಧಿ ಉದ್ಯೊಗ ಖಾತರಿ ಯೋಜನೆ ಅಡಿ ರೈತರು ವೈಯಕ್ತಿಕವಾಗಿ ಯಾವೆಲ್ಲ ಘಟಕ ಆರಂಭಿಸಲು ಸಹಾಯಧನವನ್ನು ಪಡೆಯಬಹುದು ಮತ್ತು ಆರ್ಥಿಕ ನೆರವಿನ ಮೊತ್ತದ ವಿವರ ಹೀಗಿದೆ:
ದನದ ಕೊಟ್ಟಿಗೆ- 57,000/-,ಕುರಿ/ಮೇಕೆ ಶೆಡ್- 70,000/-,ಬಚ್ಚಲು ಗುಂಡಿ- 11,000/-,ಕೋಳಿ ಶೆಡ್- 60,000/-,ಕೊಳವೆ ಬಾವಿ ಮರುಪೂರಕ ಘಟಕ- 45,000/-,ಎರೆಹುಳು ತೊಟ್ಟಿ- 20,000/-,ತೆರೆದ ಬಾವಿ- 1,50,000/-,ಅಜೋಲಾ ಘಟಕ- 16,000/-,ಕೃಷಿ ಹೊಂಡ-1,49,000/-
ಕಂದಕ ಬದು ನಿರ್ಮಾಣ-84,000/-,ಹಂದಿ ಸಾಕಾಣಿಕೆ ಕೊಟ್ಟಿಗೆ-87,000/-,ದೀನಬಂಧು ಜೈವಿಕ ಅನಿಲ ಘಟಕ-40,000/-,ಇಂಗು ಗುಂಡಿ ನಿರ್ಮಾಣ-4,000/-
ಅಡಿಕೆ- 1,68,000/-, ತೆಂಗು- 66,000/-, ಗೇರು- 63,000/-, ಮಾವು/ಸಪೋಟ- 56,000/-, ದಾಳಿಂಬೆ- 69,000/-, ಸೀಬೆ- 1,31,000/-, ತಾಳೆ- 34,000/-, ಚಕ್ಕೆ ದಾಲ್ಚಿನ್ನಿ- 1,74,000/-, ಲವಂಗ- 50,000/-, ಕಾಳುಮೆಣಸು- 1,09,000/-, ನಿಂಬೆ/ಮೋಸಂಬಿ/ಕಿತ್ತಳೆ- 49,000/-, ಹುಣಸೆ- 1,18,000/-
ನೇರಳೆ- 54,000/-, ಸೀತಾಫಲ- 58,000/, ಬಾರೆ- 48,000/-, ನುಗ್ಗೆ- 70,000/-, ನೆಲ್ಲಿ- 1,69,000/-, ಅಂಜೂರ- 88,000/-, ಹಲಸು- 54,000/-, ದ್ರಾಕ್ಷಿ- 4,72,000/-, ವೀಳೆದೆಲೆ(ಅರ್ಧ ಎಕರೆಗೆ)- 28,000/-, ಕರೀಬೇವು(ಅರ್ಧ ಎಕರೆಗೆ)- 60,000/-, ಕಾಫಿ- 1,68,000/-, ಬೆಣ್ಣೆ ಹಣ್ಣು- 51,000/-
ರಾಮ್ಬೂತಾನ್- 52,000/-, ಅಪ್ಪೇಮಿಡಿ ಮಾವು- 94,000/-, ಜಾಯಿಕಾಯಿ-25,000/-, ಹಿಪ್ಪು ನೇರಳೆ ನರ್ಸರಿ ಅಭಿವೃದ್ದಿ-1,28,000/-, ಡ್ರಾಗನ್ ಪ್ರೋಟ್ಸ್-1,54,000/-, ಗುಲಾಬಿ ಕೃಷಿ
Narega Yojana application-ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಎಲ್ಲಿ ಅರ್ಜಿ ಸಲ್ಲಿಸಬೇಕು?
ರೈತರು ಮೇಲೆ ತಿಳಿಸಿರುವ ಕಾಮಗಾರಿಗಳನ್ನು ನಿಮ್ಮ ಜಮೀನಿನಲ್ಲಿ ಕೈಗೊಳ್ಳಲು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿ ಅಥವಾ ಆ ಕಾಮಗಾರಿಗೆ ಸಂಬಂಧಪಟ್ಟ ತಾಲ್ಲೂಕಿನ ಕಚೇರಿಯನ್ನು(ಕೃಷಿ/ತೋಟಗಾರಿಕೆ/ರೇಷ್ಮೆ/ಪಶುಸಂಗೋಪನೆ) ಅನ್ನು ಭೇಟಿ ಮಾಡಿ ಕ್ರಿಯಾಯೋಜನೆಯಲ್ಲಿ ನಿಮ್ಮ ಕಾಮಗಾರಿಯನ್ನು ಸೇರಿಸಲು ಅರ್ಜಿ ಸಲ್ಲಿಸಬೇಕು. ಒಮ್ಮೆ ಕ್ರಿಯಾಯೋಜನೆಯು ಅನುಮೋದನಯಾಗಿ ಬಂದ ತಕ್ಷಣ ನೀವು ಆ ಕಾಮಗಾರಿಯನ್ನು ಕೈಗೊಳ್ಳಬಹುದು.
Documents-ನರೇಗಾ ಯೋಜನೆ ಅಡಿ ಆರ್ಥಿಕ ನೆರವು ಪಡೆಯಲು ಅಗತ್ಯ ದಾಖಲೆಗಳು:
ರೈತರ ಆಧಾರ್ ಕಾರ್ಡ
ಬ್ಯಾಂಕ್ ಪಾಸ್ ಬುಕ್
ನರೇಗಾ ಜಾಬ್ ಕಾರ್ಡ ಪ್ರತಿ
ಜಮೀನಿನ ಪಹಣಿ/ಉತಾರ/RTC
ರೈತರ ಪೋಟೋ
Narega Yojana Application Process-ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ?
ರೈತರು ನರೇಗಾ ಯೋಜನೆ ಅಡಿ ಸಹಾಯಧನದಲ್ಲಿ ವಿವಿಧ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಗ್ರಾಮ ಪಂಚಾಯತಿ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು. ಬಳಿಕ ಕ್ರಿಯಾ ಯೋಜನೆಯಲ್ಲಿ ನಿಮ್ಮ ಹೆಸರನ್ನು ಸೇರ್ಪಡೆ ಮಾಡಿ ಅನುಮೋದನೆಯನ್ನು ಪಂಚಾಯತಿ ಅಧಿಕಾರಿಗಳು 15 ದಿನಗ ಒಳಗಾಗಿ ಪಡೆದು ನಿಮಗೆ ಕಾಮಗಾರಿಯನ್ನು ಆರಂಭಿಸಲು Work Order ಅನ್ನು ನೀಡುತ್ತಾರೆ. ಬಳಿಕ ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ಜಾಗವನ್ನು ಭೇಟಿ ಮಾಡಿ ಮೊದಲ ಹಂತದ ಜಿಪಿಎಸ್ ಪೋಟೋ ತೆಗೆದುಕೊಳ್ಳುತ್ತಾರೆ.
ಇದಾದ ನಂತರ ಅರ್ಧ ಪ್ರಮಾಣದ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಹಾಗೂ ಕೊನೆಯಲ್ಲಿ ಪೂರ್ಣಗೊಳಿಸಿದ ಬಳಿಕ ಜಿಪಿಎಸ್ ಪೋಟೋ ತೆಗೆಯಲಾಗುತ್ತದೆ. ಜಾಬ್ ಕಾರ್ಡ್ ನೀಡಿರುವ ಫಲಾನುಭವಿಗಳ ಬ್ಯಾಂಖ್ ಖಾತೆಗೆ ಕೂಲಿ ವೆಚ್ಚವನ್ನು ಹಾಕಲಾಗುತ್ತದೆ. ಸಾಮಾಗ್ರಿ ವೆಚ್ಚವನ್ನು ಅರ್ಜಿದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
Narega Helpline-ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ- 8277506000/ 1800 4258 666
Narega Website-ನರೇಗಾ ಯೋಜನೆಯ ಅಧಿಕೃತ ವೆಬ್ಸೈಟ್- Click Here