Smartphone into CCTV: ಹೊಸ ಸ್ಮಾರ್ಟ್‌ಫೋನ್ ಕೊಂಡ ನಂತರ ಹಳೆಯ ಫೋನ್ (Old Phone) ಮನೆಯ ಮೂಲೆಯಲ್ಲಿ ಧೂಳು ತಿನ್ನುತ್ತಿರುತ್ತದೆ. ಆದರೆ ನೀವು ಅದನ್ನು ಮನೆಯ ಸುರಕ್ಷತೆಗಾಗಿ ಸುಲಭವಾಗಿ ಒಂದು ಉತ್ತಮ ಸಿಸಿಟಿವಿ (CCTV) ಕ್ಯಾಮೆರಾ ಆಗಿ ಪರಿವರ್ತಿಸಬಹುದು. ಇದಕ್ಕೆ ಬೇಕಾಗಿರುವುದು ಕೇವಲ ಒಂದು ಅಪ್ಲಿಕೇಶನ್ ಮತ್ತು ವೈಫೈ ಸಂಪರ್ಕ ಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಹಳೆಯ ಫೋನ್ ಅನ್ನು ಯಾವುದೇ ಹಣ ಖರ್ಚು ಮಾಡದೆ ಸಿಸಿಟಿವಿ ಕ್ಯಾಮೆರಾದಂತೆ ಬಳಸುವುದು ಹೇಗೆ ಎಂಬುದರ ಕುರಿತು ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ. ಇದು ನಿಮ್ಮ ಮನೆಯ ಭದ್ರತೆಗೆ ಒಂದು ಅತ್ಯುತ್ತಮ ಉಪಾಯವಾಗಿದೆ. ಹಾಗಾದ್ರೆ ನಿಮ್ಮ ಯಾವುದೇ ಹಳೆ ಸ್ಮಾರ್ಟ್‌ಫೋನ್ ಸಾಮಾನ್ಯ CCTV ಕ್ಯಾಮೆರಾವನ್ನಾಗಿ ಬಳಸೋದು ಹೇಗೆ ತಿಳಿಯಿರಿ.
ಹಂತ 1: ಅಗತ್ಯ ತಯಾರಿ ಹೇಗಿರಬೇಕು?
ಸಿಸಿಟಿವಿ ಆಗಿ ಬದಲಾಯಿಸಲು ನಿಮಗೆ ಎರಡು ಫೋನ್‌ಗಳು ಬೇಕಾಗುತ್ತವೆ.ಹಳೆಯ ಫೋನ್ ಇದು ವೀಡಿಯೊ ರೆಕಾರ್ಡ್ ಮಾಡುವ ಸಾಧನ.ನಿಮ್ಮ ಹೊಸ ಫೋನ್ ಇದು ಲೈವ್ ವೀಡಿಯೊ ನೋಡಲು ಬಳಸುವ ಫೋನ್.ಫಾರ್ಮ್ಯಾಟ್ ಮಾಡುವ ಅಗತ್ಯವಿಲ್ಲ ಈ ಪ್ರಕ್ರಿಯೆಗೆ ಫೋನ್ ಅನ್ನು ಫಾರ್ಮ್ಯಾಟ್ ಮಾಡುವ (ಎಲ್ಲಾ ಡೇಟಾ ಅಳಿಸಿಹಾಕುವ) ಅಗತ್ಯವಿಲ್ಲ. ಆದರೆ ನಿಮ್ಮ ಹಳೆಯ ಫೋನ್‌ನಲ್ಲಿರುವ ಅನಗತ್ಯ ಅಪ್ಲಿಕೇಶನ್‌ಗಳನ್ನು ಮತ್ತು ಫೋಟೋಗಳನ್ನು ಡಿಲೀಟ್ ಮಾಡಿ ಫೋನ್‌ಗೆ ಸಾಕಷ್ಟು ಜಾಗ ಮಾಡಿ.ವೈಫೈ ಮತ್ತು ಚಾರ್ಜಿಂಗ್ ಎರಡು ಫೋನ್‌ಗಳೂ ವೈಫೈ (Wi-Fi) ಸಂಪರ್ಕ ಹೊಂದಿರಬೇಕು. ಕ್ಯಾಮೆರಾ ಫೋನ್ 24 ಗಂಟೆಯೂ ಆನ್ ಇರಬೇಕಾಗಿರುವುದರಿಂದ ಅದನ್ನು ಚಾರ್ಜರ್‌ಗೆ ಕನೆಕ್ಟ್ ಮಾಡಿ ಇಡುವ ಸ್ಥಳವನ್ನು ಆಯ್ದುಕೊಳ್ಳಿ.
ಹಂತ 2: ಸೆಕ್ಯುರಿಟಿ ಆ್ಯಪ್ ಡೌನ್‌ಲೋಡ್
ಹಳೆಯ ಫೋನ್ ಅನ್ನು ಸಿಸಿಟಿವಿ ಆಗಿ ಬಳಸಲು ನಿಮಗೆ ಒಂದು ವಿಶೇಷ ಅಪ್ಲಿಕೇಶನ್ ಬೇಕಾಗುತ್ತದೆ. ‘AlfredCamera’ ಅಥವಾ ‘AtHome Camera’ ನಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಈ ಕೆಲಸಕ್ಕೆ ಲಭ್ಯವಿವೆ.ಆ್ಯಪ್ ಡೌನ್‌ಲೋಡ್: ನೀವು ಆರಿಸಿದ ಆ್ಯಪ್ ಅನ್ನು ಕ್ಯಾಮೆರಾ ಫೋನ್ (ಹಳೆಯ ಫೋನ್) ಮತ್ತು ವೀಕ್ಷಕ ಫೋನ್ (ಹೊಸ ಫೋನ್), ಎರಡರಲ್ಲೂ ಡೌನ್‌ಲೋಡ್ ಮಾಡಿ. (Google Play Store ಅಥವಾ Apple App Store ನಿಂದ)ಸೈನ್ ಇನ್: ಎರಡೂ ಫೋನ್‌ಗಳಲ್ಲಿ ಅದೇ ಗೂಗಲ್ ಖಾತೆ (Google Account) ಅಥವಾ ಇಮೇಲ್ ಐಡಿ ಬಳಸಿ ಲಾಗ್ ಇನ್ ಮಾಡಿ.Also Read: Upcoming Phones Nov-2025: ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ OnePlus, iQOO, OPPO ಮತ್ತು Lava ಸ್ಮಾರ್ಟ್‌ಫೋನ್‌ಗಳು
ಹಂತ 3: CCTV ಫೋನ್‌ಗಳನ್ನು ಜೋಡಿಸುವುದು
ಪಾತ್ರ ನಿರ್ಧರಿಸಿ: ಆ್ಯಪ್ ತೆರೆದಾಗ ಅದು ನಿಮ್ಮನ್ನು ಈ ಫೋನ್‌ನ ಪಾತ್ರ (Role) ಕೇಳುತ್ತದೆ.ಹಳೆಯ ಫೋನಿನಲ್ಲಿ ‘Camera’ (ಕ್ಯಾಮೆರಾ) ಆಯ್ಕೆಯನ್ನು ಆರಿಸಿ.ಹೊಸ ಫೋನಿನಲ್ಲಿ ‘Viewer’ (ವೀಕ್ಷಕ) ಆಯ್ಕೆಯನ್ನು ಆರಿಸಿ.ಸಂಪರ್ಕ: ಕೆಲವು ಅಪ್ಲಿಕೇಶನ್‌ಗಳಲ್ಲಿ ವೀಕ್ಷಕ ಫೋನಿನಲ್ಲಿ ಒಂದು QR ಕೋಡ್ (QR Code) ಕಾಣಿಸುತ್ತದೆ. ಅದನ್ನು ಕ್ಯಾಮೆರಾ ಫೋನ್ ಬಳಸಿ ಸ್ಕ್ಯಾನ್ ಮಾಡಿದರೆ ಎರಡು ಫೋನ್‌ಗಳು ಪರಸ್ಪರ ಸಂಪರ್ಕಗೊಳ್ಳುತ್ತವೆ.
ಹಂತ 4: ಸರಿಯಾದ ಸ್ಥಳದಲ್ಲಿ CCTV ಫೋನ್ ಫಿಕ್ಸ್ ಮಾಡಿ
ಜಾಗ ಆಯ್ಕೆ: ನೀವು ಯಾವ ಜಾಗವನ್ನು ಹೆಚ್ಚು ಗಮನಿಸಬೇಕೆಂದು ಬಯಸುತ್ತೀರಿ (ಉದಾ: ಮುಖ್ಯ ದ್ವಾರ, ಕಿಟಕಿ, ಮಕ್ಕಳ ರೂಮ್) ಆ ಸ್ಥಳದಲ್ಲಿ ಕ್ಯಾಮೆರಾ ಫೋನ್ ಅನ್ನು ಇಡಿ.ಭದ್ರತೆ: ಕ್ಯಾಮೆರಾ ಫೋನ್ ಅನ್ನು ಗೋಡೆಗೆ ಅಥವಾ ಒಂದು ಗಟ್ಟಿ ಸ್ಥಳದಲ್ಲಿ ಫಿಕ್ಸ್ ಮಾಡಲು ನೀವು ಸಣ್ಣ ಟ್ರೈಪಾಡ್ (Mini Tripod) ಅಥವಾ ಫೋನ್ ಸ್ಟ್ಯಾಂಡ್‌ಗಳನ್ನು ಬಳಸಬಹುದು.ಪವರ್ ಕನೆಕ್ಷನ್: ಕ್ಯಾಮೆರಾ ಫೋನ್ ಯಾವಾಗಲೂ ಚಾರ್ಜಿಂಗ್‌ನಲ್ಲಿರುವಂತೆ ನೋಡಿಕೊಳ್ಳಿ ಇಲ್ಲದಿದ್ದರೆ ಬ್ಯಾಟರಿ ಖಾಲಿಯಾದರೆ ರೆಕಾರ್ಡಿಂಗ್ ನಿಂತುಹೋಗುತ್ತದೆ.ಸೆಟ್ಟಿಂಗ್ಸ್: ವೀಕ್ಷಕ ಫೋನಿನಲ್ಲಿ ನೀವು ಮೋಷನ್ ಡಿಟೆಕ್ಷನ್ (Motion Detection) ಆನ್ ಮಾಡಬಹುದು. ಇದರಿಂದ ಏನಾದರೂ ಚಲನೆ ಕಂಡುಬಂದ ತಕ್ಷಣ ನಿಮಗೆ ಅಲರ್ಟ್ (Alert) ಬರುತ್ತದೆ.ಅಷ್ಟೇ! ಈಗ ನೀವು ನಿಮ್ಮ ವೀಕ್ಷಕ ಫೋನ್ ಮೂಲಕ ಪ್ರಪಂಚದ ಯಾವುದೇ ಮೂಲೆಯಿಂದ ನಿಮ್ಮ ಮನೆಯ ಕ್ಯಾಮೆರಾ ಫೋನ್‌ನ ಲೈವ್ ವಿಡಿಯೋವನ್ನು ನೋಡಬಹುದು.