Ration Card: ರೇಷನ್ ಕಾರ್ಡ್ ಕಳೆದುಹೋದರೆ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿವೆ ಸರಳ ಮಾರ್ಗಗಳು

Ration Card: ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇದನ್ನು ಬರೀ ರೇಷನ್ ಪಡೆಯಲು ಮಾತ್ರವಲ್ಲದೆ, ಹಲವಾರು ಅರ್ಜಿ ಸಲ್ಲಿಕೆ ವೇಳೆ ಬೇಕೆ ಬೇಕಾಗುತ್ತದೆ. ಒಂದು ವೇಳೆ ನೀವು ಈ ರೇಷನ್‌ ಕಾರ್ಡ್‌ ಕಳೆದುಕೊಂಡಿದ್ದರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಸುಲಭವಾಗಿ ಆನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅನುಸರಿಸಬೇಕಾದ ವಿಧಾನಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಪಡಿತರ ಚೀಟಿಗಳಲ್ಲಿ ಹಲವು ವಿಧನಗಳಿದ್ದು, ಒಂದೊಂದು ಒಂದೊಂದು ರೀತಿಯ ಸೌಲಭ್ಯಗಳನ್ನು ಪಡೆಯಲು ಬೇಕಾಗುತ್ತದೆ. ಪ್ರಮುಖವಾಗಿ ಇದೀ ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ವೇಳೆ ಎಲ್ಲಾ ವಿಧದ ಪಡಿತರ ಚೀಟಿಗಳನ್ನು ಕೇಳಲಾಗುತ್ತದೆ. ಇವುಗಳಲ್ಲಿ ಬಿಪಿಎಲ್, ಅಂತ್ಯೋದಯ ಕಾರ್ಡ್‌ಗಳಿಗೆ ಹೆಚ್ಚಿನ ಸರ್ಕಾರಿ ಸೌಲಭ್ಯಗಳು ಸಿಗಲಿವೆ. ಇನ್ನೂ ಎಪಿಎಲ್‌ ಕಾರ್ಡ್‌ಗಳಿಗೆ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ, ಬದಲಿಗೆ ಅರ್ಜಿ ಸಲ್ಲಿಕೆ ವೇಳೆ ಕೇಳಲಾಗುತ್ತದೆ.

How to Download Lost Ration Card Online in Karnataka Here are the simple ways

ಒಂದು ವೇಳೆ ನಿಮ್ಮ ಬಳಿಯ ರೇಷನ್ ಕಾರ್ಡ್ ಕಳೆದುಹೋದರೆ ಚಿಂತಿಸುವ ಅಗತ್ಯವಿಲ್ಲ. ಇಲ್ಲಿ ನೀಡಲಾಗಿರುವ ವಿಧಾನಗಳನ್ನು ಪಾಲನೆ ಮಾಡಿದರೆ, ಸುಲಭವಾಗಿ ಪಡೆದುಕೊಳ್ಳಬಹುದು. ಪಡಿತರ ಚೀಟಿ ಕಳೆದುಹೋಗಿದ್ದರೆ ಅಥವಾ ಸರಿಯಾದ ಸಮಯಕ್ಕೆ ಪಡಿತರ ಸಿಗದಿದ್ದರೆ, ನೀವು ಆನ್‌ಲೈನ್ ಮೂಲಕ ತುಂಬಾ ಸುಲಭವಾಗಿ ರೇಷನ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪಡಿತರ ಚೀಟಿ ಕಳೆದು ಹೋಗಿದ್ದರೆ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೀವು ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಬೇಕು. ಬಳಿಲ ಮೂಲಕ ಮೊಬೈಲ್ ನಂಬರ್‌ಗೆ ಬರುವ ಓಟಿಪಿಯನ್ನು ನಮೂದಿಸಿ ರೇಷನ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆದರೆ, ಪಡಿತರ ಚೀಟಿಗೆ ಮಾತ್ರ ನಿಯಮದ ಪ್ರಕಾರವೇ ಕೇಳಲಾದ ದಾಖಲೆಗಳ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.

ಕಳೆದುಹೋದ ಪಡಿತರ ಚೀಟಿ ಡೌನ್‌ಲೋಟ್‌ ಮಾಡುವುದೇಗೆ?

* ಅಧಿಕೃತ ವೆಬ್‌ಸೈಟ್‌ https://ahara.karnataka.gov.in/Home/EServices ಗೆ ಭೇಟಿ ನೀಡಿ

* ನೀವು ರೇಷನ್ ಕಾರ್ಡ್ ಸ್ಥಿತಿಯನ್ನು ಪರಿಶೀಲನೆ ಮಾಡಿ

* ಮೊಬೈಲ್ ನಂಬರ್‌ಗೆ ಬರುವ ಒಟಿಪಿಯನ್ನು ನಮೂದಿಸಿ ನೀವು ಸುಲಭವಾಗಿ ರೇಷನ್ ಕಾರ್ಡ್ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಆದರೆ, ಹೊಸ ಪಡಿತರ ಚೀಟಿಯನ್ನು ಹೀಗೆ ನೀಡಲು ಆಗುವುದಿಲ್ಲ. ನೀವು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿ ಅಥವಾ ಗ್ರಾಮ ಒನ್‌ ಬೆಂಗಳೂರಿನವರಾಗಿದ್ದರೆ, ಬೆಂಗಳೂರು ಒನ್‌ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಆಗ ಅಲ್ಲಿ ಕೇಳಲಾದ ದಾಖಲೆಗಳನ್ನು ನೀಡಬೇಕಾಗುತ್ತದೆ. ಬಳಿಕ ಆದಾಯದ ಅನುಗುಣವಾಗಿ ನಿಮಗೆ ಯಾವ ರೀತಿಯ ಪಡಿತರ ಚೀಟಿ ನೀಡಬೇಕು ಎಂಬುದನ್ನು ಪರಿಗಣಿಸಲಾಗುತ್ತದೆ.

ಇದೀಗ ಸದ್ಯ ರಾಜ್ಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಕಾರ್ಯ ನಡೆಯುತ್ತಿದೆ. ನಿಮ್ಮ ಪಡಿತರ ಚೀಟಿಯಲ್ಲಿ ಯಾವುದೇ ತಿದ್ದುಪಡಿ ಮಾಡಿಸಬೇಕೆಂದರೆ, ಆನ್‌ಲೈನ್‌ ಸೇಂಟರ್ ಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಬೇಕಾಗುತ್ತದೆ. ಮತ್ತೊಂದೆಡೆ ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಿ ಎಪಿಎಲ್‌ಗೆ ವರ್ಗಾಹಿಸಲಾಗುತ್ತಿದೆ. ಈ ವೇಳೆ ಅರ್ಹರ ಬಿಪಿಎಲ್‌ ಕಾರ್ಡ್‌ ಎಪಿಎಲ್‌ಗೆ ವರ್ಗಾವಣೆ ಆಗಿದ್ದರೆ, ಅಂತಹವರು ನಿಮ್ಮ ತಾಲ್ಲೂಕಿನ ತಹಶೀಲ್ದಾರ್ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಮತ್ತೆ ಬಿಪಿಎಲ್‌ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅದು ನೀವು ಬಿಪಿಎಲ್‌ ಕಾರ್ಡ್‌ಗೆ ಅರ್ಹರೋ ಅಥವಾ ಇಲ್ಲವೋ ಎಂದು ಪರಿಶೀಲನೆ ನಡೆಸಿದ ಬಳಿಕ.


Previous Post Next Post