ಮಂಗಳೂರು : ಬಿಲ್ಲವ ಸಮಾಜದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣಗುರುಗಳ ಆಶಯದಂತೆ ಶೈಕ್ಷಣಿಕ ಸೇವಾ ಕಾರ್ಯ ಆರಂಭಿಸಿದ ದಿವ್ಯ ಚೇತನ ದಾಮೋದರ ಆರ್. ಸುವರ್ಣ ಅವರ 101 ನೇ ಜನ್ಮ ಜಯಂತಿ ಸ್ಮರಣಾರ್ಥ ದಾಮೋದರ ಸುವರ್ಣ ಎಜ್ಯುಕೇಶನ್ ಟ್ರಸ್ಟ್ ನೀಡುತ್ತಿರುವ ವಿದ್ಯಾರ್ಥಿ ವೇತನಕ್ಕೆ ಬಿಲ್ಲವ ಸಮಾಜದ ಬಡ ಕುಟುಂಬಗಳ ವೃತ್ತಿ ಶಿಕ್ಷಣ ಪಡೆಯುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಡಿಸೆಂಬರ್ 21 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ನಡೆಯಲಿದೆ. ಸುಮಾರು 50 ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನವನ್ನು 500 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿತರಿಸುವ ಗುರಿ ಇರಿಸಿಕೊಳ್ಳಲಾಗಿದೆ.
ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ ಶೇ. 75 ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಮತ್ತು ವೃತ್ತಿ ಶಿಕ್ಷಣ ಪಡೆಯುತ್ತಿರುವ ಬಿಲ್ಲವ ಸಮಾಜದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಮಂಗಳೂರಿನ ಉಜ್ಜೋಡಿಯ ಮಹಾಕಾಳಿ ದೇವಸ್ಥಾನದ ಎದುರು ಪೆಟ್ರೋಲ್ ಪಂಪ್ ಬಳಿ ಇರುವ ದಾಮೋದರ ಸುವರ್ಣ ಎಜ್ಯುಕೇಶನ್ ಟ್ರಸ್ಟ್ ಕಚೇರಿಯಿಂದ ಪಡೆದು ಭರ್ತಿ ಮಾಡಿ ಮಾರ್ಕ್ಸ್ ಕಾರ್ಡ್ ಪ್ರತಿ, ಬಿಪಿಎಲ್ ಕಾರ್ಡ್ ಮತ್ತು ಸ್ಥಳೀಯ ಬಿಲ್ಲವ ಸಂಘದ ಶಿಫಾರಸ್ಸಿನೊಂದಿಗೆ ನವೆಂಬರ್ 15 ರೊಳಗೆ ಟ್ರಸ್ಟ್ ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಾಮೋದರ ಸುವರ್ಣ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಉದಯಚಂದ್ರ ಡಿ. ಸುವರ್ಣ, ವಿನಯಚಂದ್ರ ಡಿ. ಸುವರ್ಣ ಉಪಸ್ಥಿತರಿದ್ದರು.
ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್ ಮಂಗಳೂರು ಇದರ ವತಿಯಿಂದ ನವೆಂಬರ್ 6,7 ಮತ್ತು 8ರಂದು ಸೀನರ್ಜಿಯಾ 2025 ಆಯೋಜನೆ ಮಾಡಿದೆ. ಇದರಲ್ಲಿ ನಾಲ್ಕು ತರದ ಈವೆಂಟ್ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರು ಸಹಿತ ಸಂಘಟಕರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಮೂರು ದಿನಗಳ ತಾಂತ್ರಿಕ ಹಬ್ಬದಲ್ಲಿ ಎಸ್ ಎಸ್ ಡಿ ಎಚ್ ಎನ್ನುವುದು ಮುಖ್ಯವಾದ ಈವೆಂಟ್ ಅಗಿದೆ. ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿನೂತನ ಐಡಿಯಾದಿಂದ ಹಿಡಿದು ಅಂತಿಮ ವಿಚಾರದವರೆಗೂ ಮಾಹಿತಿ ನೀಡಲಿದ್ದೇವೆ. ಕಳೆದ ನಾಲ್ಕು ತಿಂಗಳಿನಿಂದ ಇದಕ್ಕೆ ಕೆಲಸ ಮಾಡುತ್ತಿದ್ದೇವೆ.
ಒಂದು ಪ್ರೋಜೆಕ್ಟ್ ಹೇಗೆ ಬಿಲ್ಟ್ ಮಾಡಬಹುದು ಎನ್ನುವುದನ್ನು ವಿದ್ಯಾರ್ಥಿಗಳ ಮನದಲ್ಲಿ ಸಮಗ್ರವಾಗಿ ಮಾಹಿತಿ ನೀಡ್ತೇವೆ. 8ರಂದು ಬೆಳಿಗ್ಗೆ ಏರ್‌ಶೋ ನಡೆಯಲಿದೆ. 425 ಶಿಕ್ಷಣ ಸಂಸ್ಥೆಗಳಿಂದ ಸುಮಾರು 10,000ಕ್ಕೂ ಅಧಿಕ ಮಂದಿ ವಿದ್ಯಾರ್ತಿಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲ ಎಸ್ ಎಸ್ ಇಂಜನಗೇರಿ, ಡೀನ್ ಶಮಂತ್ ರೈ, ಸಂಚಾಲಕರಾದ ಪ್ರಶಾಂತ್, ಜೀವಿತ, ವೈಭವ್, ಕನ್ನಿಕಾ ಮೊದಲಾದವರಿದ್ದರು.