Sukanya Samriddhi Yojane- ಪೋಸ್ಟ್ ಆಫೀಸ್‌ನಲ್ಲಿ ಅತೀ ಹೆಚ್ಚು ಬಡ್ಡಿ ನೀಡುವ ಯೋಜನೆ

ಪ್ರಸ್ತುತ ದಿನಗಳಲ್ಲಿ ಅನೇಕ ಜನರು ಪೋಸ್ಟ್ ಆಫೀಸ್(Post Office) ನಲ್ಲಿ ಲಭ್ಯವಿರುವ ವಿವಿಧ ಉಳಿತಾಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡುತ್ತಾರೆ ಈ ನಿಟ್ಟಿನಲ್ಲಿ ಅತೀ ಹೆಚ್ಚು ಬಡ್ದಿಯನ್ನು ನೀಡುವ ಸುಕನ್ಯ ಸಮೃದ್ಧಿ ಯೋಜನೆಯ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ.

ನೀವೇನಾದ್ರೂ ಸುಕನ್ಯ ಸಮೃದ್ಧಿ ಯೋಜನೆಗೆ(Sukanya Samriddhi Yojana) ಹೂಡಿಕೆ ಮಾಡಲು ಬಯಸಿದರೆ ದಯವಿಟ್ಟು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಇದರಲ್ಲಿ ಹೇಗೆ ಸುಕನ್ಯಾ ಸಮೃದ್ಧಿ ಯೋಜನೆಗೆ ಹೂಡಿಕೆ ಪ್ರಾರಂಭಿಸಬಹುದು ಎಂಬ ಎಲ್ಲ ಮಾಹಿತಿ ನೀಡಲಾಗಿದೆ.

ಸುಕನ್ಯ ಸಮೃದ್ಧಿ ಯೋಜನೆ ಅಡಿಯಲ್ಲಿ ನಾಗರಿಕರು ಹೂಡಿಕೆಯನ್ನು ಮಾಡುವುದು ಹೇಗೆ?ಸುಕನ್ಯಾ ಸಮೃದ್ಧಿ ಯೋಜನೆ ಅಲ್ಲಿ ಹೂಡಿಕೆ ಮಾಡಿದರೆ ಎಷ್ಟು ಬಡ್ಡಿ(Sukanya Samriddhi Interest Rate) ನೀಡಲಾಗುತ್ತದೆ? ಹೂಡಿಕೆ ಯೋಜನೆ ವಿವರ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

What is Sukanya Samriddhi scheme - ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು?

ಸುಕನ್ಯ ಸಮೃದ್ಧಿ ಯೋಜನೆಯು 2015ಲ್ಲಿ ಪ್ರಾರಂಭವಾಯಿತು, ಇದರ ಉದ್ದೇಶವೇನೆಂದರೆ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಅವರ ಮದುವೆ ಸಮಯದಲ್ಲಿ ಆರ್ಥಿಕವಾಗಿ ಕುಗ್ಗಬಾರದು ಎಂದು ಸರ್ಕಾರವೇ ಸುಕನ್ಯಾ ಸಮೃದ್ಧಿ ಯೋಜನೆ ಅಥವಾ ಎಸ್ ಎಸ್ ವೈ ಯೋಜನೆ ಎಂಬ ಅತ್ಯುತ್ತಮ ಯೋಜನೆಯನ್ನು ಜಾರಿಗೆ ತರಲಾಗಿದೆ.

Who can open Sukanya Samriddhi account- ಯಾರು ಈ ಖಾತೆ ತೆರೆಯಬಹುದು?

ಸುಕನ್ಯ ಸಮೃದ್ಧಿ ಯೋಜನೆ ಖಾತೆಯನ್ನು ಕೇವಲ ಹೆಣ್ಣು ಮಗುವಿನ ಹೆಸರಿನಲ್ಲಿಯೇ ತೆರೆಯಬೇಕು. ಹಾಗೂ ಖಾತೆ ರಚಿಸುವ ಹೆಣ್ಣು ಮಗುವಿನ ವಯಸ್ಸು 10 ವರ್ಷಗಳ ಒಳಗಿರಬೇಕು. ನೆನಪಿರಲಿ ಒಂದು ಮಗುವಿಗೆ ಒಂದೇ ಖಾತೆ ಇರತಕ್ಕದ್ದು. ಖಾತೆಯನ್ನು ಹೆಣ್ಣು ಮಕ್ಕಳ ಪೋಷಕರು ಅಥವಾ ಕಾನೂನು ಪರವಾದ ರಕ್ಷಕರು ತೆರೆಯಬಹುದಾಗಿದೆ.

More information about Sukanya Samriddhi scheme - ಸುಕನ್ಯಾ ಸಮೃದ್ಧಿ ಯೋಜನೆಯ ಹೆಚ್ಚಿನ ಮಾಹಿತಿ

ಸುಕನ್ಯಾ ಸಮೃದ್ಧಿ ಯೋಜನೆಯ ಕನಿಷ್ಠೆ ಠೇವಣಿ ವರ್ಷಕ್ಕೆ 250 ಅಂದರೆ ಕೇವಲ 21 ರೂಪಾಯಿ ತಿಂಗಳಿಗೆ ಮಾತ್ರ. ಹಾಗೂ ಗರಿಷ್ಟ ಠೇವಣಿ ವರ್ಷಕ್ಕೆ 1,50 ಲಕ್ಷದವರೆಗೆ ಮಾತ್ರ ಅವಕಾಶವಿದೆ. ಸುಕನ್ಯಾ ಸಮೃದ್ಧಿ ಯೋಜನೆಯು ಖಾತೆ ತೆರೆದ ದಿನದಿಂದ 21 ವರ್ಷಗಳ ನಂತರ ಮುಕ್ತಾಯಗೊಳ್ಳುತ್ತದೆ. ಹಾಗೂ 15 ವರ್ಷಗಳ ಕಾಲ ನೀವು ಹಣ ಠೇವಣಿ ಮಾಡಬೇಕಾಗುತ್ತದೆ. ಉಳಿದ 6 ವರ್ಷಗಳಲ್ಲಿ ಹಣವು ಬಡ್ಡಿ ಸೇರಿ ನಿಮ್ಮ ಖಾತೆಗೆ ಬರುವುದು.

ಸಮೃದ್ಧಿ ಯೋಜನೆ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಬಹುದು. ಹಾಗೂ ಈ ಯೋಜನೆಯ ಬಡ್ಡಿಯ ದರ ನೋಡುವುದಾದರೆ ವರ್ಷಕ್ಕೆ 8.2% ಇರುತ್ತದೆ. ಸ್ನೇಹಿತರೆ ನೀವೇನಾದರೂ ಆದಾಯ ತೆರಿಗೆ ಕಟ್ಟುತ್ತಿದ್ದರೆ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದ್ದರೆ ನಿಮಗೆ ಆದಾಯ ತೆರಿಗೆಯಲ್ಲಿ ಸ್ವಲ್ಪ ವಿನಾಯಿತಿಯು ಕೂಡ ಸಿಗುತ್ತದೆ.

How to open Sukanya Samriddhi- ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಹೇಗೆ?

ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯಲು ನೀವು ಯಾವುದೇ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ರಾಷ್ಟ್ರೀಯ ಬ್ಯಾಂಕುಗಳಾದ ಎಸ್ ಬಿ ಐ, ಕೆನರಾ, ಬರೋಡ ಬ್ಯಾಂಕ್, ಯಾವ ಬ್ಯಾಂಕಲ್ಲು ಕೂಡ ಖಾತೆಯನ್ನು ತೆರೆಯಬಹುದು ನೆನಪಿರಲಿ ಖಾಸಗಿ ಬ್ಯಾಂಕ್ ನಲ್ಲೂ ಕೂಡ ಖಾತೆಯನ್ನು ಸುಲಭವಾಗಿ ರಚಿಸಬಹುದು. ನಿಮ್ಮ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಿ ಸುಕನ್ಯ ಸಮೃದ್ಧಿ ಯೋಜನೆಗೆ ಅರ್ಜಿಯ ಫಾರಂ ಕೇಳಿ ಪಡೆಯಿರಿ. ನಂತರ ಅರ್ಜಿಯ ಮೇಲೆ ನಿಮ್ಮ ವಿವರಗಳನ್ನು ಸರಿಯಾಗಿ ನೆಮ್ಮದಿಸಿ.

Documents for Sukanya Samriddhi- ಸುಖನ್ಯ ಸಮೃದ್ಧಿ ಯೋಜನೆಗೆ ಬೇಕಾಗುವಂತ ಅಗತ್ಯ ದಾಖಲೆಗಳು?

ಸುಕನ್ಯಾ ಸಮೃದ್ಧಿ ಯೋಜನೆಗೆ ಖಾತೆ ತೆರೆಯಲು ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ಅಗತ್ಯವಾಗಿ ಕೇಳಲಾಗುತ್ತದೆ.

ಮಗುವಿನ ಜನನ ಪ್ರಮಾಣ ಪತ್ರ

ಪೋಷಕರ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್

ಮಗುವಿನ ಆಧಾರ್ ಕಾರ್ಡ್

ವಿಳಾಸ ದೃಡೀಕರಣ ಪ್ರಮಾಣ ಪತ್ರ

ನಾಲ್ಕು ಪಾಸ್ಪೋರ್ಟ್ ಸೈಜ್ ಪೋಟೋ

ಸುಕನ್ಯಾ ಸಮೃದ್ಧಿ ಯೋಜನೆ. ಇದು ಕೇವಲ ಉಳಿತಾಯದ ಯೋಜನೆಯಲ್ಲ ಇದು ನಿಮ್ಮ ಹೆಣ್ಣು ಮಗುವಿನ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಒಂದು ಅತ್ಯುತ್ತಮ ಯೋಜನೆಯಾಗಿದೆ. ನಿಮ್ಮ ಹೆಣ್ಣು ಮಗುವಿಗೆ 21 ವಯಸ್ಸು ಆದ ನಂತರ ಅವರ ಉನ್ನತ ಶಿಕ್ಷಣಕ್ಕಾಗಿ ಅಥವಾ ಮದುವೆ ಖರ್ಚನ್ನು ನೀಗಿಸಲು ಈ ಯೋಜನೆಯು ಸಹಾಯ ಮಾಡುತ್ತದೆ.

ಮತ್ತು ಬಹಳ ಮುಖ್ಯವಾಗಿ ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಇದರಲ್ಲಿ ಯಾವುದೇ ರೀತಿಯ ಮೋಸ ಹಾಗೂ ವಂಚನೆ ನಡೆಯುವುದಿಲ್ಲ. ಪೋಷಕರು ಧೈರ್ಯವಾಗಿ ಸುಕನ್ಯಾ ಸಮೃದ್ಧಿ ಯೋಜನೆಗೆ ಹೂಡಿಕೆ ಪ್ರಾರಂಭಿಸಬಹುದು. ನೆನಪಿರಲಿ ಈ ಯೋಜನೆಯ ಹೆಚ್ಚಿನ ಮಾಹಿತಿಗಾಗಿಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಮಾತ್ರ ಭೇಟಿ ನೀಡಿ ಪರಿಶೀಲಿಸಿ.

Sukanya Samriddhi Scheme Website-ಈ ಯೋಜನೆ ಕುರಿತು ಇನ್ನು ಹೆಚ್ಚಿನ ಮಾಹಿತಿ ಮತ್ತು ಅಗತ್ಯ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಲು ಅಧಿಕೃತ ವೆಬ್ಸೈಟ್ ಲಿಂಕ್-Click Here

Previous Post Next Post