Ration Card: ಬಿಪಿಎಲ್ ಕಾರ್ಡ್ ರದ್ದಿಗಾಗಿ ಸರ್ಕಾರ 5,700 ಮಂದಿಗೆ ನೋಟಿಸ್, ಆಕ್ರೋಶ

ರಾಜ್ಯ ಸರ್ಕಾರ 'ಅನ್ನ ಭಾಗ್ಯ' (Anna Bhagya Scheme)ಯೋಜನೆಯಡಿ ಉಚಿತ ಅಕ್ಕಿ ವಿತರಿಸುತ್ತಿದೆ. ಜೊತೆಗೆ ಪಡಿತರ ಚೀಟಿಯಲ್ಲಿ (Ration Card) ಹಲವು ಬದಲಾವಣೆ, ರದ್ದು ಕ್ರಮಕ್ಕೆ ಮುಂದಾಗಿದೆ. ಈ ನಿರ್ಧಾರ ಸಂಬಂಧ ಸರ್ಕಾರ ಸಾಕಷ್ಟು ಕಟುಟೀಕೆ ಎದುರಿಸಬೇಕಾಯಿತು. ಇದೀಗ ಒಂದಷ್ಟು ಮಾನದಂಡ ರೂಪಿಸಿ, 5700 ಮಂದಿಗೆ ನೋಟಿಸ್ ನೀಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ಪಡಿತರ ಚೀಟಿ ಅನರ್ಹಗೊಳಿಸುವ ಧಾವಂತದಲ್ಲಿ ಸರ್ಕಾರ ಒಂದಷ್ಟು ಮಾನದಂಡ ರೂಪಿಸಿದೆ. ಪ್ರತಿ ದಿನ ಒಬ್ಬ ಕಾರ್ಮಿಕನ ಕೂಲಿ ಕೆಲಸ 500 ರೂಪಾಯಿ ಎಂದುಕೊಂಡರೆ ವಾರ್ಷಿಕ 1.80 ಲಕ್ಷ ರೂಪಾಯಿ ಆದಾಯ ಆಗುತ್ತದೆ. ಪಡಿತರ ಇಲಾಖೆ 1.20 ಲಕ್ಷ ಆದಾಯ ಹೊಂದಿರುವವರ ಬಿಪಿಎಲ್ ಕಾರ್ಡ್ (BPL Card) ರದ್ದಿಗೆ ಮುಂದಾಗಿದೆ. ಬಡವರ ವಿರೋಧಿ ನಿಲುವು ತಾಳಿದೆ ಎಂಬ ಆರೋಪ ಕೇಳಿ ಬಂದಿದೆ.

5700 Families Get Ration Card Cancellation Notice Karave Protest in This Talluk

ಹೌದು, 5700 ಮಂದಿಗೆ ಬಡವರಿಗೆ ಇಲಾಖೆ ಪಡಿತರ ಚೀಟಿ ರದ್ದು (Ration Card) ನೋಟಿಸ್ ನೀಡಿದೆ. ಬಿಪಿಎಲ್ ಕಾರ್ಡ್ (BPL Card) ರದ್ದಿಗೆ ಹುನ್ನಾರ ನಡೆಸಿದೆ ಎಂದು ಆರೋಪಿಸಿದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ದೊಡ್ಡಬಳ್ಳಾಪುರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು. ತಾಲೂಕು ಕಚೇರಿ ಮುಂದೆ ಜಮಾಯಿಸಿದ ಕರವೇ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಾಜ್ಯದಲ್ಲಿ ಸರ್ಕಾರ ಪಡಿತರ ಚೀಟಿ ರದ್ದು ಪ್ರಕ್ರಿಯೆ ಮುಂದುವರಿಸಿದೆ. ಇದೀಗ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 2873 ಅಂತ್ಯೋದಯ ಕಾರ್ಡ್‌ಗಳು ಇವೆ. 4,470 ಎಪಿಎಲ್ ಕಾರ್ಡ್‌ಗಳು (APL Card) ಮತ್ತು 66,120 ಬಿಪಿಎಲ್ ಕಾರ್ಡ್‌ಗಳು ಇವೆ. ರೇಷನ್ ಕಾರ್ಡ್ ರದ್ದು ಪ್ರಕ್ರಿಯೆಯ ಭಾಗವಾಗಿ ಅವೈಜ್ಞಾನಿಕ ಮಾನದಂಡ ರೂಪಿಸಿ ರದ್ದಿಗೆ ಮುಂದಾಗಿದೆ. ಬಡವರ ವಿರೋಧಿ ಮನಸ್ಥಿತಿ ತಾಳಿ, ನೋಟಿಸ್ ಜಾರಿ ಮಾಡಿದೆ ಎಂದು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಘಟಕದ ಅಧ್ಯಕ್ಷ ಹನಾಮ್ ವೆಂಕಟೇಶ್ ಅವರು ಸೇರಿದಂತೆ ಮುಖಂಡರು ದೂರಿದರು.

ನೋಟಿಸ್ ನೀಡಿದ್ದು ಯಾರಿಗೆ?, ಏನಿದು ಮಾನದಂಡ?

ಸಾವಿರ ಚದರ ಅಡಿಯಲ್ಲಿ ಮನೆ ಹೊಂದಿರುವವರು, 125 ಸಿಸಿ ಬೈಕ್ ಹೊಂದಿರುವವರು ಹಾಗೂ ವಾರ್ಷಿಕ 1.20 ಲಕ್ಷ ಆದಾಯ ಹೊಂದಿರುವವರು ಬಿಪಿಎಲ್ ಕಾರ್ಡ್ ರದ್ದು ಮಾಡಲು ನೋಟಿಸ್ ನೀಡಿರುವುದನ್ನು ಕರವೇ ಕಾರ್ಯಕರ್ತರು ಪ್ರಶ್ನಿಸಿದರು. ಸರ್ಕಾರದ ನಡೆ ವಿರುದ್ಧ ಕಿಡಿ ಕಾರಿದರು.

ಸರ್ಕಾರ ಬಡವರ ವಿರೋಧಿ ನೀತಿ, ತಾತ್ಸಾರ ಭಾವನೆ ತೋರಿಸುತ್ತಿದೆ. ಇಂತಹ ನಿರ್ಧಾರಗಳಿಂದ ಬಡವರು ಬೀದಿಗೆ ಬೀಳಬೇಕಾಗುತ್ತದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಬಡವರು ಬೀದಿಗಿಳಿದು ಪ್ರತಿಭಟಿಸಲು ಮುಂದಾದರೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

Previous Post Next Post