ಪಿಯುಸಿ/ಪದವಿ ಪಾಸಾದವರಿಗೆ ಕೆಇಎ ನಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ

ಕರ್ನಾಟಕದ ಸ್ಪರ್ಧಾರ್ಥಿಗಳಿಗೆ ಬಹುಕಾಲದ ನಿರೀಕ್ಷೆಯ ಬಳಿಕ ಸಿಹಿ ಸುದ್ದಿ ಬಂದಿದೆ. ಕಳೆದ ಒಂದು ವರ್ಷದಿಂದ ಹೊಸ ನೇಮಕಾತಿ ಪ್ರಕಟಣೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಶೀಘ್ರವೇ ವಿವಿಧ ಇಲಾಖೆಗಳ ನೂರಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲು ಸಜ್ಜಾಗಿದೆ. ಈ ಕುರಿತು ಕೆಇಎ ಈಗಾಗಲೇ ಅಧಿಸೂಚನೆ ಕರಡು ಪ್ರಕಟಿಸಿದ್ದು, ಅಗತ್ಯ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಶೀಘ್ರದಲ್ಲೇ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್(Online) ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ನೇಮಕಾತಿ ಪ್ರಕ್ರಿಯೆಯ ಉದ್ದೇಶ

ರಾಜ್ಯ ಸರ್ಕಾರದ ಹಲವು ಇಲಾಖೆಗಳಲ್ಲಿ ಕಳೆದ ವರ್ಷದಿಂದ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಈ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ. ಎಫ್‌ಡಿಎ (First Division Assistant), ಎಸ್‌ಡಿಎ (Second Division Assistant) ಸೇರಿದಂತೆ ಅನೇಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆ(Competitive examination) ಮುಖಾಂತರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಾಗಿ ಸ್ಪಷ್ಟಪಡಿಸಿದೆ.

ಹುದ್ದೆಗಳ ವಿವರ ಮತ್ತು ಖಾಲಿ ಸ್ಥಾನಗಳ ಸಂಖ್ಯೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ – 18

ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ -14

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ -40

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ – 19

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ -63

ಕೃಷಿ ಮಾರಾಟ ಇಲಾಖೆ – 180

ತಾಂತ್ರಿಕ ಶಿಕ್ಷಣ ಇಲಾಖೆ – 50

ಶಾಲಾ ಶಿಕ್ಷಣ ಇಲಾಖೆ -10

ಒಟ್ಟಾರೆ ನೂರಾರು ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆ ಇದೆ.

ಪ್ರಕಟವಾಗಲಿರುವ ಹುದ್ದೆಗಳ ಪಟ್ಟಿ

ಪ್ರಥಮ ದರ್ಜೆ ಸಹಾಯಕರು (FDA) – 84 ಹುದ್ದೆಗಳು

ದ್ವಿತೀಯ ದರ್ಜೆ ಸಹಾಯಕರು (SDA) – 44 ಹುದ್ದೆಗಳು

ಮಾರಾಟ ಸಹಾಯಕರು – 75 ಹುದ್ದೆಗಳು

ಸಹಾಯಕ ಅಭಿಯಂತರರು – 15 ಹುದ್ದೆಗಳು

ಲೆಕ್ಕಪತ್ರ ಹಿರಿಯ ಮತ್ತು ಕಿರಿಯ ಅಧಿಕಾರಿಗಳು – 14 ಹುದ್ದೆಗಳು

ನಿರ್ವಾಹಕರು (Supervisor) – 60 ಹುದ್ದೆಗಳು

ಗ್ರಂಥಪಾಲಕರು – 10 ಹುದ್ದೆಗಳು

ಸಹಾಯಕ ಸಂಚಾರ ನಿರೀಕ್ಷಕರು – 19 ಹುದ್ದೆಗಳು

ವೇತನ ಶ್ರೇಣಿ

ಪ್ರಥಮ ದರ್ಜೆ ಸಹಾಯಕ:₹27,650 – 52,650

ದ್ವಿತೀಯ ದರ್ಜೆ ಸಹಾಯಕ: ₹21,400 – 42,000

ಹಿರಿಯ ಲೆಕ್ಕಾಧಿಕಾರಿ: ₹40,900 – 78,200

ಕಿರಿಯ ಲೆಕ್ಕಾಧಿಕಾರಿ: ₹61,300 – 1,12,900

ಸಹಾಯಕ ಅಭಿಯಂತರ: ₹43,100 – 83,900

ಗ್ರಂಥಪಾಲಕ: ₹33,450 – 62,600

ಮಾರಾಟ ಸಹಾಯಕ: ₹34,100 – 67,600

ಸಹಾಯಕ ಸಂಚಾರ ನಿರೀಕ್ಷಕ: ₹22,390 – 33,320

ನಿರ್ವಾಹಕ: ₹18,660 – 25,300

ವಿದ್ಯಾರ್ಹತೆ

ಪ್ರಥಮ ದರ್ಜೆ ಸಹಾಯಕ (FDA): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ.

ದ್ವಿತೀಯ ದರ್ಜೆ ಸಹಾಯಕ / ಮಾರಾಟ ಸಹಾಯಕ / ನಿರ್ವಾಹಕ: ದ್ವಿತೀಯ ಪಿಯುಸಿ ಅಥವಾ ಸಮಾನ ಪ್ರಮಾಣಪತ್ರ.

ಸಹಾಯಕ ಲೆಕ್ಕಿಗ(Assistant Accountant): ವಾಣಿಜ್ಯಶಾಸ್ತ್ರದಲ್ಲಿ ಪದವಿ.

ನಿರ್ವಾಹಕರು: ಮಾನ್ಯ ಬ್ಯಾಡ್ಜ್ ಹೊಂದಿರಬೇಕು.

ದೈಹಿಕ ಅರ್ಹತೆ(Physical Eligibility):

ನಿರ್ವಾಹಕ ಹುದ್ದೆಗಳಿಗೆ:

ಪುರುಷ ಅಭ್ಯರ್ಥಿಗಳು – ಕನಿಷ್ಠ 160 ಸೆ.ಮೀ ಎತ್ತರ.

ಮಹಿಳಾ ಅಭ್ಯರ್ಥಿಗಳು – ಕನಿಷ್ಠ 150 ಸೆ.ಮೀ ಎತ್ತರ.

ಅರ್ಜಿ ಸಲ್ಲಿಸುವ ಮೊದಲು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಪ್ರಮಾಣಪತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಪರಿಶೀಲಿಸಲು ಸಲಹೆ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

ಅಧಿಸೂಚನೆ ಅಧಿಕೃತವಾಗಿ ಹೊರಬಂದ ನಂತರ ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್ (https://cetonline.karnataka.gov.in/kea) ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಯ ಪ್ರಕಾರ ಪರೀಕ್ಷಾ ಶುಲ್ಕ, ಪರೀಕ್ಷಾ ದಿನಾಂಕ ಮತ್ತು ವೇಳಾಪಟ್ಟಿ ಪ್ರತ್ಯೇಕವಾಗಿ ಪ್ರಕಟಿಸಲಾಗುವುದು.

ಸ್ಪರ್ಧಾರ್ಥಿಗಳಿಗೆ ಹೊಸ ಅವಕಾಶ

ಹಿಂದಿನ ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದ್ದರಿಂದ ಹಲವಾರು ಸ್ಪರ್ಧಾರ್ಥಿಗಳು ನಿರಾಶರಾಗಿದ್ದರು. ಇದೀಗ ಕೆಇಎ ನೇಮಕಾತಿ ಆರಂಭಿಸುವುದು ಅವರಿಗೊಂದು ಹೊಸ ಪ್ರೇರಣೆ. ಸರ್ಕಾರದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಲು ಇದು ಪ್ರಮುಖ ಅವಕಾಶವಾಗಲಿದೆ.

ಕೆಇಎ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಪ್ರಕಟಿಸುವ ನಿರೀಕ್ಷೆಯಿದೆ. ಆದ್ದರಿಂದ, ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ದಾಖಲೆಗಳು, ಅನುಭವ ಪತ್ರಗಳು ಹಾಗೂ ಅಗತ್ಯ ಪ್ರಮಾಣಪತ್ರಗಳನ್ನು ಸಿದ್ಧಪಡಿಸಿಕೊಳ್ಳುವುದು ಉತ್ತಮ. ಈ ಬಾರಿ ಪ್ರಕಟವಾಗುವ ನೇಮಕಾತಿ ಪ್ರಕ್ರಿಯೆ ಸಾವಿರಾರು ಯುವಕರಿಗೆ ಸರ್ಕಾರಿ ನೌಕರಿಯ ಕನಸನ್ನು ನನಸಾಗಿಸುವ ಸಾಧ್ಯತೆ ಇದೆ.


Previous Post Next Post