Loreal India Scholarship-ಲೋರಿಯಲ್ ಇಂಡಿಯಾ ವತಿಯಿಂದ ವಿದ್ಯಾರ್ಥಿಗಳಿಗೆ ರೂ 62,500/- ಸ್ಕಾಲರ್‌ಶಿಪ್

ಲೋರಿಯಲ್ ಇಂಡಿಯಾ ಕಂಪನಿಯ CSR ಅನುದಾನದಲ್ಲಿ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣಕ್ಕೆ ಉತೇಜನ ನೀಡಲು ಲೋರಿಯಲ್ ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ಪ್ರೋಗ್ರಾಂ ಅಡಿಯಲ್ಲಿ(Loreal India Scholarship) ವಿದ್ಯಾರ್ಥಿವೇತನವನ್ನು ಒದಗಿಸಲು ಅರ್ಹ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಲೋರಿಯಲ್ ಇಂಡಿಯಾ 12 ನೇ ತರಗತಿಯಲ್ಲಿ ಉತ್ತೀರ್ಣರಾದ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಯುವತಿಯರಿಗಾಗಿ ಲೋರಿಯಲ್ ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ಪ್ರೋಗ್ರಾಂ(Loreal India Scholarship Application) 2025-26 ಅಡಿಯಲ್ಲಿ ಸ್ಕಾಲರ್‌ಶಿಪ್ ಪಡೆಯಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಲೋರಿಯಲ್ ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ಪ್ರೋಗ್ರಾಂ ವಿದ್ಯಾರ್ಥಿವೇತನ(Loreal India Scholarship Online Application) ಕಾರ್ಯಕ್ರಮದಡಿಯಲ್ಲಿ ಯಾರೆಲ್ಲ ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಸಲ್ಲಿಸಬಹುದು? ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳೇನು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೇರಿದಂತೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ.

Loreal India Scholarship-2025 Eligibility-ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಲೋರಿಯಲ್ ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ಪ್ರೋಗ್ರಾಂ ವಿದ್ಯಾರ್ಥಿವೇತನ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತೆಯನ್ನು ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಮಹಿಳಾ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅರ್ಜಿದಾರ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ INR 6,00,000 ಮೀರಬಾರದು.

ಯುಜಿ ವಿದ್ಯಾರ್ಥಿಗಳು: 12 ನೇ ತರಗತಿಯಲ್ಲಿ (ವಿಜ್ಞಾನ ವಿಭಾಗ) ಕನಿಷ್ಠ 85% ಅಂಕಗಳನ್ನು ಗಳಿಸಿರಬೇಕು ಮತ್ತು ವಿಜ್ಞಾನ ಸಂಬಂಧಿತ ಕ್ಷೇತ್ರದಲ್ಲಿ ಪದವಿಪೂರ್ವ ಪದವಿಯನ್ನು ಪಡೆಯುತ್ತಿರಬೇಕು (ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ).

ಸ್ನಾತಕೋತ್ತರ/ಪಿಎಚ್‌ಡಿ ವಿದ್ಯಾರ್ಥಿಗಳು: ತಮ್ಮ ಪದವಿಪೂರ್ವ ಕೋರ್ಸ್‌ನಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು ಮತ್ತು ತಂತ್ರಜ್ಞಾನ, ವಿಜ್ಞಾನ, ಔಷಧ, ಜೀವ ವಿಜ್ಞಾನ, ಜೈವಿಕ ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿಯನ್ನು (ಯಾವುದೇ ವರ್ಷ) ಪಡೆಯುತ್ತಿರಬೇಕು (ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ).

ಲೋರಿಯಲ್ ಇಂಡಿಯಾ ಮತ್ತು ಬಡ್ಡಿ4ಸ್ಟುಡಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರ ಮಕ್ಕಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ: ಪಿಜಿ/ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಅಂತಿಮ ಆಯ್ಕೆಯು ಭಾರತದ ಮಾನ್ಯತೆ ಪಡೆದ ಕಾಲೇಜು/ವಿಶ್ವವಿದ್ಯಾಲಯದಿಂದ ಪ್ರವೇಶ ಪತ್ರವನ್ನು ಸಲ್ಲಿಸುವುದರ ಮೇಲೆ ಅವಲಂಬಿತವಾಗಿರುತ್ತದೆ.

Loreal India Scholarship Amount-ಎಷ್ಟು ಮೊತ್ತದ ವಿದ್ಯಾರ್ಥಿವೇತನವನ್ನು ಒದಗಿಸಲಾಗುತ್ತದೆ?

ಲೋರಿಯಲ್ ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ಪ್ರೋಗ್ರಾಂ ಅಡಿಯಲ್ಲಿ ಯುಜಿ ವಿದ್ಯಾರ್ಥಿಗಳು ಅಂದರೆ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ರೂ 62,500/- ಸ್ಥಿರ ಸ್ಕಾಲರ್‌ಶಿಪ್ ನೀಡಲಾಗುತ್ತದೆ, ಮತ್ತು

ಸ್ನಾತಕೋತ್ತರ ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳಳಿಗೆ ರೂ 1,00,000/- ಸ್ಕಾಲರ್‌ಶಿಪ್ ನೀಡಲಾಗುತ್ತದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 03 ನವೆಂಬರ್ 2025

How To Apply For Loreal India Scholarship-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ವಿದ್ಯಾರ್ಥಿನಿಯರು ಲೋರಿಯಲ್ ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ಪ್ರೋಗ್ರಾಂ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ತಮ್ಮ ಮೊಬೈಲ್ ಮೂಲಕವೇ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step-1: ಮೊದಲಿಗೆ ಈ Scholarship Application ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ "www.buddy4study.com" ಜಾಲತಾಣವನ್ನು ಭೇಟಿ ಮಾಡಿ.

Step-2: ಬಳಿಕ ಈ ಪೇಜ್ ನಲ್ಲಿ ತೋರಿಸುವ "Apply Now" ಮೇಲೆ ಕ್ಲಿಕ್ ಮಾಡಿ ಈ ವೆಬ್ಸೈಟ್ ಗೆ ಮೊದಲ ಬಾರಿ ಭೇಟಿ ಮಾಡುತ್ತಿರುವವರು ಪ್ರಥಮ ಹಂತದಲ್ಲಿ ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಳ್ಳಿ ಇದಾದ ಬಳಿಕ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಅದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-3: ಅರ್ಜಿ ನಮೂನೆ ತೆರೆದುಕೊಂಡ ಬಳಿಕ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

Documents For Loreal India Scholarship-ಅರ್ಜಿ ಸಲ್ಲಿಸಲು ದಾಖಲೆಗಳು:

ಲೋರಿಯಲ್ ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ಪ್ರೋಗ್ರಾಂ ವಿದ್ಯಾರ್ಥಿವೇತನ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಆಸಕ್ತ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳ ಪಟ್ಟಿ:

ವಿದ್ಯಾರ್ಥಿಯ ಆಧಾರ್ ಕಾರ್ಡ.

ಬ್ಯಾಂಕ್ ಪಾಸ್ ಬುಕ್ ಪ್ರತಿ.

ವಿದ್ಯಾರ್ಥಿಯ ಪೋಟೋ.

ಗುರುತಿನ ಚೀಟಿ.

ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ.

ಶಾಲಾ ಪ್ರವೇಶ ಪ್ರಮಾಣ ಪತ್ರ.

ಹಿಂದಿನ ಶೈಕ್ಷಣಿಕ ಸಾಲಿನ ಅಂಕಪಟ್ಟಿ.

Previous Post Next Post