Jio Introduces JioBharat Phones with Safety-First Capability at IMC 2025:-ಇಂಡಿಯಾ ಮೊಬೈಲ್ ಕಾಂಗ್ರೆಸ್- 2025 ಬಹಳ ಮುಖ್ಯವಾದ ಸಮಾವೇಶ ಆಗಿದೆ. ಇದರಲ್ಲಿ ಜಿಯೋದಿಂದ (Jio) ಹೊಸದಾದ ಸುರಕ್ಷತೆ- ಮೊದಲು ಸಾಮರ್ಥ್ಯವನ್ನು ಅದರ ಜಿಯೋಭಾರತ್ ಫೋನ್ (Jio Bharath Phone) ಗಳಲ್ಲಿ ಅನಾವರಣ ಮಾಡಲಾಯಿತು. ತುಂಬ ಪ್ರಮುಖ ಎನಿಸುವ ಬೆಳವಣಿಗೆ ಇದಾಗಿದ್ದು, ಇದು ಹೇಗೆ ರೂಪುಗೊಂಡಿದೆ ಅಂದರೆ, ಪ್ರತಿ ಭಾರತೀಯ ಕುಟುಂಬ ಇದರಿಂದಾಗಿ ಬೆಸೆದುಕೊಳ್ಳುತ್ತದೆ. ಸುರಕ್ಷಿತವಾಗಿ ಇರುತ್ತದೆ ಮತ್ತು ಚಿಂತೆಮುಕ್ತವಾಗುತ್ತದೆ. ಈ ನಾವೀನ್ಯತೆ ಮೂಲಕವಾಗಿ ಜಿಯೋ ಸ್ಮಾರ್ಟ್ ಕನೆಕ್ಟಿವಿಟಿ ಹಾಗೂ ಡಿಜಿಟಲ್ ಕೇರ್ ಅನ್ನು ದೇಶದ ಬಹಳ ವಿಶ್ವಾಸಾರ್ಹ, ಕೈಗೆಟುಕುವ ಬೆಲೆಯ ಫೋನ್ ಗೆ ತಂದಿದೆ.
ಜಿಯೋ ಭಾರತ್
ಈ ಸುರಕ್ಷತೆ ಮೊದಲು ಎಂಬ ಸಲ್ಯೂಷನ್ ನಿಂದಾಗಿ ಕುಟುಂಬಗಳು ಮನೆಯಲ್ಲಿನ ಮಕ್ಕಳು, ಹಿರಿಯ ಪೋಷಕರಿಗೆ ಮತ್ತು ಅವಲಂಬಿತರ ಜೊತೆಗೆ ನಿಕಟವಾಗಿ ಇರುವುದು ಸಾಧ್ಯವಾಗುತ್ತದೆ. ಅವರು ಎಲ್ಲೇ ಇದ್ದರೂ ಸರಳ, ಸುರಕ್ಷಿತವಾಗಿ ಮತ್ತು ಸದಾ ಜೊತೆಯಲ್ಲಿ ಇರುವ ಅನುಭವದೊಂದಿಗೆ ಇರಬಹುದು.
ಅದರ ಮುಖ್ಯ ಸಾಮರ್ಥ್ಯ ಏನೆಂದರೆ, “ಸ್ಥಳದ ನಿಗಾ”. ಅಂದರೆ, ಯಾವಾಗ ಪ್ರೀತಿಪಾತ್ರರು- ಆಪ್ತರು ದೂರದ ಸ್ಥಳಗಳಿಗೆ ತೆರಳಿದಾಗ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಸಿಗುತ್ತಾ ಇರುತ್ತದೆ. ಅವರಿಗೆ ಯಾರು ಕರೆ ಮಾಡಬಹುದು, ಮೆಸೇಜ್ ಮಾಡಬಹುದು ಅಂತ ನಿರ್ವಹಣೆ ಮಾಡಬಹುದು, ಇನ್ನು ಅಪರಿಚಿತ ಕರೆಗಳನ್ನು ಬ್ಲಾಕ್ ಮಾಡಬಹುದು ಹಾಗೂ ಅನಗತ್ಯ ಕಿರಿಕಿರಿಗಳನ್ನು ನಿರ್ಬಂಧಿಸಬಹುದಾಗಿದೆ.
ಇದಕ್ಕಾಗಿ “ಬಳಕೆ ನಿರ್ವಹಣೆ” ಮಾಡಬಹುದು. ಬಳಕೆ ಮಾಡುವ ಸಾಧನದ ಬ್ಯಾಟರಿ ಮತ್ತು ನೆಟ್ ವರ್ಕ್ ಗಳ ರಿಯಲ್ ಟೈಮ್ ಒಳನೋಟಗಳನ್ನು ಪಡೆಯಬಹುದು. ಹಾಗೇ ನೆಟ್ ವರ್ಕ್ ಪ್ರಬಲವಾಗಿದೆಯೇ ಎಂಬುದು ತಿಳಿದುಕೊಳ್ಳಬಹುದು. ಇದರಿಂದಾಗಿ ಅಡೆತಡೆಯಿಲ್ಲದ ಕನೆಕ್ಟಿವಿಟಿ ಖಾತ್ರಿಯಾಗುತ್ತದೆ. ಇದು ಫೋನ್ ಮತ್ತು ಸೇವಾ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ.
ಏಳು ದಿನಗಳ ಬ್ಯಾಟರಿ ಬ್ಯಾಕಪ್ ದೊರೆಯುವುದರಿಂದಾಗಿ ಜಿಯೋಭಾರತ್ ಬಳಕೆದಾರರು ಎಲ್ಲೇ ಇದ್ದರೂ ಹಾಗೂ ಯಾವುದೇ ಸಮಯದಲ್ಲಿ ತಮ್ಮ ಪ್ರೀತಿಪಾತ್ರರ ಸಂಪರ್ಕಕ್ಕೆ ಸಿಗುತ್ತಾರೆ.
ಯಾವುದೇ ಸಾಮಾಜಿಕ ಮಾಧ್ಯಮದ ಗಮನ ಸೆಳೆಯುವಿಕೆ ಇಲ್ಲದೆ ಮಕ್ಕಳು ಸಂಪರ್ಕದಲ್ಲಿ ಇರುತ್ತಾರೆ. ಇದರ ಜೊತೆಗೆ ಸ್ವಾರ್ಟ್ ಲೊಕೇಷನ್ ಹಾಗೂ ಕರೆ ನಿರ್ವಹಣೆ ಸಹ ಇದೆ. ಇದರಿಂದ ಮಕ್ಕಳಿಗೆ ದೊಡ್ಡ ಮಟ್ಟದ ಪ್ರಯೋಜನ ಇದೆ. ಇನ್ನು ಹಿರಿಯ ಪೋಷಕರಿಗೆ ಬಳಸಲು ಸುಲಭವಾದ ಫೋನ್ ಗಳು ಜೊತೆಗೆ ಆರೋಗ್ಯ ಮತ್ತು ಲೊಕೇಷನ್ ಬಗೆಗಿನ ಅಪ್ ಡೇಟ್ ಸಹ ಕುಟುಂಬ ಸದಸ್ಯರಿಗೆ ದೊರೆಯುತ್ತದೆ.