Food kit-ಬಿಪಿಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್! ಅಕ್ಕಿ ಬದಲು ಇಂದಿರಾ ಕಿಟ್ ವಿತರಣೆ ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದ್ದ 10 ಕೆಜಿ ಅಕ್ಕಿ ಬದಲಾಗಿ 5 ಕೆಜಿ ಅಕ್ಕಿ ನೀಡಿ ಇನ್ನುಳಿದ ಅಕ್ಕಿಯ ಬದಲಾಗಿ ಇಂದಿರಾ ಪೌಷ್ಠಿಕ ಆಹಾರ ಕಿಟ್(Integrated Nutrition and Dietary Initiative For Realizing Annabhagya)ವಿತರಣೆಯನ್ನು ಮಾಡಲು ಸರ್ಕಾರವು ನಿರ್ಧರಿಸಿದೆ. ಈ ಆಹಾರ ಕಿಟ್ ಅಲ್ಲಿ ಏನೆಲ್ಲಾ ಇದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ನಮ್ಮ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ವರ್ಗದ ಕುಟುಂಬಗಳು(Ration card food kit) ಹಾಗೂ ಬಡ ವರ್ಗದ ಜನರಿಗೆ ಆಹಾರ ಭದ್ರತೆಯನ್ನು ಕಾಪಾಡಿಕೊಳ್ಳುವುದು ಪ್ರಮುಖ ದಾಖಲೆಯಾಗಿದ್ದು, ಸರ್ಕಾರವು ಜಾರಿಗೆ ತಂದಿರುವ ಈ ಯೋಜನೆಯಡಿ ರೇಷನ್ ಕಾರ್ಡ ದಾರರಿಗೆ ಅಕ್ಕಿಯನ್ನು ವಿತರಣೆ ಮಾಡುವ ಬದಲು ಇಂದಿರಾ ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮವನು ಜಾರಿಗೆ ತರಲಾಗಿದೆ.

ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಟ ಮಾಡುವುದು(Indira Food Kit Scheme) ಸೇರಿದಂತೆ ಇನ್ನಿತರ ಬಗೆಯ ದುರ್ಬಳಕೆ ತಡೆದು ಬಡವರಿಗೆ ಪೌಷ್ಟಿಕ ಆಹಾರ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಇಂದಿರಾ ಆಹಾರ ಕಿಟ್ ಯೋಜನೆಯನ್ನು ಅನುಷ್ಟಾನಗೊಳಿಸೆದೆ.

ಜನರು ಅಕ್ಕಿಯ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿ ಪೌಷ್ಟಿಕಾಂಶಯುತ ಆಹಾರವನ್ನು ಜನತೆಗೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತಂದಿದ್ದು, ಯಾರೆಲ್ಲ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು? ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶವೇನು? ಈ ಆಹಾರ್ ಕಿಟ್ ನಲ್ಲಿ ಯಾವೆಲ್ಲ ಪದಾರ್ಥಗಳನ್ನು ಪಡೆದುಕೊಳ್ಳಬಹುದು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

What is Indira food kit-ಏನಿದು ಇಂದಿರಾ ಕಿಟ್‌? ಈ ಇಂದಿರಾ ಕಿಟ್ ನಲ್ಲಿ ಏನೆಲ್ಲಾ ಪಡೆಯಬಹುದು?

INDIRA ಎಂದರೆ Integrated Nutrition and Dietary Initiative For Realizing Annabhagya Beneficiaries ಎಂದರ್ಥ. ಅಂದರೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ, ಅದನ್ನು ಸಮಗ್ರ ಪೋಷಣೆ ಮತ್ತು ಆಹಾರ ಉಪಕ್ರಮ ಕಿಟ್ ಎಂದು ನಾಮಕರಣ ಮಾಡಿ ಜಾರಿಗೆ ತರಲು ನಿರ್ಧರಿಸಲಾಗಿದೆ.

ಈ ಹಿಂದಿನ ದಿನಗಳಲ್ಲಿ ಸರ್ಕಾರವು ವಿತರಿಸುವ ಆಹಾರ ಕಿಟ್‌ಗಳಲ್ಲಿ ಕೇವಲ ಅಕ್ಕಿಯಷ್ಟೇ ನೀಡಲಾಗುತ್ತಿತ್ತು. ಹೊಸ ಯೋಜನೆಯ ಅಡಿಯಲ್ಲಿ ಸರ್ಕಾರ ಆಹಾರ ಕಿಟ್ ರೂಪದಲ್ಲಿ ಪೂರಕ ಆಹಾರ ಪದಾರ್ಥಗಳನ್ನು ನೀಡಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಈ ಕಿಟ್ ನಲ್ಲಿ ಯಾವೆಲ್ಲ ಆಹಾರ ಪದಾರ್ಥಗಳಿವೆ ಎಂದು ಈ ಕೆಳಗೆ ತಿಳಿಸಲಾಗಿದೆ.

ತೊಗರಿ ಬೇಳೆ - 1 ಕೆಜಿ

ಹೆಸರುಕಾಳು- 1 ಕೆಜಿ

ಅಡುಗೆ ಎಣ್ಣೆ - 1 ಕೆಜಿ

ಸಕ್ಕರೆ - 1 ಕೆಜಿ

ಉಪ್ಪು- 1 ಕೆಜಿ

ಅಕ್ಕಿ-5 ಕೆಜಿ

ಈ ಕಿಟ್‌ಗಳನ್ನು ಕುಟುಂಬದ ಗಾತ್ರಕ್ಕೆ ಅನುಗುಣವಾಗಿ ಹಂಚಿಕೆ ಮಾಡಲಾಗುತ್ತಿದ್ದು, ಒಂದು ತಿಂಗಳಿಗೆ ಅಗತ್ಯವಾದ ಆಹಾರ ಸಾಮಗ್ರಿಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.

ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲು ಆಹಾರದ ಕಿಟ್:

ಪ್ರಸ್ತುತ ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದ್ದ 10 ಕೆಜಿ ಅಕ್ಕಿಯ ಬದಲಾಗಿ5 ಕೆಜಿ ಅಕ್ಕಿ ಹಾಗೂ ಹೆಚ್ಚುವರಿಯಾಗಿ ವಿತರಣೆ ಮಾಡುತ್ತಿದ್ದ 5 ಕೆಜಿ ಅಕ್ಕಿಯನ್ನು ಬದಲಾಗಿ ಇಂದಿರಾ ಪೌಷ್ಟಿಕ ಆಹಾರ ಕಿಟ್ ಅನ್ನು ವಿತರಣೆ ಮಾಡಲು ಸರ್ಕಾರ ಮುಂದಾಗಿದೆ.

Who can get a Indira Food kit-ಇಂದಿರಾ ಆಹಾರ ಕಿಟ್ ಪಡೆಯಲು ಯಾರೆಲ್ಲ ಅರ್ಹರು?

ಇಂದಿರಾ ಆಹಾರ ಕಿಟ್ ಯೋಜನೆಯ ಅಡಿಯಲ್ಲಿ ಪ್ರಾಥಮಿಕ ಬಡತನ ರೇಖೆಗಿಂತ ಕೆಳಗಿರುವವರು (Below Poverty Line)ಅಂದರೆ ರೇಷನ್ ಕಾರ್ಡ್‌ ಹೊಂದಿದವರು ಕಿಟ್ ಅನ್ನು ಪಡೆಯಬಹುದು.

Purpose Of Indira Food Kit-ಇಂದಿರಾ ಆಹಾರ ಕಿಟ್ ವಿತರಣೆಯ ಉದ್ದೇಶ ಏನು?

ಬಡ ಕುಟುಂಬಗಳಿಗೆ ಸಮತೋಲನವಾದ ಪೌಷ್ಟಿಕ ಆಹಾರವನ್ನು ಒದಗಿಸುವುದು.

ಆಹಾರ ಭದ್ರತೆ ಮತ್ತು ಆಹಾರ ವೈವಿಧ್ಯತೆಯನ್ನು ಉತ್ತೇಜಿಸುವುದರ ಸಲುವಾಗಿ.

ಅಕ್ಕಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಪೌಷ್ಟಿಕ ಆಹಾರವನ್ನು ನೀಡುವ ಉದ್ದೇಶವಾಗಿ.

ಅಕ್ಕಿಯ ಜೊತೆಗೆ ಇತರ ಆಹಾರ ಪದಾರ್ಥಗಳನ್ನು ನೀಡುವುದರಿಂದ ಜನರಿಗೆ ಸಮತೋಲನ ಆಹಾರವನ್ನು ನೀಡುವ ಉದ್ದೇಶ.

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅಗತ್ಯವಾದ ಆಹಾರ ಸಾಮಾಗ್ರಿಗಳನ್ನು ಕಡಿಮೆ ದರದಲ್ಲಿ ನೀಡುವ ಉದ್ದೇಶ.

Uses Of Indira Food Kit-ಇಂದಿರಾ ಕಿಟ್ ನಿಂದಾಗುವ ಉಪಯೋಗಗಳೇನು?

ಆಹಾರ ಕಿಟ್‌ನಲ್ಲಿ ಒಳ್ಳೆಯ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸಲಾಗುತ್ತದೆ.

ಒಂದೇ ಕಿಟ್‌ನಲ್ಲಿ ಎಲ್ಲಾ ಅಗತ್ಯ ಪದಾರ್ಥಗಳು ದೊರೆಯುವುದರಿಂದ ಖರೀದಿಯ ತೊಂದರೆ ಕಡಿಮೆಯಾಗುತ್ತದೆ.

ಕಡಿಮೆ ಬೆಲೆಯಲ್ಲಿ ಆಹಾರ ಸಾಮಗ್ರಿಗಳು ಲಭ್ಯವಾಗುವುದರಿಂದ ಕುಟುಂಬಗಳಿಗೆ ಆರ್ಥಿಕ ಒತ್ತಡ ಕಡಿಮೆಯಾಗುತ್ತದೆ.

ಈ ಯೋಜನೆಯು ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಒದಗಿಸಲ್ಪಡುವುದರಿಂದ ಜನರಿಗೆ ಸಹಾಯವಾಗುತ್ತದೆ.

Previous Post Next Post