Gruhalakshmi Scheme: ರಾಜ್ಯದಲ್ಲಿ ಗೃಹಲಕ್ಷ್ಮಿಯರಿಗೆ ಭಾರೀ ನಿರಾಸೆ

Gruhalakshmi Scheme: ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು, ಪ್ರತಿ ಮನೆ ಯಜಮಾನಿ ಖಾತೆಗೆ 2,000 ರೂಪಾಯಿ ಹಾಕಲಾಗುತ್ತದೆ. ಆದರೆ, ಮೂರು ಕಂತುಗಳು ಬಾಕಿ ಇದ್ದು, ಇದು ದಸರಾಗೆ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ, ಇದೀಗ ಈ ನಿರೀಕ್ಷೆ ಹುಸಿಯಾದಂತಾಗಿದೆ. ಹಾಗಾದ್ರೆ, ಇದಕ್ಕೆ ಪ್ರಮುಖ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಮೂರು ಕಂತುಗಳ ಗೃಹಲಕ್ಷ್ಮಿ ಹಣ ಬಾಕಿ ಇದ್ದು, ಫಲಾನುಭವಿಗಳು ಈ ಹಣ ದಸರಾ ಹಬ್ಬಕ್ಕೆ ಬರುತ್ತದೆ ಎಂದು ಕಾದು ಕುಳಿತಿದ್ದರು. ಆದರೆ, ಇದೀಗ ತಿಂಗಳು ಮುಗಿಯುತ್ತಾ ಬರುತ್ತಿದ್ದು, ದಸರಾ ಕೂಡ ಇನ್ನೆರಡು ದಿನಗಳಲ್ಲಿ ಮುಕ್ತಾಯ ಆಗಲಿದೆ. ಆದರೂ, ಈವರೆಗೂ ಯಾವುದೇ ಹಣ ಜಮೆಯಾಗಿಲ್ಲ ಎಂದು ಮಹಿಳೆಯರು ಅಸಮಾಧಾನ ಹೊರಹಾಕುತ್ತಿದ್ದಾರೆ.

Delay in Gruhalakshmi Scheme Payments Leaves Beneficiaries Disappointed Ahead of Festivals

ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುಲ್ಲ. ಇದು ದಸರಾಗೆ ಬರುತ್ತದೆ ಎಂದು ಕಾಯುತ್ತಿದ್ದ ಫಲಾನುಭವಿಗಳಿಗೆ ನಿರಾಸೆ ಮೂಡಿದಂತಾಗಿದೆ. ಫಲಾನುಭವಿಗಳ ಖಾತೆಗೆ ಜೂನ್‌ನಲ್ಲಿ 2,000 ರೂಪಾಯಿ ಜಮೆ ಆಗಿದ್ದು ಬಿಟ್ಟರೆ ಬಳಿಕ ಜುಲೈ, ಆಗಸ್ಟ್‌, ಸೆಪ್ಟೆಂಬರ್‌ ಕಂತುಗಳ ಹಣ ಬಂದಿಲ್ಲ.

ಈ ಯೋಜನೆಯೂ 2023ರ ಆಗಸ್ಟ್‌ನಲ್ಲಿ ಯೋಜನೆ ಶುರುವಾಗಿದ್ದು, ಬಳಿಕ ಕೆಲವು ತಿಂಗಳುಗಳ ಕಾಲ ನಿರಂತರ ಹಣ ಜಮೆ ಮಾಡಲಾಯಿತು. ನಂತರದಲ್ಲಿ ಕಂತುಗಳ ಬಾಕಿ ಉಳಿಸಿಕೊಂಡು ಬರಲಾಗಿದ್ದು, ಇದು ಫಲಾನುಭವಿಗಳ ಕೋಪಕ್ಕೆ ಗುರಿ ಆದಂತಾಗಿದೆ. ಕಳೆದ ಮೂರು ತಿಂಗಳ ಕಂತನ್ನು ಒಂದೇ ಹಾಕಿದರೆ, ದಸರಾ ಹಾಗೂ ದೀಪಾವಳಿಯನ್ನು ಸಂಭ್ರಮದಿಂದ ಆಚರಣೆ ಮಾಡಲಿ ಮಹಿಳೆಯರು ಕಾದಿದ್ದರು. ಅದರೆ, ಇದೀಗ ದಸರಾ ಮುಗಿಯಲು ಇನ್ನೂ ಕೇವಲ ಎರಡು ದಿನ ಮಾತ್ರ ಬಾಕಿಯಿದೆ. ಇನ್ನೂ ಮುಂಬರುವ ದೀಪಾವಳಿಗೆ ಜಮೆಯಾಗಲಿದೆ ಎನ್ನುವ ಭರವಸೆಯಲ್ಲಿದ್ದಾರೆ.

ಬಹುತೇಕ ಕುಟುಂಬಗಳಿಗೆ ಗೃಹಲಕ್ಷ್ಮಿ ಹಣ ಆಧಾರವಾಗಿದೆ. ಆದರೆ, ಕಂತುಗಳು ಬಾಕಿ ಉಳಿದರೆ, ಇದನ್ನೇ ನಂಬಿಕೊಂಡಿರುವ ಕುಟುಂಬಗಳಿಗೆ ಕಲ್ಲು ಬಿದ್ದಂತಾಗಲಿದೆ. ಹಾಗೆಯೇ ಇದೀಗ ಮೂರು ತಿಂಗಳ ಹಣ ಬರಬೇಕಿತ್ತು ಇದು ದೀಪಾವಳಿದಾಗರೂ ಜಮೆಯಾಗಲಿದೆಯಾ ಎಂದು ಕಾಯುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಗೃಹಲಕ್ಷ್ಮೀ ಹಣ, ಬಹುತೇಕ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಿದಂತಾಗಿದೆ.

ಅದರಲ್ಲೂ ಬಡವರು, ಮಧ್ಯಮ ವರ್ಗದ ಕುಟುಂಗಳು ಈ ಹಣದಿಂದ ಕುಟುಂಬವನ್ನು ನಡೆಸುತ್ತಿರುವ ಉದಾಹರಣೆಗಳಿವೆ. ಹಲವು ಕುಟುಂಬಗಳಲ್ಲಿ ಮಹಿಳೆಯರೇ ಸಂಸಾರವನ್ನು ನಡೆಸುತ್ತಿದ್ದು, ಇಂತಹವರಿಗೆ ಗೃಹಲಕ್ಷ್ಮಿ ಹಣ ಮನೆಗೆ ಬೇಕಾದ ಸಾಮಗ್ರಿಗಳನ್ನು ಕೊಂಡುಕೊಳ್ಳಲು ತುಂಬಾ ಉಪಯುಕ್ತವಾಗಿದೆ. ಆದರೆ, ಇದೀಗ ಮೂರು ಕಂತುಗಳು ನಿಂತ ಕಾರಣ ಹಲವಾರು ಮಹಿಳೆಯರ ಕೈ ಕಟ್ಟಿಹಾಕಿದಂತಾಗಿದೆ.

ಮತ್ತೊಂದೆಡೆ ನೋಡೋದಾದ್ರೆ, ಗೃಹಲಕ್ಷ್ಮೀ ಹಣ ಫಲಾನುಭವಿಗಳ ಖಾತೆಗೆ ಒಂದೆರಡು ದಿನಗಳಲ್ಲಿ ಜಮೆ ಆಗುವುದು ಅನುಮಾನ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೀಗ ರಾಜ್ಯದಲ್ಲಿ ಅನರ್ಹ ಬಿಪಿಎಲ್‌ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆ ಮುಂದುವರೆದಿದೆ. ಈ ವೇಳೆ ಅರ್ಹರ ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾಹಿಸಲಾಗಿದೆ. ಈ ವೇಳೆ ಉಂಟಾಗುವ ತಾಂತ್ರಿಕ ಸಮಸ್ಯೆಗಳಿಂದ ಗೃಹಲಕ್ಷ್ಮೀ ಹಣ ಬಿಡುಗಡೆ ವಿಳಂಬ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

Previous Post Next Post