Crop Loss Amount-ಬೆಳೆಹಾನಿ ಸಮೀಕ್ಷೆ ಬಳಿಕ ಪರಿಹಾರ ವಿತರಣೆ ಎಕರೆಗೆ ರೂ 17,000/- ಪರಿಹಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕಳೆದ 2 ವಾರದಲ್ಲಿ ಉತ್ತರಕರ್ನಾಟಕ ಭಾಗದ ಅನೇಕ ಜಿಲ್ಲೆಗಳಲ್ಲಿ ಅತೀಯಾದ ಮಳೆಯಿಂದಾಗಿ ದೊಡ್ಡ ಮಟ್ಟದ ಬೆಳೆ ಹಾನಿ(Bele Hani) ಉಂಟಾಗಿದ್ದು ಬೆಳೆ ಸಮೀಕ್ಷೆಯ ಬಳಿಕ ಬೆಳೆ ಹಾನಿ ಪರಿಹಾರವನ್ನು ವಿತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇನೆನ್ನು ಕೆಲವು ದಿನಗಳಲ್ಲೇ ಫಸಲಿಗೆ ಬರುತ್ತಿದ ಬೆಳೆಯು ಅಕಾಲಿಕ ಮಳೆಯಿಂದ ದೊಡ್ಡ ಮಟ್ಟ ಬೆಳೆ ಹಾನಿಗೆ(Bele Hani Parihara) ಒಳಗಾಗಿದ್ದು ರಾಜ್ಯ ಸರಕಾರದಿಂದ ಒದಗಿಸುವ ಬೆಳೆ ಹಾನಿ ಪರಿಹಾರವನ್ನು ಹೆಚ್ಚಿಸಬೇಕು ಎನ್ನುವ ಕೂಗು ಪ್ರತಿ ವರ್ಷ ಬೆಳೆ ಹಾನಿಯಾದ ಸಮಯದಲ್ಲಿ ಕೇಳಿಬರುವ ಪ್ರಮುಖ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಹಂಚಿಕೊಂಡಿರುವ ಪ್ರಮುಖ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ.

ನಿನ್ನೆ ಬೆಳಗಾವಿಯ ಸೂಪರ್ ಸ್ಪೆಷಾಲಿಷ್ಟ್ ಆಸ್ಪತ್ರೆಯ ಕಟ್ಟಡ, ಗೃಹ ವೈದ್ಯರ ವಸತಿ ನಿಲಯ ನಿರ್ಮಾಣಕ್ಕೆ ಶಿಲಾನ್ಯಾಸ, ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ನಗರ ಬಸ್ ನಿಲ್ದಾಣ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಪಿಎಂ ಮೇರು ಕಟ್ಟಡ ಕಾಮಗಾರಿಗಳು ಮತ್ತು ಹೆದ್ದಾರಿಯಿಂದ ವಿಶ್ವವಿದ್ಯಾನಿಲಯದ ರಸ್ತೆ ನಿರ್ಮಾಣ ಕಾಮಗಾರಿಗೆ ಬಿಮ್ಸ್ ಆವರಣದಲ್ಲಿ ಶಿಲಾನ್ಯಾಸ ನೆರವೇರಿಸಿ ವಿವಿಧ ಯೋಜನೆಯ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು ಬೆಳೆ ಹಾನಿ ಪರಿಹಾರ ವಿತರಣೆ ಕುರಿತು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಬೆಳೆ ಹಾನಿ ಪರಿಹಾರ(Bele Parihara) ವಿತರಣೆ ಮಾಡಲು ರಾಜ್ಯ ಸರಕಾರದಿಂದ ಅನುಸರಿಸುವ ಕ್ರಮಗಳೇನು? ಪ್ರತಿ ಎಕರೆಗೆ ಎಷ್ಟು ಮೊತ್ತದ ಬೆಳೆ ಹಾನಿ ಪರಿಹಾರವನ್ನು ವಿತರಣೆ ಮಾಡಲಾಗುತ್ತದೆ? ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Bele Parihara-ಸಮೀಕ್ಷೆ ಬಳಿಕ ಪರಿಹಾರ ವಿತರಣೆ ಎಕರೆಗೆ ರೂ 17,000/- ಪರಿಹಾರ:

ಖುಷ್ಕಿ ಬೆಳೆಹಾನಿ 8,500/- ಸಾವಿರ ಪರಿಹಾರದಂತೆ ಹಾಗೂ ಎನ್.ಡಿ.ಆರ್.ಎಫ್. ಮಾರ್ಗಸೂಚಿ 8,500/- ಸಾವಿರ ಸೇರಿಸಿ ಒಟ್ಟು 17 ಸಾವಿರ ಪರಿಹಾರ ನೀಡಲಾಗುತ್ತಿದೆ. ನೀರಾವರಿ ಬೆಳೆಹಾನಿಗೆ 21,500/- ರೂಪಾಯಿ ಪರಿಹಾರ. ಇನ್ನೂ ಅನೇಕ ಕಡೆ ಮಳೆಯಾಗುತ್ತಿದ್ದು, ಬೆಳೆಹಾನಿ ಸಮೀಕ್ಷೆ ಬಳಿಕ ಪರಿಹಾರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

Bele Hani Amount Details-ರಾಜ್ಯ ಸರಕಾರದಿಂದ ನಿಗದಿಪಡಿಸಿರುವ ಬೆಳೆ ಹಾನಿ ಮೊತ್ತ:

ಕೇಂದ್ರ ಸರಕಾರದಿಂದ NDRF ಮಾರ್ಗಸೂಚಿ ಪ್ರಕಾರ ನಿಗದಿಪಡಿಸಿದ ಬೆಳೆ ಹಾನಿ ಪರಿಹಾರದ ಜೊತೆಗೆ ರಾಜ್ಯ ಸರಕಾರದಿಂದ ಹೆಚ್ಚುವರಿಗೆ ಪರಿಹಾರದ ಜೊತೆಗೆ ಎಕರೆವಾರು ನಿಗದಿಪಡಿಸಿದ ಬೆಳೆ ಹಾನಿ ಪರಿಹಾರದ ಮೊತ್ತದ ವಿವರ ಈ ಕೆಳಗಿನ ವಿವರ ಹೀಗಿದೆ:

ಮಳೆಯಾಶ್ರಿತ ಬೆಳೆ ಹಾನಿ ಪ್ರತಿ ಎಕರೆಗೆ- ರೂ 17,000/-

ನೀರಾವರಿ ಬೆಳೆ ಹಾನಿ ಪ್ರತಿ ಎಕರೆಗೆ- ರೂ 21,000/-

Bele Samikshe-ಬೆಳೆ ಹಾನಿ ವಿತರಣೆಗೆ ಜಂಟಿ ಸಮೀಕ್ಷೆ:

ರಾಜ್ಯ ಸರಕಾರದಿಂದ ಪ್ರಸ್ತುತ ಅತೀಯಾದ ಮಳೆಯಿಂದ ಉಂಟಾಗಿರುವ ಬೆಳೆ ಹಾನಿಗೆ ರೈತರಗೆ ಪರಿಹಾರವನ್ನು ವಿತರಣೆ ಮಾಡಲು ಕಂದಾಯ ಮತ್ತು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆಯನ್ನು ಕೈಗೊಂಡು ಅರ್ಹ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಪರಿಹಾರದ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲು ರಾಜ್ಯ ಸರಕಾರ ತಿರ್ಮಾನಿಸಿದೆ.

How To Apply For Crop Loss-ರೈತರು ಬೆಳೆ ಹಾನಿ ಪರಿಹಾರ ಪಡೆಯುವುದು ಹೇಗೆ?

ಅತೀಯಾದ ಮಳೆಯಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಯು ಹಾನಿಯಾದ ಸಮಯದಲ್ಲಿ ನಿಮ್ಮ ಜಮೀನಿನ ಪಹಣಿ,ಆಧಾರ್ ಕಾರ್ಡ,ಬ್ಯಾಂಕ್ ಪಾಸ್ ಬುಕ್ ಸಮೇತ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Parihara Website-ಬೆಳೆ ಹಾನಿ ವಿತರಣೆಗೆ ಪರಿಹಾರ ತಂತ್ರಾಂಶ:

ರಾಜ್ಯ ಸರಕಾರದಿಂದ ರೈತರಿಗೆ ಬೆಳೆಹಾನಿ ಪರಿಹಾರವನ್ನು ಒದಗಿಸಲು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ರೈತರಿಗೆ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಆಗುವ ಅಕ್ರಮವನ್ನು ತಡೆಗಟ್ಟಲು ಡಿಜಿಟಲ್ ವ್ಯವಸ್ಥೆಯನ್ನು ರೂಪಿಸಲಾಗಿದ್ದು ಮೊದಲಿಗೆ ರೈತರ ಅರ್ಜಿಯನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸಿ ಬಳಿಕ ಅರ್ಹ ರೈತರಿಗೆ ಬೆಳೆ ಹಾನಿ ಪರಿಹಾರವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತದೆ.

Bele Hani Status-ಪರಿಹಾರ ತಂತ್ರಾಂಶದಲ್ಲಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿ:

ಮೊದಲಿಗೆ ಇಲ್ಲಿ ಕ್ಲಿಕ್ Bele Parihara ಮಾಡಿ ಪರಿಹಾರ(Parihara Website) ತಂತ್ರಾಂಶವನ್ನು ಭೇಟಿ ಮಾಡಬೇಕು, ಬಳಿಕ ರೈತರು ತಮ್ಮ ಆಧಾರ್ ಕಾರ್ಡ ನಂಬರ್ ಅನ್ನು ನಮೂದಿಸಿ ನಿಮ್ಮ ಬೆಳೆ ಹಾನಿ ಪರಿಹಾರದ ಅರ್ಜಿಯು ಯಾವ ಸ್ಥಿತಿಯಲ್ಲಿದೆ ಎನ್ನುವ ಮಾಹಿತಿಯನ್ನು ತಿಳಿಯಬಹುದು. ಜೊತೆಗೆ ಇದೆ ಜಾಲತಾಣದಲ್ಲಿ ಬೆಳೆ ಹಾನಿ ಪರಿಹಾರದ ಹಣ ಸಂದಾಯವಾಗಿರುವ ಮಾಹಿತಿಯನ್ನು ಸಹ ಪಡೆಯಬಹುದು.



Previous Post Next Post