ನಿಮ್ಮ ಹಳೆಯ ಇಮೇಲ್‌ಗಳನ್ನು ಸುರಕ್ಷಿತವಾಗಿ ಝೋಹೊ ಮೇಲ್‌ಗೆ ವರ್ಗಾಯಿಸುವ ಸಂಪೂರ್ಣ ಮಾಹಿತಿ

ಇದೀಗ ಅನೇಕ ಸರ್ಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳು ಜಿಮೇಲ್ (Gmail) ಬಿಟ್ಟು ದೇಶೀಯ ಇಮೇಲ್ ಸೇವೆಯಾದ ಝೋಹೊ ಮೇಲ್ (Zoho Mail) ಕಡೆಗೆ ತಿರುಗುತ್ತಿರುವುದು ಪ್ರಮುಖ ಬೆಳವಣಿಗೆಯಾಗಿದೆ. ಡಿಜಿಟಲ್ ಸ್ವಾವಲಂಬನೆಗೆ (Digital Sovereignty) ಒತ್ತು ನೀಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ವಿದೇಶಿ ಕಂಪನಿಗಳ ಸೇವೆಗಳ ಬದಲಿಗೆ ಭಾರತೀಯ ತಂತ್ರಜ್ಞಾನವನ್ನು ಬಳಸುವತ್ತ ವೇಗವಾಗಿ ಹೆಜ್ಜೆ ಇಡುತ್ತಿವೆ. ಈ ಹಿನ್ನೆಲೆಯಲ್ಲಿ, ಕೆಲವು ಇಲಾಖೆಗಳು ತಮ್ಮ ಅಧಿಕೃತ ಸಂವಹನಕ್ಕಾಗಿ ಝೋಹೊ ಮೇಲ್‌ನ್ನು ಕಡ್ಡಾಯಗೊಳಿಸಿದ್ದು, ಹಲವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬಳಕೆಯಲ್ಲಿಯೂ ಜಿಮೇಲ್‌ನಿಂದ ಝೋಹೊ ಮೇಲ್‌ಗೆ ಬದಲಾಗುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆದರೆ, ಇಂತಹ ಬದಲಾವಣೆಯ ವೇಳೆ ಒಂದು ಸಾಮಾನ್ಯ ಆತಂಕ ಬಹು ಮಂದಿ ಬಳಕೆದಾರರಲ್ಲಿ ಕಂಡುಬರುತ್ತದೆ, ನನ್ನ ಹಳೆಯ ಜಿಮೇಲ್‌ನಲ್ಲಿರುವ ಎಲ್ಲಾ ಇಮೇಲ್‌ಗಳು ಅಳಿಸಿಹೋಗುತ್ತವೆಯೇ? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಆತಂಕ ಪಡುವ ಅವಶ್ಯಕತೆ ಇಲ್ಲ ನೀವು ಸುರಕ್ಷಿತವಾಗಿ ಎಲ್ಲಾ ಇಮೇಲ್‌ಗಳನ್ನು ಝೋಹೊ ಮೇಲ್‌ಗೆ ವರ್ಗಾಯಿಸಬಹುದು.

ಇದೀಗ ಜಿಮೇಲ್‌ನಿಂದ ಝೋಹೊ ಮೇಲ್‌ಗೆ ನಿಮ್ಮ ಇಮೇಲ್‌ಗಳು, ಫೋಲ್ಡರ್‌ಗಳು ಮತ್ತು ಸಂಪರ್ಕಗಳನ್ನು ಹೇಗೆ ವರ್ಗಾಯಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

1. ಝೋಹೊ ಮೇಲ್ ಖಾತೆ ರಚನೆ:

ಮೊದಲಿಗೆ Zoho Mail ವೆಬ್‌ಸೈಟ್‌ಗೆ ಹೋಗಿ ಹೊಸ ಖಾತೆಯನ್ನು ತೆರೆದುಕೊಳ್ಳಿ.

ವೈಯಕ್ತಿಕ ಬಳಕೆಗೆ ಉಚಿತ ಯೋಜನೆ ಆಯ್ಕೆ ಮಾಡಬಹುದು.

ವ್ಯವಹಾರ ಅಥವಾ ಕಚೇರಿ ಬಳಕೆಗೆ ಕಸ್ಟಮ್ ಡೊಮೇನ್ ಹೊಂದಿದ ಪ್ಲ್ಯಾನ್ ಆಯ್ಕೆ ಮಾಡುವುದು ಒಳಿತು.

ಡೊಮೇನ್ ಸೇರಿಸಿ ಪರಿಶೀಲಿಸಿದ ನಂತರ ಬಳಕೆದಾರ ಖಾತೆಗಳನ್ನು ರಚಿಸಬಹುದು.

2. ಜಿಮೇಲ್‌ನಲ್ಲಿ IMAP ಸಕ್ರಿಯಗೊಳಿಸಿ:

ಜಿಮೇಲ್‌ನಿಂದ ಮೇಲ್‌ಗಳನ್ನು ವರ್ಗಾಯಿಸಲು ಮೊದಲು IMAP ಪ್ರೋಟೋಕಾಲ್ ಸಕ್ರಿಯಗೊಳಿಸಬೇಕು,

Gmail ಗೆ ಲಾಗಿನ್ ಮಾಡಿ.

ಎಲ್ಲಾ ಸೆಟ್ಟಿಂಗ್‌ಗಳನ್ನು ನೋಡಿ ಕ್ಲಿಕ್ ಮಾಡಿ.

Forwarding and POP/IMAP ವಿಭಾಗಕ್ಕೆ ಹೋಗಿ.

Enable IMAP ಆಯ್ಕೆ ಮಾಡಿ ಮತ್ತು ಬದಲಾವಣೆಗಳನ್ನು ಉಳಿಸಿ.

ಇದರಿಂದ ಝೋಹೊ ಮೇಲ್‌ ನಿಮ್ಮ ಜಿಮೇಲ್ ಡೇಟಾಕ್ಕೆ ಸುರಕ್ಷಿತವಾಗಿ ಪ್ರವೇಶಿಸಬಹುದು.

3. ಝೋಹೊ ಮೇಲ್‌ಗೆ ಇಮೇಲ್‌ಗಳನ್ನು ಆಮದು ಮಾಡುವುದು ಹೇಗೆ?:

Zoho Mail ನಲ್ಲಿ ಈ ಹಂತ ಅನುಸರಿಸಿ,

Settings, Import/Export ವಿಭಾಗ ತೆರೆಯಿರಿ.

Import ಆಯ್ಕೆ ಮಾಡಿ ಮತ್ತು Gmail ಲಾಗಿನ್ ಮಾಹಿತಿಯನ್ನು ನೀಡಿ.

ನೀವು ಆಮದು ಮಾಡಲು ಬಯಸುವ ಫೋಲ್ಡರ್‌ಗಳು, ಇಮೇಲ್‌ಗಳು ಹಾಗೂ ಸಂಪರ್ಕಗಳನ್ನು ಆಯ್ಕೆಮಾಡಿ.

Start Import ಮೇಲೆ ಕ್ಲಿಕ್ ಮಾಡಿ.

ಈ ಪ್ರಕ್ರಿಯೆ ಕೆಲವು ನಿಮಿಷಗಳಿಂದ ಗಂಟೆಗಳವರೆಗೆ ಸಮಯ ತೆಗೆದುಕೊಳ್ಳಬಹುದು, ಡೇಟಾ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ.

4. ಇಮೇಲ್ ಫಾರ್ವರ್ಡಿಂಗ್ ಸಕ್ರಿಯಗೊಳಿಸಿ:

ಹೊಸ ಇಮೇಲ್‌ಗಳು Gmail ಗೆ ಬಂದರೂ ಅವುಗಳನ್ನು ಝೋಹೊ ಮೇಲ್‌ನಲ್ಲಿ ಕೂಡ ಸ್ವೀಕರಿಸಲು ಈ ಕ್ರಮ ಅನುಸರಿಸಿ:

Gmail ಸೆಟ್ಟಿಂಗ್‌ಗಳಲ್ಲಿ Forwarding ವಿಭಾಗಕ್ಕೆ ಹೋಗಿ.

ಹೊಸ ಫಾರ್ವರ್ಡಿಂಗ್ ವಿಳಾಸವಾಗಿ ನಿಮ್ಮ ಝೋಹೊ ಮೇಲ್ ವಿಳಾಸವನ್ನು ಸೇರಿಸಿ.

ದೃಢೀಕರಣ ಇಮೇಲ್‌ ಮೂಲಕ ಖಚಿತಪಡಿಸಿ.

ಫಾರ್ವರ್ಡಿಂಗ್ ಸಕ್ರಿಯಗೊಳಿಸಿ.

ಝೋಹೊ ಮೇಲ್ ಎಂದರೇನು?:

ಝೋಹೊ ಮೇಲ್ (Zoho Mail) ಚೆನ್ನೈ ಮೂಲದ ಝೋಹೊ ಕಾರ್ಪೊರೇಷನ್ (Zoho Corporation) ಕಂಪನಿಯು ಅಭಿವೃದ್ಧಿಪಡಿಸಿದೆ.

1996ರಲ್ಲಿ ಶ್ರೀಧರ್ ವೆಂಬು ಮತ್ತು ಟೋನಿ ಥಾಮಸ್ ಸಂಸ್ಥಾಪಕರಾದ ಈ ಕಂಪನಿ, ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಭಾರತೀಯ ತಂತ್ರಜ್ಞಾನ ಕಂಪನಿಯಾಗಿದೆ.

ವಿಶ್ವದಾದ್ಯಂತ 130 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಝೋಹೊ, ಭಾರತದ ಡೇಟಾ ಸರ್ವರ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ, ಜಾಹೀರಾತು ಮುಕ್ತ, ಮತ್ತು ಗೌಪ್ಯತೆಯ ದೃಷ್ಟಿಯಿಂದ ಸುರಕ್ಷಿತವಾದ ಸೇವೆಗಳನ್ನು ಒದಗಿಸುತ್ತದೆ.

ಸರ್ಕಾರ ಹಾಗೂ ಕಂಪನಿಗಳ ಅಧಿಕೃತ ಸಂವಹನಕ್ಕಾಗಿ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಒಟ್ಟಾರೆಯಾಗಿ, ಡಿಜಿಟಲ್ ಪ್ರಗತಿಯ ಹಾದಿಯಲ್ಲಿ ಸ್ಥಳೀಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅಗತ್ಯ. ಜಿಮೇಲ್‌ನಿಂದ ಝೋಹೊ ಮೇಲ್‌ಗೆ ಬದಲಾವಣೆ ಕೇವಲ ಕೆಲವು ಹಂತಗಳಲ್ಲಿ ಸಾಧ್ಯವಾಗುತ್ತಿದ್ದು, ನಿಮ್ಮ ಯಾವುದೇ ಹಳೆಯ ಡೇಟಾ ನಷ್ಟವಾಗುವುದಿಲ್ಲ. ಸರ್ಕಾರದಿಂದ ಹಿಡಿದು ವೈಯಕ್ತಿಕ ಬಳಕೆದಾರರವರೆಗೆ ಅನೇಕರು ಈಗಾಗಲೇ ಈ ಬದಲಾವಣೆಯತ್ತ ಹೆಜ್ಜೆ ಇಟ್ಟಿದ್ದಾರೆ.



Previous Post Next Post