ನಿರುದ್ಯೋಗಿಗಳು ಕೆಲಸಕ್ಕಾಗಿ ಇತರ ಕಂಪನಿಯಲ್ಲಿ ಕೆಲಸಕ್ಕಾಗಿ ಹುಡುಕುತ್ತಿರುವವರು ತಮ್ಮದೇ ಅದ ಸ್ವಂತ ಉದ್ದಿಮೆಯನ್ನು ಆರಂಭಿಸಬೇಕು ಎನ್ನುವ ಕನಸನ್ನು ಹೊಂದಿರುವ ಅಭ್ಯರ್ಥಿಗಳಿಗೆ ಕೆನರಾ ಬ್ಯಾಂಕ್(Canara Bank) ಸ್ವ ಉದ್ಯೋಗ ತರಬೇತಿ ಸಂಸ್ಥೆ, ಕುಮಟಾ(Kumta) ಕೇಂದ್ರದಿಂದ ಒಂದು ಉತ್ತಮ ಗುಣಮಟ್ಟದ ಸಂಪೂರ್ಣ ವಸತಿ ಮತ್ತು ಊಟ ಸಚಿತ ಉಚಿತ 30 ದಿನದ ಬೈಕ್ ರಿಪೇರಿ ತರಬೇತಿಯನ್ನು ಆಯೋಜನೆ ಮಾಡಿದ್ದು ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ ತರಬೇತಿಯಲ್ಲಿ ಭಾಗವಹಿಸಬಹುದು.
ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಒದಗಿಸಲು ರುಡ್ ಸೆಟ್ ಸಂಸ್ಥೆ ಮತ್ತು ವಿವಿಧ ಬ್ಯಾಂಕ್ ಸಹಯೋಗದಲ್ಲಿ ಪ್ರತಿ ಜಿಲ್ಲೆಯಲ್ಲಿಯು ಸಹ ಸ್ವ-ಉದ್ಯೋಗ ತರಬೇತಿ ಕೇಂದ್ರಗಳ ಮೂಲಕ ಉಚಿತ ಕೌಶಲ್ಯ ತರಬೇತಿಗಳನ್ನು(Bike Repair) ಆಯೋಜನೆ ಮಾಡಲಾಗುತ್ತದೆ ಈ ನಿಟ್ಟಿನಲ್ಲಿ ಪ್ರಸ್ತುತ 30 ದಿನದ ಉಚಿತ ಬೈಕ್ ರಿಪೇರಿ ತರಬೇತಿಯನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಲೇಖನದಲ್ಲಿ 30 ದಿನದ ಉಚಿತ ಬೈಕ್ ರಿಪೇರಿ ತರಬೇತಿಯನ್ನು(Bike Repair Training Application) ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ತರಬೇತಿ ಪ್ರಾರಂಭವಾಗುವ ದಿನಾಂಕ ಯಾವುದು? ಇನ್ನಿತರೆ ಅವಶ್ಯಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪಿನಲ್ಲಿ ಶೇರ್ ಮಾಡಿ ಅವಶ್ಯವಿರುವವರಿಗೆ ಮಾಹಿತಿ ತಲುಪಿಸಲು ಸಹಕರಿಸಿ.
Bike Garage Business-ಬಹುಬೇಡಿಕೆಯ ಕ್ಷೇತ್ರ:
ಪ್ರಸ್ತುತ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದಿನ ಕಳೆದಂತೆ ದ್ವಿಚಕ್ರ ವಾಹನ ಖರೀದಿ ಮಾಡುವವರ ಸಂಖ್ಯೆಯು ದೊಡ್ಡ ಮಟ್ಟದಲ್ಲಿ ಏರುಗತಿಯಲ್ಲಿ ಸಾಗುತ್ತಿದ್ದು ಈ ನಿಟ್ಟಿನಲ್ಲಿ ಬೈಕ್ ರಿಪೇರಿ ಕೌಶಲ್ಯವನ್ನು ಕಲಿತವರಿಗೆ ಉತ್ತಮ ಬೇಡಿಕೆಯು ಸಹ ಸೃಷ್ಠಿಯಾಗುತ್ತಿದೆ ಪ್ರಾರಂಭಿಕ ಹಂತದಲ್ಲಿ ಇತರೆ ಬೈಕ್ ಗ್ಯಾರೇಜ್ ನಲ್ಲಿ ಕೆಲಸ ಮಾಡಿ ಬಳಿಕ ತಮ್ಮದೇ ಅದ ಸ್ವಂತ ಶಾಪ್ ಅನ್ನು ತೆರೆಯಬಹುದು.
Who Can Apply For Bike Repair Training-ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಕುಮಟಾ ಕೇಂದ್ರದಿಂದ ಪ್ರಸ್ತುತ ಅರ್ಜಿ ಆಹ್ವಾನಿಸಿರುವ 30 ದಿನದ ಉಚಿತ ಬೈಕ್ ರಿಪೇರಿ ತರಬೇತಿಯನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತೆಯನ್ನು ಹೊಂದಿರುವವರು ಅರ್ಜಿ ಸಲ್ಲಿಸಿ ತರಬೇತಿಯಲ್ಲಿ ಭಾಗವಹಿಸಬಹುದು.
ಅರ್ಜಿದಾರರು ರಾಜ್ಯದ ಖಾಯಂ ಪ್ರಜೆಯಾಗಿರಬೇಕು.
ಅರ್ಜಿದಾರರ ವಯಸ್ಸು18 ರಿಂದ 45 ವರ್ಷದ ಒಳಗಿರಬೇಕು.
ಕನ್ನಡ ಓದಲು ಮತ್ತು ಬರವಣಿಗೆ ಬರುವಂತಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯಿರುತ್ತದೆ.
ಬಿಪಿಎಲ್ ಕಾರ್ಡ ಹೊಂದಿರುವವರಿಗೆ ಪ್ರಥಮ ಆದ್ಯತೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Free Bike Repair Training Duration-ತರಬೇತಿ ಅವಧಿ:
ಉಚಿತ ಬೈಕ್ ರಿಪೇರಿ ತರಬೇತಿಯು 13 ಅಕ್ಟೋಬರ್ 2025 ರಿಂದ ಪ್ರಾರಂಭವಾಗಿ 12 ನವೆಂಬರ್ 2025ಕ್ಕೆ ಮುಗಿಯಲಿದ್ದು ಈ ತರಬೇತಿಯು ಒಟ್ಟು 30 ದಿನ ನಡೆಯಲಿದೆ.
Free Bike Repair Training Center Address-ತರಬೇತಿ ಕೇಂದ್ರದ ವಿಳಾಸ:
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ,ಕುಮಟಾ,ಉತ್ತರಕನ್ನಡ-581343
How To Apply For Bike Repair Training-ಆನ್ಲೈನ್ ನಲ್ಲಿ ನೋಂದಣಿ ಮಾಡುವುದು ಹೇಗೆ?
ಉಚಿತ ಬೈಕ್ ರಿಪೇರಿ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ತರಭೇತಿ ಆರಂಭವಾಗುವ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿದ್ದು ಇದಕ್ಕಾಗಿ ಕೆಳಗಿನ ವಿಧಾನವನ್ನು ಅನುಸರಿಸಿ.
Step-1: ಮೊದಲಿಗೆ ಇಲ್ಲಿ ಕ್ಲಿಕ್ "Free Bike Repair Training Registration" ಮಾಡಿ ಗೂಗಲ್ ಪಾರ್ಮ್ ಅನ್ನು ಭೇಟಿ ಮಾಡಿ.
Step-2: ಬಳಿಕ ಈ ಪೇಜ್ ನಲ್ಲಿ ಅವಶ್ಯವಿರುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಣಿಯನ್ನು ಮಾಡಿ.
Documents For Bike Repair Training-ತರಬೇತಿಯಲ್ಲಿ ಭಾಗವಹಿಸಲು ಅಗತ್ಯ ದಾಖಲೆಗಳು:
ನೋಂದಣಿಯನ್ನು ಮಾಡಿಕೊಂಡಿರುವ ಅಭ್ಯರ್ಥಿಗಳು ಬೈಕ್ ರಿಪೇರಿ ತರಬೇತಿ ಪ್ರಾರಂಭವಾಗುವ ದಿನದಂದು ತರಬೇತಿಯಲ್ಲಿ ಭಾಗವಹಿಸಲು ಅಗತ್ಯವಾಗಿ ತೆಗೆದುಕೊಂಡು ಹೋಗಬೇಕಾಗುವ ಅಗತ್ಯ ದಾಖಲಾತಿಗಳ ಪಟ್ಟಿ ಹೀಗಿದೆ:
ಆಧಾರ್ ಕಾರ್ಡ ಪ್ರತಿ.
ಬ್ಯಾಂಕ್ ಪಾಸ್ ಬುಕ್.
ರೇಶನ್ ಕಾರ್ಡ ಪ್ರತಿ.
ಪಾನ್ ಕಾರ್ಡ ಪ್ರತಿ.
ಅಭ್ಯರ್ಥಿಯ ನಾಲ್ಕು ಪೋಟೋ.
Bike Repair Training-ಸಂಪೂರ್ಣ ಉಚಿತ ತರಬೇತಿ:
ಬೈಕ್ ರಿಪೇರಿ ತರಬೇತಿಯು ಸಂಪೂರ್ಣ ಉಚಿತವಾಗಿದ್ದು ಇದಕ್ಕಾಗಿ ಯಾವುದೇ ಶುಲ್ಕವನ್ನು ಪಾವತಿಸುವಾಗಿಲ್ಲ ಇದಲ್ಲದೇ ತರಬೇತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ಉಚಿತವಾಗಿ ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯನ್ನು ತರಬೇತಿ ಕೇಂದ್ರದಲ್ಲೇ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Helpline-ತರಬೇತಿಯ ಕುರಿತು ಮತ್ತು ನೋಂದಣಿಗಾಗಿ ಸಂಪರ್ಕಿಸಿ- 08386-220530/ 9449860007/ 9538281989/ 9916783825/ 8880444612